ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೦ ರಾಮಚ೦ದ್ರಚರಿತಪುರಾಣಂ 11 ೧೯೮ || ಡಂಬರದಿನೆ ಬಂದುದ ನಂಬರಚರ ಬಲಮನೊಂದೆಮೆಯೊಳ್ ಕೊಂದರ್ ಖರ ದೂಷಣರಂ ಕೊ೦ದರ್ ವಿರಾಧಿತ೦ಗವನ ಪೂರ್ವ ವೃತ್ತಿಯನಿತ್ತರ್ !! ಸೆರಗಿಲ್ಲದವರ್ ಕಾರಣ ಪುರುಷರ್‌ ಪಾತಾಳಲಂಕೆಯೊಳಕ್ಕೆ ಬಂದಿರ್ದರ್ 1 ೧೯೯ || ಅನುಜ೦ ಲಕ್ಷ ಣನಗ್ರ ಜ ನನಂತ ಬಲನಪ್ಪ ರಾಮಚ೦ದ್ರಂ ಸಕಲಾ | ವನಿ ಪತಿ ತತ್ಪದ ಸೇವೆಯಿ ನನಾಕುಲಂ ತೀರ್ಗುಮಾರ ಪಗೆಯುಂ ಬಗೆಯುಂ 11 ೨೦೦ 11 ಮ | ಗರಲ ಗ್ರೀವನಹೀ೦ದ್ರನಿ೦ದು ಮೃಗಲಕ್ಷಂ ಶಂಕರಂ ನೀಲಕಂ | ಧರನೆಂದೇಳಿಸಿ ತನ್ನ ನಿರ್ಮಲ ಯಶಂ ದಿಕ್ಕಾಮಿನೀ ಮೌಕ್ತಿಕಾ 11 ಭರಣಂ ಕಾಯಲುಖಾಯಲುಂ ನೆರೆವ ಪುಣ್ಯಾತ್ಮ ಪರಾರ್ಥ ಪ್ರಿಯಂ | ಪುರುಷಾಲ್ದಾಯತನೈಕ ರತ್ನ ಕಲಶಂ ಸಾಹಿತ್ಯ ವಿದ್ಯಾಧರಂ || ೨೦೧ | ಇದು ಪರಮ ಜಿನಸಮಯ ಕುಮುದಿನೀಶರಚ್ಚಂದ್ರ ಬಾಲಚಂದ್ರ ಮುನೀಂದ್ರ ಚರಣನಖ ಕಿರಣ ಚಂದ್ರಿಕಾ ಚಕೋರ ಭಾರತಿ ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ ರಾಮಚಂದ್ರ ಚರಿತ ಪುರಾಣದೊಳ್ ಸೀತಾಹರಣ ವರ್ಣನಂ ನವಮಾಶ್ವಾಸಂ.