ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وهو ರಾಮಚಂದ್ರ ಚರಿತಪುರಾಣಂ ಅ೦ತು ಮೂರ್ಛೆವೋಗಿ ಕಿಱಿದಾನುಂ ಬೇಗದಿಂ

    ಚ | ನಸು ಬಿಸುಪೇಱಿ ಮೆಯ್ ಮಗುಱಿ ಕೆತ್ತುವ ತಾಣಮೆ ಕೆತ್ತೆ ಮಂದಮಾ |
    ದುಸಿರ್ಗಳೆ ನಾಸಿಕಾ ಮುಕುಲದಿ೦ದಿನಿಸುಂ ಪೊಱಪೊಣ್ಮೆ ತಳ್ತು ಸಂ||
    ದಿಸಿದೆಮೆ ಬಿರ್ಜೆ ಕಣ್ಮಲರ್ಗಳುಳ್ಳಲರುತ್ತಿರೆ ಜಾನಕೀ ಯೆನು |
    ತ್ತುಸಿರ್ದುಸಿರ್ದೆೞ್ದಿನಾ ರಘುಕುಲಾಂಬರ ಚ೦ಡಮರೀಚಿ ಮೂರ್ಛಯಿo ||೧೧೭||

ಅ೦ತು ಮೂರ್ಛೆಯಿಂದೆೞ್ಚತ್ತು ಸುತ್ತಲುಂ ತೊೞಲ್ದಱಸುತ್ತುಮಡವಿಯೊಳಗನೆ ಬರುತ್ತುಮಿರ್ಪಾಗಳೊ೦ದೆಡೆಯೊಳಸು ವಿಯೋಗ ಸಂಕಟದಿಂ ಸರಂಗೆಯ್ವ ಜಟಾ ಯುವಂ ಕಂಡು ಸೀತಾಹರಣಮಿದರ್ಕೆ ಮರಣನಿಮಿತ್ತಮಾದುದೆಂದುಬ್ಬಗಂಬಟ್ಟು ಸಂಸಾರವಿಷಮ ವಿಷಾವಹಾರಮಂ ಪಂಚ ನಮಸ್ಕಾರಮನದರ್ಕೆ ಪೇೞ್ದಮರಗತಿಯ ನೆಯ್ದಿಸಿ ವೈದೇಹಿಯನಾ ವನಾ೦ತರದೊಳೆಲ್ಲಿಯುಮಱಸಿ ಕಾಣದೆ

    ಮ| ಕಳಹಂಸಾಲಸಯಾನೆಯಂ ಮೃಗಮದಾಮೋದಾಸ್ಯನಿಶ್ವಾಸೆಯಂ |
    ತಳಿರೇ ತಾವರೆಯೇ ಮದಾಳಿಕುಲಮೇ ಕರ್ನೆಯ್ದಿಲೇ ಮತ್ತಕೋ ||
    ಕಿಳಮೇ ಕಂಡಿರೆ ಪಲ್ಲವಾದರೆಯನಂಭೋಜಾಸ್ಯೆಯಂ ಭೃಂಗಕುಂ |
    ತಳೆಯಂ ಕೈರವ ನೇತ್ರೆಯಂ ಪಿಕರವಪ್ರಖ್ಯಾತೆಯಂ ಸೀತೆಯಂ || ೧೧ ||
   ಚ| ಮಲಯಜ ಗಂಧ ಬಂಧುರ ಸರೋರುಹಮಂ ದರಹಾಸ ಚಂದ್ರಿಕಾ |
   ವಿಲಸಿತ ಚಂದ್ರ ಮಂಡಲಮನಾ ರಮಣೀ ರಮಣೀಯ ಲೋಚನೋ ||
   ತ್ರ ಸಹಜ ಪ್ರಸನ್ನ ಕಮಲಾಕರಮಂ ಸ್ಮರಾಜ ರಾಜ್ಯ ಮಂ !
   ಗಲ ಮಣಿದರ್ಪಣೋಪಮಮನೋಪಳ ವಕ್ತ್ರಮನೆಲ್ಲಿ ಕಾಣೆ್ಬನೋ ||೧೧೯||
   ಕಳರುತಿ ಮತ್ತಕೋಕಿಲಮನೀಕ್ಷಣಮುತ್ಪಲಮಂ ವಿನೀಲ ಕು೦ |
   ತಳಮಳಿ ಮಾಲೆಯಂ ಕಚಭರಂ ನವಿಲಂ ನಡೆ ಹಂಸಿಯಂ ತಳ೦ ||
   ತಳಿರ್ಗಳನಾನನಂ ಕಮಲಮಂ ನಳಿತೋಳ್ ಲತೆಯಂ ಲತಾ೦ತ ಕೋ |
   ಮಳೆ ಮೞೆಗೊಂಡು ಮೆಯ್ಗರೆದು ಕಾಡುವ ಕಾರಣಮೇನೊ ಜಾನಕೀ ||೧೨೦||

ಎಂದು ಮತ್ತಮಾ ಮದಗಜ ಗಮನೆ ವನ್ಯಗಜ ಬೃಂಹಿತಕ್ಕೆ ತಲ್ಲಳಿಸಿ ತನ್ನ ತೞ್ಕೈಸಿದ ಸಲ್ಲಕೀ ನಿಕುಂಜುಮುಮನಾ ಚಕೋರ ಲೋಲ ಲೋಚನೆ ವಿಲೋಚನ ಚಂದ್ರಿಕೆಯಿನೊಸರ್ವ ಚಂದ್ರಕಾಂತ ಶಯ್ಯಾತಳದ ತಳಿರ್ವಾಸನುದಾಸೀನಂಗೆಯ್ದು ಸಮೆದ ಬಯಲಾ್ದವರೆಯೆಸಳ ಪಸೆಯಿನೆಸೆವ ತಮಾಲ ವನಮಾಲೆಯುಮನಾ ಹೇಮತಾಮರಸ ಮುಖಿ ಮುಖಸಮೀರ ಸೌರಭಕ್ಕೆಳಸಿ ಬಳಸುವಳಿಮಾಲೆಗೆ ಸುಗಿದು ಸುಯ್ಯನೋಸರಿಸಿದ ಸಪ್ತಚ್ಛದ ಷಂಡನುಮನಾ ಪೃಥುನಿತ೦ಬೆ ನಿತ೦ಬ ಭರ