ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪರಾಮಾಯಣದ ಕಥೆ

37

ದರಿಯು ಮೊದಲು ಇಂದಗಿಯನ್ನೂ ಬಳಿಕ ಮೇಘವಾಹನನನ್ನೂ ಶತ್ರು೦ದರನನ್ನೂ ಹೆತ್ತಳು.
ತನ್ನ ಪಿತಾಮಹನಾದ ವಾಲಿಯನ್ನು ಕೊಂದು ತಮಗೆ ಅನ್ವಯಾಗತವಾಗಿ ಬಂದ ಲಂಕೆಯನ್ನು ಕಿತ್ತುಕೊಂಡವನನ್ನಿಕ್ಕಿದ ಹೊರತು ತನ್ನ ಬಾಹುವೀರಕ್ಕೆ ಸಾರ್ಥಕ್ಯ ಉಂಟಾಗಲಾರದೆಂದೆಣಿಸಿ ದಶಾನನನು ಮುಳಿದು ಲಂಕೆಯನ್ನು ಮುತ್ತಿ ಕಾದಿ ವೈಶ್ರವಣನನ್ನು ಮೂರ್ಛ ಹೊಂದುವಂತೆ ಹೊಡೆದು ತನ್ನ ಪಟ್ಟಣಕ್ಕೆ ಹಿಂದಿರು ಗಿದನು. ವೈಶ್ರವಣನು ಮೂರ್ಛ ತಿಳಿದು, ಸೋತುಹೋದುದರಿಂದ ವೈರಾಗ್ಯ ಪರ ನಾಗಿ, ಜೈನದೀಕ್ಷೆಯನ್ನು ಕೈಕೊಂಡನು. ರಾವಣನು ಸಕಲ ರಾಜರನ್ನೂ ಸೋಲಿಸಿ ಕಪ್ಪವನ್ನು ಪಡೆದು ಕೈಲಾಸ ನಗದ ಸಮ್ಮೇದ ಗಿರಿಯ ನಡುವಣ ಸುರದಾರು ವನೋಪಕಂಠದಲ್ಲಿ ಬೀಡನ್ನು ಬಿಟ್ಟಿರಲು ಅಲ್ಲಿಗೆ ವಾನರಧ್ವಜಾನುಚರನೊಬ್ಬನು ಬಂದು “ ದೇವ! ಸೂರಜನೂ ಋಕ್ಷಜನೂ ನಿನ್ನಾಜ್ಞೆಯನ್ನು ಪಡೆದು ಪಾತಾಳಲಂಕೆ ಯಿಂದ ಹೊರಟು ನಿಜಾಯಾಗತವಾದ ಕಿಷ್ಕಂಧ ಪುರವನ್ನು ಕೊಳ್ಳಲೆಂದು ಮುತ್ತಿ ಕಾಡುತ್ತಿರುವಲ್ಲಿ ಯಮರಾಜನು ಋಕ್ಷಜನನ್ನು ಸೆರೆಹಿಡಿದು ಸೂರ್ಯಜ ನನ್ನು ಗಾಯಪಡಿಸಿದನು” ಎಂದು ಹೇಳಲು ದಶವದನನು ಅದನ್ನು ಕೇಳಿ ಸೈರಿಸದೆ ಕಿಷ್ಕಂಧಪುರಕ್ಕೆ ಹೋಗಿ ಅದನ್ನು ಮುತ್ತಿ ಯಮನನ್ನು ಸೋಲಿಸಲು ಅವನು ಅ೦ಜಿ ತನ್ನ ಪತಿಯಾದ ಇಂದ್ರನನ್ನು ಕಂಡು ದಶಮುಖನ ಪರಾಕ್ರಮವನ್ನು ತಿಳಿಸಿದನು. ಅದಕ್ಕೆ ಅವನು ದಶವದನನ ಮೇಲೆ ದಂಡೆತ್ತಿ ಬರಬೇಕೆಂದಿರುವಲ್ಲಿ ಅವನ ಮಂತ್ರಿಮುಖ್ಯರು ಬೇಡವೆಂದು ಅವನನ್ನೊಡಂಬಡಿಸಲು ಯಮನಿಗೆ ಸುರ ಸಂಗೀತಕ ಪುರವನ್ನು ಕೊಟ್ಟು ವಿಷಯಾಸಕ್ತನಾಗಿ ಮೈ ಮರೆದಿದ್ದನು. ದಶಮುಖನು ಋಕ್ಷಜ ಸೂರಜರಿಗೆ ಕಿಷ್ಕಂಧ ಪುರವನ್ನು ಕೊಟ್ಟು ತಾಯಿ ತಂದೆ ಅಜ್ಜಂದಿ ರೊಡನೆ ಪುಷ್ಪಕ ವಿಮಾನಾರೂಢನಾಗಿ ನಿಜಾನ್ಸ ಯಾಗತವಾದ ಲಂಕೆಯನ್ನು ಮಹಾವೈಭವದಿಂದ ಹೊಕ್ಕು ಸುಖದಿಂದಿದ್ದನು.
ಹೀಗಿರುವಲ್ಲಿ, ಸೂರ್ಯಜನ ಅರಸಿಯು ಲೋಕೋತ್ತರರೆನಿಸುವ ವಾಲಿ ಸುಗ್ರೀವರನ್ನೂ ಶ್ರೀಪ್ರಭೆಯನ್ನೂ ಋಕ್ಷಜನ ಅರಸಿಯು ನಳ ನೀಲರನ್ನೂ ಯಥಾ ಕ್ರಮವಾಗಿ ಪಡೆದರು. ಕೆಲವು ಕಾಲ ಕಳೆದ ಮೇಲೆ ವಾಲಿ ಸುಗ್ರೀವರನು ಅಧಿರಾಜ ಯುವರಾಜ ಪದವಿಯಲ್ಲಿ ನಿಲ್ಲಿಸಿ ಸೂರಜನು ದೀಕ್ಷೆಗೊಂಡನು. ಇತ್ತ, ದಶಶಿರನು ಲ೦ಕೆಯಲ್ಲಿಲ್ಲದ ಸಮಯದಲ್ಲಿ ಖರನು ಲಂಕಾಪುರವನ್ನು ಹೊಕ್ಕು ಚ೦ದ್ರನಖಿಯನ್ನು ಕದ್ದುಕೊಂಡು ಹೋಗಿ, ರಾವಣನಿಗವಿಧೇಯನಾಗಿದ್ದ ಚಂದ್ರೋದರನನ್ನು ಕೊಂದು ಪಾತಾಳಲ೦ಕೆಯನ್ನು ಸ್ವಾಧೀನ ಮಾಡಿಕೊಂಡು ಸುಖದಿಂದಿದ್ದನು. ರಾವಣನು ಲಂಕೆಗೆ ಬಂದು, ತನ್ನ ಭಯವು ಸ್ವಲ್ಪವೂ ಇಲ್ಲದೆ ತನ್ನ ತಂಗಿಯನ್ನು ಕದ್ದುಕೊಂಡು ಹೋದುದಕ್ಕಾಗಿ ಬಹಳ ಕೋಪಗೊಂಡು,