ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

34

ಪ೦ಪ ರಾಮಾಯಣದ ಕಥೆ

ಬಂದು ಮಣಿಮಯಾಸನಗಳಲ್ಲಿ ಕುಳಿತುಕೊಂಡರು. ಶ್ರೀಮಾಲೆಯು ಮನ್ಮಥ ರೂಪನಾದ ಕಿಕ್ಕಿಂಧನಿಗೆ ಮಾಲೆಯನ್ನು ಹಾಕಲು ಆಹವ ಸಿ೦ಹನಾದ ವಿಜಯ ಸಿಂಹನು ಕಾಳೆಗದ್ದುದ್ಯುಕ್ತನಾದನು. ಆಗ ಅ೦ಧ್ರಕ ಸುಕೇಶರು ಕಿಕ್ಕಿಂಧ ನನ್ನೂ ಶ್ರೀಮಾಲೆಯನ್ನೂ ಕಿಷ್ಕಂಧಪುರಕ್ಕೆ ಕಳುಹಿಸಿ ವಿಜಯಸಿಂಹನೊಡನೆ ಕಾದಿ ಅವನನ್ನು ಕೊಂದರು. ಅಶನಿವೇಗನು ತನ್ನ ಮಗನ ಸಾವನ್ನು ಕೇಳಿ ವ್ಯಸನದಿಂದಲೂ ಕೋಪದಿಂದಲೂ ಗಗನಮಾರ್ಗದಲ್ಲಿ ಬಂದು ಕಿಷ್ಕಂಧಪುರವನ್ನು ಮುತ್ತಿ ಅಂಧಕನನ್ನು ಕೊಲ್ಲಲು ಕಿಷ್ಕಂಧ ಸುಕೇಶರು ಬಹಳ ಭಯಪಟ್ಟು ಪಾತಾಳ ಲಂಕೆಯನ್ನು ಸೇರಿದರು. ಅಶನಿವೇಗನು ಸುಕೇಶನ ರಾಜಧಾನಿಯಾದ ಲಂಕೆ ಯನ್ನು ನಿರ್ಘಾತನೆ೦ಬುವನಿಗೆ ಕೊಟ್ಟು ತನ್ನ ರಾಜಧಾನಿಗೆ ಹೋಗಿ, ಸಾಮ್ರಾಜ್ಯ ತೃಸ್ಥೆಯು ಕರಗಿ ಹೋಗಲು, ತನ್ನ ಮಗನಾದ ಸಹಸ್ರಾರನಿಗೆ ಪಟ್ಟವನ್ನು ಕಟ್ಟಿ ಜಿನೇಂದ್ರಮುನಿ ರೂಪವನ್ನು ತಾಳಿದನು.
ಇತ್ತ, ಕಿಷ್ಕಂಧನು ಮಧುಪರ್ವತದ ಮೇಲೆ ಪುರವನ್ನು ಕಟ್ಟಿ ಶ್ರೀಮಾಲೆ ಯೊಡನೆ ಸುಖದಿಂದಿರುತ್ತ ಋಕ್ಷಜ ಸೂರಜರೆಂಬ ಗಂಡುಮಕ್ಕಳನ್ನೂ ಸೂರ ಮಾಲೆಯೆಂಬ ಮಗಳನ್ನೂ ಪಡೆದನು. ಆಕೆಯನ್ನು ಮೇಘ ಪುರದೊಡೆಯನಾದ ಮೇರುವಿನ ಮಗನಾದ ಸಿಂಹಮರ್ದನನು ಮದುವೆಮಾಡಿಕೊಂಡು ಕರ್ಣಪರ್ವತ ದಲ್ಲಿ ಕರ್ಣಕುಂಡಲವೆಂಬ ಪುರವನ್ನು ಕಟ್ಟಿಕೊಂಡು ಸುಖವಾಗಿದ್ದನು. ಸುಕೇಶನಿಗೆ ಮಾಲಿ ಸುಮಾಲಿ ಮಾಲ್ಯವಂತರೆಂಬ ಮಕ್ಕಳು ಹುಟ್ಟ ಪ್ರಾಪ್ತ ವಯಸ್ಕರಾಗಿ ಸಕಲ ವಿದ್ಯೆಗಳನ್ನೂ ಸಾಧಿಸಿ ಅವಾಕ್ಯವೀರರಾದುದರಿಂದ ಮೆಚ್ಚಿದ ದೆಸೆಯಲ್ಲಿ ಮೆಚ್ಚಿದಂತೆ ಕ್ರೀಡಿಸುತ್ತಿರಲು 'ಸುಕೇಶನು ಅವರನ್ನು ಕರೆದು ದಕ್ಷಿಣ ಸಮುದ್ರಕ್ಕೆ ಹೋಗಬೇಡಿ ರೆನ್ನಲು ಅವರು ಅದಕ್ಕೆ ಕಾರಣವೇನೆಂದು ಕೇಳಿದರು. ಅದಕ್ಕೆ ಸುಕೇಶನು ತೋಯದವಾಹನನಿಂದ ಅನ್ವಯಾಗತವಾಗಿ ತಮಗೆ ಬಂದ ಲಂಕಾಪುರವನ್ನು ಅಶನಿವೇಗನು ಕಿತ್ತುಕೊಂಡು ನಿರ್ಘಾತನಿಗೆ ಕೊಟ್ಟನೆಂದೂ ಅವನು ಅನೇಕ ವಿದ್ಯೆಗಳಿಂದ ಅದನ್ನು ಪುಗಲು ಯಾರಿಗೂ ಸಾಧ್ಯವಾಗದಂತೆ ಕಾಪುಮಾಡಿ ಬಲಿಷ್ಟನಾಗಿರುವನೆಂದೂ ಅವನು ಅವರನ್ನು ಕಂಡರೆ ಕೊಲ್ಲುವನೆಂದೂ ಎಚ್ಚರಿಕೆ ಹೇಳಿದೆನೆಂದು ತಿಳಿಸಿದನು. ಅದಕ್ಕೆ ಅವರು ಕೋಪಗೊಂಡು ಅಸಂಖ್ಯಾತ ಬಲ ಸಮೇತರಾಗಿ ಹೊರಟು ಆಕಾಶಮಾರ್ಗದಿಂದ ಬಂದು ಲಂಕೆಯನ್ನು ಮುತ್ತಿ ನಿರ್ಘಾತನನ್ನು ಕೊಂದು ಲಂಕಾಪುರವನ್ನು ಸ್ವಾಧೀನಪಡಿಸಿಕೊಂಡು ತಾಯಿತಂದೆ ಗಳನ್ನು ಅಲ್ಲಿಗೆ ಕರೆತರಿಸಿ ಸುಖದಿಂದಿದ್ದರು. ಹೀಗೆ ಕೆಲವು ಕಾಲವು ಕಳೆಯಲು ಸುಕೇಶನು ಮಕ್ಕಳಿಗೆ ರಾಜ್ಯವನ್ನಿತ್ತು ಕಿಷ್ಕಂಧನೊಡಗೂಡಿ ತಪಸ್ಥನಾದನು.
ಅತ್ತ, ರಥನೂಪುರಚಕ್ರವಾಳಪುರವನ್ನಾಳುವ ಸಹಸ್ರಾರನ ಪಟ್ಟದರಸಿಗೆ ಎಳವಸಿರಿನಲ್ಲಿ ಇಂದ್ರನ ಏಭೂತಿಯನ್ನು ನೋಡುವ ಬಯಕೆ ಹುಟ್ಟಲು ಸಹಸ್ರಾರ