೨೭೨ ರಾಮಚಂದ್ರ ಚರಿತಪುರಾಣಂ ಅಂತು ಬೆಸಗೊಳ್ಳುದುಂ ರತ್ನಜಟ ಕೈಗಳಂ ಮುಗಿದು ಕಂ 1 ಸೈರದಿನಾಂ ಪೋಗುತ್ತಿರೆ ತಾರಾಪಥದೊಳ್ ಪಳಂಚಿದುದು ಕಿವಿಯಂ ಹಾ || ಹಾರವನುರಿಯೆಣ್ಣಯವೋಲ್ ದೂರಿಸೆ ಬಗೆ ಬಗೆಯೊಳೊಗೆಯೆ ಕಾರುಣ್ಯ ರಸಂ ಗ್ರ | ಕಾಮಾಂಧಂ ಕಳ್ಳು ಕೊಂಡುಯ ಸನಿದುವೆ ಪದಂ ತೋರ್ಪುದಣ್ಮುಳ್ಳವರ್ [ಸಂ | ಗ್ರಾಮಾವಷ್ಟಂಭಮಂ ಹಾ ಜನಕ ಜನಕ ಹಾ ಲಕ್ಷಣಾ ಲಕ್ಷಣಾ ಹಾ | ರಾಮಾ ರಾಮಾಯೆನುತ್ತುಂ ಜನಕಜೆ ಬಸಿಲಿಂ ಮೋದಿ ಪುಯ್ಯಲ್ಲೆ ಕೇಳ್ತಾ | ನಾಮಕ್ಕಾನೆಯಿದೆಂ ರಾವಣನೊಳಿ ಜನ ತಕ್ಕಿಂದಮಣ್ಮಣ್ಯನುತ್ತುಂ 11 ೫೮ || 11 ೫೭ || ಅ೦ತು ಮೂದಲಿಸಿ ಮುಟ್ಟಿವರ್ಪುದುಂ ಮದೀಯ ಜನಕನೊಳಾದನುಬಂಧಂ ಕಾರಣಮಾಗೆನ್ನೋಳಿಯದೆ ವಿದ್ಯಾಚೇದನ೦ಗೆಯು ರಾವಣಂ ಸೀತೆಯಂ ಲಂಕೆ ಗುಯ್ದ ನೆಂದು ಬಿನ್ನವಿಸೆ || ೫೯ 11 ಕಂ|| ರಾವಣನುಯ್ದಂ ಸೀತಾ ದೇವಿಯನೆನೆ ಕೇಳು ಮನದೊಳುಮ್ಮಳಿಸಿದನಿ || ಲ್ಲಾ ವಾರ್ತೆ ವೇಟ್ಟಿ ವಂಗೆ ಮ ಹೀವಲ್ಲಭನಿತ್ಯನಾತನ ಭಿವಾಂಛಿತಮಂ ಮೆರೆದಂ ಸೀತೆಯ ಸುದ್ದಿಯ ನಟಿಸಿದ ಖೇಚರನನನ್ವಯಾಗತ ಪದದೊಳ್ | ನಿಸಿ ಭುಜಬಲದ ಮೆಚ್ಚಿನ ನೆಅನಂ ರಾಘವನ ಮೈ ಮಗಿದು ವಿಸ್ಮಯವೇ || ೬೦ || ಅಂತು ರತ್ನಜಟಿಯ ಸಪತ್ನರಂ ಪೊಅಮಡಿಸಿ ಕಳೆದು ದೇವೋಪನೀತಪುರ ಕರಸುಮಾಡಿ ಕಿಷ್ಕಂಧಪುರಕ್ಕೆ ಬಂದು -- ಮ || ನಳ ನೀಲಾ೦ಗದ ಜಾಂಬವತ್ರಮುಖ ಸೇನಾನಾಥರುಂ ಮಂತ್ರಿ ಮ೦ ! ಡಲಮುಂ ಬಂಧುಜನಂಗಳುಂ ಬೆರಸು ಸುಗ್ರೀವಂ ನಿಜಾಸ್ಥಾನಮಂ || ಡಲದೊಳ್ ಕಿಂಕರ ಭಾವದಿಂದಿರೆ ಮೃಗೇಂದ್ರೋತ್ತುಂಗ ಪೀಠಂಗಳೊಳ್ | ಬಲನಾರಾಯಣರಿರ್ದರಪ್ರತಿಹತರ್ ಚಂದ್ರಾರ್ಕರಿರ್ಪಂದದಿಂ 1 ೬೧ ||
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೬೨
ಗೋಚರ