ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೪ ರಾಮಚಂದ್ರ ಚರಿತಪುರಾಣಂ ಅದೆಂತೆಂದೊಡೆ ದೇವ ಜಗತ್ತಿತಯನಾಥನಪ್ಪ ಪುರುಷರಮೇಶ್ವರನ ಧರ್ಮ ತೀರ್ಥ ಪ್ರವರ್ತನಾನಂತರಂ - ಕಂ| ಪಲಕಾಲಂ ಪೋಪುದುಮಾ ಕುಲದೊಳ್ ಕೇಯೂರದಂತೆ ರಂಜಿಸೆ ದೊರ್ನ೦ || ಡಲದೊಳ್ ತಳೆದಂ ಭೂಮಂ ಡಲಮಂ ತ್ರಿದಶ೦ಜಯಂ ಜಯಶ್ರೀ ರಮಣಂ || ೬೮ 11, ಕಡುನೀತಿ ಕಳಾವಿಭವಂ ಬಡೆದಾ ಭೂಭುಜನೋಳಗ್ರ ಮಹಿಷಿ ಪದಮಂ || ಪಡೆದು ಗುಣಾಬ್ಬಿಗೆ ಹೆರ್ಚ೦ ಪಡೆದಿಳೆಯೊಳ್ ಚಂದ್ರಲೇಖೆವೆರಂ ಪಡೆದ 11 ೬೯ 11 ಜಿತಶತ್ರು ವಿಜಯಸಾಗರ ಸುತರ್ಕಳ೦ ಚಂದ್ರಲೇಖೆ ಚಂದ್ರಾದಿತ್ಯ | ಪ್ರತಿಮರಂದ್ರಿಯವೋಲ ಪ್ರತಿಮ ಪ್ರಭರಂ ಪ್ರಸಿದ್ದರಂ ವಧು ಪಡೆದ || ೭೦ || ಆ ಸುತರ್ಗನುಕ್ರಮದಿಂ ಪೌದನಪುರವರೇಶ್ವರನಪ್ಪ -- ಕ೦ 11 ಭುಜಸಖನಾ ನಂದ ಮಹೀ ಭುಜ೦ಗಮ೦ಭೋಜಮಾಲೆಗಂ ಪುಟ್ಟ ದವರ್‌ ! ವಿಜಯೆ ಸುಮ೦ಗಳೆಯೆಂಬರ್ ವಿಜಿತಾಮರ ಕನೈಯರ್ಕಳರಸಿಯರಾದರ್ 11 ೭೧ || ಆ ತ್ರಿದಶ೦ಜಯ ಮಹೀಭುಜಂ ಪಲಕಾಲಮರಸುಗೆಯು ವಿಷಯ ವೈರಾಗ್ಯ ಪರನಾಗಿ -- ಮ || ನಿಜಪುತ್ರಂ ಜಿತಶತ್ರುಗಪ್ರತಿಮಮಂ' ಸಾಮ್ರಾಜ್ಯವುಂ ಕೊಟ್ಟು ಭೂ | ಭುಜ ರತ್ನಂ ತ್ರಿದಶ೦ಜಯಂ ತಳೆದಿಳಾ ಪೂಜ್ಯಂ ತಪೋರಾಜ್ಯಮಂ !! ನಿಜಕರ್ಮಾರಿಗಳಂ ಕುಬೇರಗಿರಿಯೊಳ್ ಬೆಂಕೊಂಡು ಮುಕ್ಕಂಗನಾ | ಭುಜ ಪಾಶಕ್ಕೊಳಗಾಗಿ ಪೀರ್ದನೊಲವಿಂ ತದ್ವಕ್ಕೆ ಪೀಯೂಷಮಂ || ೭೨ ॥ ಶಾ ! ಮತ್ತಿತ್ತಲ್ ಜಿತಶತ್ರುವೆಂಬ ಹೆಸರಾಯ್ತನ್ವರ್ಥಮೆಂಬನ್ನಮು | ದ್ವತ್ತಾರಾತಿಗಳಂ ಭಯಂಗೊಳಿಸಿ ಕಪ್ಪಂಗೊಂಡು ಕೈಯಾ೦ತವ || ರ್ಗೆಂ ಬೇಟ್ಟುದನಿತ್ತು ಮಾಲ್ಪನೆ ಭುಜೋತ್ಪಾತಾಸಿ ಧಾರಾ೦ಬುವಿ೦ | ದಿತ್ತಂ ಶ್ರೀವಧುಗಂ ಜಯಪ್ರಮದೆಗಂ ವಾರ್ಮಾನುಷಿ ಜನ್ಮವಂ || ೭೩ ||