ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨t4 ಕಂ | ಪ್ರಥಿತ ಪೃಥುಭುಜ ಸಹಾಯಂ ಮಥಿಯಿಸಿ ರಿಪುಬಲಮನಾಜಿಯೊಳ್ ಪೂರ್ಣ ಮನೋ | ರಥನಿದಿರ್ಗೊಳೆ ಪೌರಜನಂ ರಥನೂಪುರಚಕ್ರವಾಳಪುರಮಂ ಪೊಕ್ಕಂ || ೧೩೭ ೧ ಅಂತು ಗೆಲ್ಲಂಗೊಂಡು ಯಕ್ಷಪುರಮನಾಳ್ವ ವಿಶ್ವಾವಸುಗಂ ರೋಹಿಣಿಗಂ ಪುಟ್ಟಿದ ವೈಶ್ರವಣಂಗೆ ಲೋಕಪಾಲವೆಸರ ಪಟ್ಟಮಂ ಕಟ್ಟಿ ಲಂಕೆಯಂ ಕೊಟ್ಟು ಯಮಧರನೆಂಬ ವಿದ್ಯಾಧರಂಗೆ ಲೋಕಪಾಲವೆಸರನಿತ್ತು ಕಿಷ್ಕಂಧಪುರಮಂ ಕೊಟ್ಟು ಮತ್ತಂ ತನ್ನನಿಂದ್ರನಾಗಿ ಭಾವಿಸಿ ಸುಖಮಿರ್ಪುದುಮಿತ್ತಲ್ ಕಂ || ಪಾತಾಳಲಂಕೆಯೊಳ್ ಸಂ ಪ್ರೀತಿ ಪೊದರೆ ಸುಮಾಲಿ ಖೇಚರ ಸತಿಗಂ || ಪ್ರೀತಿಮತಿಗಂ ಜಗದ್ವಿ ಖ್ಯಾತಂ ರತ್ನ ಶ್ರವಂ ತನೂಭವನಾದಂ || ೧೩೮ || ಆತನತಿ ಪ್ರಖ್ಯಾತನಾಗಿ ಪುಷೋತ್ತರವೆಂಬ ಮಹಾಗಹನದೊಳ್ ವಿದ್ಯೆಗಳಂ ಸಾಧಿಸಿ ಸಿದ್ದ ಪರಮೇಷ್ಠಿಗಳಂ ಸ್ತುತಿಯಿಸುತ್ತಿರ್ಸ ಸಮಯದೊಳ್ ಕೌತುಕಮಂಗಳ ಪುರಮನಾಳ್ವಂ ಮೈಮಭಾನುವೆಂಬಂ ಮೈಮಚರಂ ನಿಜ ತನೂಜೆಯಪ್ಪ ಕೈ ಕಸಿ ಯೆಂಬ ಕನ್ಯಾರತ್ನಮಂ ದಿವ್ಯಮುನಿಮುಖ್ಯರಾದೇಶದಿಂ ತನಗೆ ತಂದು ಕುಡು ವುದುಮಲ್ಲಿಯೆ ವಿದ್ಯೆಯಿಂ ಪುಷ್ಟೋತ್ತರವೆಂಬ ಪೋಲಂ ಮಾಡಿಸಿ ಪಿತೃಮಾತೃ ಗಳಂ ಬರಿಸಿ ಶುಭದಿನ ಮುಹೂರ್ತದೊಳಾಕೆಯಂ ಮದುವೆನಿಂದು ನಿರಂತರೋತ್ಸವ ದಿನಿರ್ಪುದುಮೊಂದು ದಿವಸವಾ ಕೈಕಸಿ ಚತುರ್ಥಸ್ನಾನಾನಂತರಂ ನಿಜಮನೋ ವಲ್ಲಭನ ಸೂಟ ವಂದು ಕ೦ 11 ಹರಿಯಂ ಹಿಮಕರನಂ ಖರ ಕರನಂ ಬೆಳಗಪ್ಪ ಜಾವದೊಳ್ ಕನಸಿನೊಳಾ || ಹರಿಣಾಕ್ಷಿ ಕಂಡು ಗೃಹವನ ಮರಾಳ ಸಾರಸ ರವ೦ಗಳಿ೦ದೆ ತಳ್ಳಿ || ೧೩ | ಅಂತುಪ್ಪವಡಿಸಿ ತನ್ನ ಕಂಡ ಕನಸುಗಳನನುಕ್ರಮಂದಪ್ಪದ ಪುವುದುಮ | ಭರತಾರ್ಧಕ್ಕಧಿರಾಜನಪ್ಪ ಸುತನಂ ಪೆತ್ತ ಪೈ ತನ್ವಂಗಿ ಕೇ | ಸರಿಯಂ ಕಂಡುದರಿಂ ಕಲಾಕುಶಲನಂ ತತ್ವಜ್ಞನಂ ಪೆತ್ತ ಪೈ || ಹರಿಣೀಲೋಚನೆ ನಿಶ್ಚಯಂ ಕನಸಿನೊಳ್ ಶೀತಾಂಶುವಂ ಬಾಲ ಭಾ | ಸ್ಮರನಂ ಕಂಡುದರಿಂದಮಂದಿಯ ಪೇಟ್ಟಿ೦ ತತೃಲಪ್ರಾಪ್ತಿಯಂ॥ ೧೪೦ ||