ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨೮೫ ಸಾಡಿದನೆಡೆವಡೆದೆನೆ ಪರ ಸೀಡಾಕರರೇಕೆ ಬಾಧೆವಡಿಸದೆ ಮಾರ್ || ೧೧೨ || ಅ೦ತು ವಶಮಾದ ಕನ್ನೆ ಯನಶಂಕಿತ ಲಂಕೆಗುಯ್ದು ಧವಳಕೀರ್ತಿಯ ಕೆಲ ದೊಳಿರ್ಪುದುಮದಂ ಪುಷೋತ್ತರನ ಜರಿದು ಚ || ಎರೆದೊಡೆ ಕನ್ನೆಯಂ ಕುಡದೆ ಮುನ್ನೆ ನಗೆನ್ನನುಜಾತೆಯಂ ಕುಲಾ | ಚರಣವನೇನುಮಂ ಬಗೆಯದನ್ನು ಮನೇಳಿಸಿಕೊಂಡು ಪೋದನೆ೦ || ಬೆರಡತೊಳಂ ಮನಕ್ಕೆ ಮುನಿಸಿರ್ಮಡಿದಳೋಸೆ ಲಂಕೆಗೆ ದಂ | ಧರೆ ಕಿ ಆದೀ ವರೂಥಿನಿಗೆನಲ್ ವಿಲಯಾಂತಕನಂತೆ ಖೇಚರಂ || ೧೧೩ || ಅ೦ತು ಮೇಲೆತ್ತಿ ಬರ್ಪುದುಂ ಧವಳಕೀರ್ತಿ ನಯಾನುವರ್ತಿ ಮುನ್ನ ಸಾಮಮ ನೊಡರ್ಚಿಮೆಂದು ನಿಜಮಹತ್ತರರ ಪುಷೋತ್ತರನಲ್ಲಿಗಟ್ಟುವುದುಮವರ್‌ ಬಂದು ಕಂಡುಪಾಯನಪುರಸ್ಪರಮಿ೦ತೆ೦ದರ್ ಮ! ಪ್ರ|| ಅನುರೂಪಂ ಕನ್ನೆ ಗೀತಂ ಕುಲ ಭುಜಬಲ ವಿದ್ಯಾಬಲಿ ಖ್ಯಾತ ನಿನ್ನ೦ || ಗೆ ನಿರಾಲೋಚ೦ ಕುಡಲ್ವೆಟ್ಟುದು ಯುವತಿಯನನ್ನೋನ್ಯ ಸಂಪ್ರೀತಿಯಿಂದಾ|| ಹೈನುಬಂಧಂ ರಾಗದಿಂದಿವರ್ಗ ಮದುವೆಯಂ ಮಾಲ್ಪುದೆಂದಟ್ಟಿ ದಂ ನಿ! ಮ್ಮನುಜನ್ಮಂ ನಿಮ್ಮನ೦ ಬಯಸಿ ಪದೆಪಿನಿಂದೆಮ್ಮ ವಿದ್ಯಾಧರೇಂದ್ರ೦ ೧೧೪॥ ಎನೆ ಮನದೆ ಕೊಂಡು ನಿರುತ್ತರ೦ ಪುಷೋತ್ತರನೊಡಂಬಟ್ಟು ಮಗು ಪೋಪುದುಂ ಶುಭದಿನ ಮುಹೂರ್ತದೊಳ್ ಪದ್ಯೋತ್ಸರೆಯಂ ಶ್ರೀಕಂಠಂಗೆ ಮದುವೆ ಮಾಡಿ ಮತ್ತೊಂದು ದಿನಂ ಶ್ರೀಕಂಠನಂ ನಿನಗೆ ವಿಜಯಾರ್ಧ ಮಹೀಧರದೊಳ ಹಿತರೊಡಗೂಡಿ ರ್ಪುದು ನೀತಿಯಲ್ಲ ದಜನನೇಕ ದ್ವೀಪ ಮುಖ್ಯಮಪ್ಪ ವಾನರದ್ವೀಪ ದೊಳೆನ್ನ ಸವಿಾಪದೊಳಿರ್ಪುದೆನೆ ಮನದೆ ಕೊ೦ಡು ತದ್ದಿಪನಿರೀಕ್ಷಣನಿಮಿತ್ತಂ ಬರುತ್ತು ಮೊಂದೆಡೆಯೊಳ್ ವಾನರಂಗಳಂ ಕಂಡವಂ ತರಿಸಿಕೊಂಡು ಕಿಕ್ಕಿಂಧ ಗಿರಿಯಮೇಲೆ ಪದಿನಾಲ್ಕು ಯೋಜನದ ವಿಸ್ತಾರದ ಪೊಲೀಲಂ ಮಾಡಿ ಕಿಕ್ಕಿಂಧಪುರ ಮೆಂದು ಹೆಸರನ್ನಿಟ್ಟು ಆ ಪುರದೊಳ್ ಪಲಕಾಲಂ ರಾಜ್ಯಂಗೆಯ್ಯುತ್ತು ಮಿರ್ದೊಂದು ದಿವಸಂ ನಂದೀಶ್ವರಪೂಜೆಗಚ್ಚು ತೇ೦ದ್ರನೊಡನೆ ಪೋಗುತ್ತುಂ ಮಾನುಷೋತ್ತರ ದ್ವೀಪದಿನತ್ತ ಮನುಷ್ಯರ್ಗೆ ಸಲವಿಲ್ಲಪ್ಪುದ ಅ೦ ನಿಜವಿಮಾನಂ ಪೋಗದಿರೆ ಮಗುಟ್ಟು ಬಂದದುವೆ ನಿರ್ವಗಕಾರಣಮಾಗೆ ತನ್ನ ಮಗಂ ವಜ್ರಕಂಠಂಗೆ ರಾಜ್ಯ ಮಂ ಕೊಟ್ಟು ತಪಂಬಟ್ಟು 1. ಯುಡುಗದೆ. ಗ.