ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وف ರಾಮಚ೦ದ್ರಚರಿತಪುರಾಣಂ ಕಂ ॥ ಧವಲಚ್ಚ ತ್ರಚ್ಛಾಯೆಯಿ| ನವನೀ ಚಕ್ರಕ್ಕೆ ಚಂಡಕರ ತಾಸಂ ಸಂ | ಭವಿಸದೆನೆ ತನ್ನ ಜಸದಿಂ ಧವಳಿಸಿದಂ ಧವಳಕೀರ್ತಿ ದಿಗ್ವಿತಿಗಳಂ 11 ೧೦೮ || ಅ೦ತಾತಂ ಲ೦ಕೆಯನಾಳುತ್ತುಮಿರೆ ಮತ್ತಿತ್ತ ವಿಜಯಾರ್ಧಗಿರಿಯ ದಕ್ಷಿಣ ಶ್ರೇಣಿಯ ಮೇಘಪುರದ ವಿಯಚ್ಚರೇ೦ದ್ರನತೀ೦ದ್ರನೆ೦ಬ೦ ನಿಜ ತನೂಜನಪ್ಪ ಶ್ರೀಕಂಠ ಕುಮಾರನಿ೦ ಕಿ ಜಯ ದೇವಿಲೆಯಂ ರತ್ನ ಪುರದ ಪೂರೋತ್ರಂ ತನ್ನ ಮಗಂ ಪುಷೋತ್ತರಂಗೆ ಬೇಡೆ ಕುಡದೆ-- ಕಂ ! ದೇವಿಲೆಯಂ ಲಾವಣ್ಯ ರ ಸಾವಿಲೆಯಂ ಧವಳಕೀರ್ತಿಗುತ್ಸವ ತೂರಾ !! ರಾವಂ ಗಗನೋದರಮಂ ತೀವುವಿನಂ ಚಂದ್ರಮುಖಿಯನಿತ್ತನತೀ೦ದ್ರಂ || ೧೦೯ || ಆತನ ತನೂಭವಂ ಶ್ರೀಕಂಠಕುಮಾರನೊರ್ಮೆ ಮ೦ದರ ಕಂದರಕ್ಕೆ ಜಿನ ವಂದನಾನಿಮಿತ್ತಂ ಪೋಗಿ ರತ್ನ ಪುರದ ಮೇಗನೆ ಮೇಘಪುರಕ್ಕೆ ಬರ್ಪ ಸಮಯದೊಳ್ ಪುಷೋತ್ತರನ ತಂಗೆ ಪದ್ಯೋತ್ತರೆ ತನ್ನ ಚೆಂಬೊನ್ನ ಕನ್ನೆವಾಡದೊಳ್ ಸುಸ್ವರದಿಂ ಪಾಡುತ್ತು ಮಿರ್ಪುದು ಮಸ! ಜಿತ ಭಂಗೀಝಂಕೃತಂ ನಿರ್ಜಿತ ಮದನ ಧನುರ್ಜಾಲತಾ ಟಂಕೃತಂ ತ | ರ್ಜಿತ ವೀಣಾ ಶಿಂಜಿತಂ ಭಂಜಿತ ರತಿ ರಮಣೀ ರತ್ನ ಕಾಂಚೀ ಪ್ರಸಾದಂ || ಶ್ರುತಿಯಂ ತಟಸ ರೋಮೋದ್ಧ ತಿಯೊಡನೆ ಗತಿಸ್ತಂಭನಂ ಖೇಚರಾಧೀ | ಶ ತನೂಜ೦ಗಿತ್ತು ದಾ ಕನ್ನಿಕೆಯ ಮಧುರ ಸಪ್ತಸ್ವರೋತ್ತಾನ ಗಾನ೦11 ೧೧೦ || || ೧೧೧ || ಕ೦ || ಸ್ವರ ಮಂತ್ರ ದೇವತಾ ನೂ ಪುರ ರವಮೆನೆ ಕಿವಿಯನೆಮ್ಮೆ ಕನ್ನಾ ಕಲಕಂ || ಠ ರವಂ ಶ್ರೀಕಂಠಂ ರಾ ಗ ರಸೋತ್ಕಂಠಂ ಪ್ರತಿಷ್ಠೆಯೊಳ್ ಪಾಡದಂ ಅಂತಾತಂ ಗೋರಿಯ ಮೃಗದಂತೆಳಸಿ ಬರ್ಪುದುಂ ಕಂ|| ನೋಡಲೊಡಮಾ ಕುಮಾರನ ಗಾಡಿಗೆ ಕಣ್ಣೆಲ್ಲ ಕನ್ನೆಯ ಮನಸಿಜನೇ ||