ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪರಾಮಾಯಣದ ಕಥೆ

35

ನು ವಿದ್ಯೆಯಿಂದ ಆ ವಿಭೂತಿಯನ್ನು ತೋರಿಸಿ ಬಯಕೆಯನ್ನು ತೀರಿಸಲು ನವ ಮಾಸ ಪೂರ್ತಿಯಾದ ಮೇಲೆ ಆಕೆಯು ಗಂಡು ಮಗನನ್ನು ಹೆತ್ತಳು. ಆ ಕೂಸಿಗೆ ಸಹಸ್ರಾರನು ತಾಯಿಯ ಬಯಕೆಯ ಕಾರಣದಿಂದ ಇಂದ್ರನೆಂದು ನಾಮಕರಣ ಮಾಡಿದನು. ಆ ಹುಡುಗನು ಕಾಲಕ್ರಮವಾಗಿ ಬೆಳೆದು ಸಕಲ ವಿದ್ಯೆಗಳನ್ನೂ ಕಲಿತು ಬಹಳ ಪರಾಕ್ರಮಿಯಾಗಿ ಸಕಲಚಕ್ರವರ್ತಿ ಪದವನ್ನು ಪಡೆದು ತನ್ನ ಪಟ್ಟಣವನ್ನು ಸ್ವರ್ಗವೆಂದೂ, ತನ್ನ ಖಚರ ಕಾಂತೆಯರನ್ನು ರಂಭೆ ಊರ್ವಶಿ ಮೊದಲಾದ ದೇವಕಾ೦ತೆಯರೆಂದೂ, ತನ್ನ ವಾರಣವನ್ನು ಐರಾವಣವೆಂದೂ, ತನ್ನ ಮಂತ್ರಿಮುಖ್ಯನನ್ನು ಬೃಹಸ್ಪತಿಯೆಂದೂ ಮೊದಲಾಗಿ ಕರೆದು ತಾನೇ ಇಂದ್ರನೆಂದು ಭಾವಿಸಿ ಸುಖವನ್ನನುಭವಿಸುತ್ತಿದ್ದನು.
ಇತ್ತ, ನಾಲಿಗೆ ಕಪ್ಪವನ್ನು ಕೊಡುತ್ತಿದ್ದ ಖಚರರು ಇಂದ್ರನನ್ನು ಹೊಂದಿ ಮಾಲಿಯನ್ನು ತಿರಸ್ಕರಿಸಲು ಆತನು ಬಹಳ ಕೋಪಗೊಂಡು ಇಂದ್ರನನ್ನು ನಿರ್ಮೂಲಮಾಡುವುದಕ್ಕಾಗಿ ಸುಮಾಲಿ ಮಾಲ್ಯವಂತ ಋಕ್ಷಜ ಸೂರ್ಯಜ ರೊಡಗೂಡಿ ಅಸಂಖ್ಯಾತ ಸೇನಾಸಮೇತನಾಗಿ ಬರುವುದನ್ನು ಕೇಳಿ ಇಂದ್ರನು ಅವರನ್ನಡ ಗಟ್ಟಿ ಮಹಾಯುದ್ಧವನ್ನು ಮಾಡಿ ಮಾಲಿಯನ್ನು ಕೊಂದನು ; ಮಿಕ್ಕವರು ಓಡಿ ಹೋಗಿ ಪಾತಾಳಲಂಕೆಯನ್ನು ಸೇರಿದರು. ಇಂದ್ರನು ತನ್ನ ಪಟ್ಟಣಕ್ಕೆ ಬಂದು ಲಂಕೆಯನ್ನು ವೈಶ್ರವಣನಿಗೂ ಕಿಷ್ಕಂಧ ಪುರವನ್ನು ಯಮಧರನಿಗೂ ಕೊಟ್ಟ ತಾನು ಇಂದ್ರನಂತೆ ಸುಖವಾಗಿದ್ದನು.
ಪಾತಾಳಲಂಕೆಯಲ್ಲಿ ಸುಮಾಲಿಗೆ ಜಗದ್ವಿಖ್ಯಾತನಾಗುವ ರತ್ನ ಶ್ರವನೆಂಬ ಮಗನು ಹುಟ್ಟಿದನು. ಆತನು ಅತಿ ಪ್ರಖ್ಯಾತನಾಗಿ ವಿದ್ಯೆಗಳನ್ನು ಸಾಧಿಸಿ ಸಿದ್ದ ಪರಮೇಷ್ಠಿಗಳನ್ನು ಸ್ತುತಿಸುತ್ತಿದ್ದ ಕಾಲದಲ್ಲಿ ಪ್ರೋಮಭಾನುವೆಂಬ ವಿಯಚ್ಚರ ನು ತನ್ನ ಮಗಳಾದ ಕೈಕಸಿಯೆಂಬ ಕನ್ಯಾರತ್ನವನ್ನು ದಿವ್ಯ ಮುನಿಮುಖ್ಯರ ಆದೇಶದಿಂದ ಆತನಿಗೆ ಕೊಡಲು, ಅಲ್ಲಿಯೇ ವಿದ್ಯೆಯಿಂದ ಪುಷೋತ್ತರವೆಂಬ ಪುರ ವನ್ನು ಮಾಡಿಸಿ ತಾಯಿ ತಂದೆಗಳನ್ನು ಅಲ್ಲಿಗೆ ಬರಿಸಿ ಶುಭ ಮುಹೂರ್ತ ದಲ್ಲಿ ಕೈಕಸಿಯನ್ನು ಮದುವೆನಿಂದು ನಿರ೦ತರೋತ್ಸವದಲ್ಲಿದ್ದನು. ಕೈಕಸಿಯು ಕಾಲಕ್ರಮದಲ್ಲಿ ಗರ್ಭವನ್ನು ಧರಿಸಿ ಬಹು ಪರಾಕ್ರಮಿಯಾಗುವ ಮಗನನ್ನು ಹೆತ್ತಳು. ಹತ್ತನೆಯ ದಿನ ಭೀಮನೆಂಬ ರಾಕ್ಷಸನು ಕೊಟ್ಟ ನವಮುಖ ರತ್ನ ಭೂಷಣದ ಮಾಣಿಕಗಳಲ್ಲಿ ಕೂಸಿನ ಮುಖವು ಪ್ರತಿಬಿಂಬಿಸಲು ಆ ಮಗುವಿಗೆ ದಶ ಮುಖನೆಂಬ ಹೆಸರನ್ನಿಟ್ಟರು. ಕೈಕಸಿಯು ಅನುಕ್ರಮವಾಗಿ ಭಾನುಕರ್ಣ ಚಂದ್ರನಖಿ ವಿಭೀಷಣರೆಂಬ ಮೂವರು ಮಕ್ಕಳನ್ನು ಹೆತ್ತಳು. ಮೂವರು ಗಂಡುಮಕ್ಕಳೂ ಬಾಲ್ಯವನ್ನತಿಕ್ರಮಿಸಿ ಪ್ರಭುಮಂತ್ರೋತ್ಸಾಹ ಶಕ್ತಿತ್ರಯವೇ ಮೂರ್ತಿಗೊಂಡಂತೆ ಅಖಿಲ ಶಾಸ್ತ್ರ ಪಾರಂಗತರಾದರು.