ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

38

ಪ೦ಪರಾಮಾಯಣದ ಕಥೆ

ಖರನಿಗೆ ತಕ್ಕದ್ದನ್ನು ಮಾಡುವೆನೆಂದು ಗರ್ಜಿಸಲು ಮಂಡೋದರಿಯು ಅವನನ್ನು ಸಮಾಧಾನವಾಡಿ ಖರನು ರಾವಣನಿಗವಿಧೇಯನಾಗಿದ್ದ ಚಂದ್ರೋದರನನ್ನು ಕೊಂದಿರುವನೆ೦ದೂ ಅ೦ಥವನನ್ನು ಕೊಂದು ತಂಗಿಯನ್ನು ವಿಧವೆಯನ್ನಾಗಿ ಮಾಡುವುದು ಸರಿಯಲ್ಲವೆಂದೂ ಹೇಳಲು ರಾವಣನು ಅದಕ್ಕೊಪ್ಪಿ ಸುಮ್ಮನಾದನು. ಗರ್ಭಿಣಿಯಾಗಿದ್ದ ಚಂದ್ರೋದರನ ಪತ್ನಿಯಾದ ಅನುರಾಧೆಯು ಗಂಡು ಮಗು ವನ್ನು ಹೆತ್ತು, ಇವನು ಗರ್ಭದೊಳಿರುವಾಗ ಹಗೆಗಳಿಂದ ತೊಂದರೆ' ಪಟ್ಟದ್ದ ಕ್ಕಾಗಿ ಅವನಿಗೆ ವಿರಾಧಿತನೆಂದು ಹೆಸರಿಟ್ಟಳು. ಅವನು ಅನುಕ್ರಮವಾಗಿ ಬಳೆದು ಹಗೆಯನ್ನು ಸಾಧಿಸುವ ಉಪಾಯವನ್ನು ಮಾಡುತ್ತಿದ್ದನು.
ಜಿನಾಗಮ ಕೋವಿದನಾದ ವಾಲಿಯು ಜೈನಮುನಿಗಲ್ಲದೆ ಮತ್ತೊಬ್ಬರಿಗೆ ಕೈಮುಗಿಯೆನೆಂದು ನಿಯಮಸ್ಸನಾಗಿ ಸುಖದಿಂದಿರುವಲ್ಲಿ, ಒಂದು ದಿನ ಆತನ ತಂಗಿಯಾದ ಶ್ರೀ ಪ್ರಭೆಯನ್ನು ತನಗೆ ಮದುವೆ ಮಾಡಿಕೊಡುವಂತೆ ರಾವಣನು ಓಲೆ ಯನ್ನು ಬರೆದು ಕಳುಹಿಸಿದನು. ಇದನ್ನು ನೋಡಿ ವಾಲಿಯು ಸುಗ್ರೀವನೊಡಗೂಡಿ ಮಂತ್ರಶಾಲೆಯನ್ನು ಹೊಕ್ಕು ಮಂತ್ರಿಮಂಡಲವನ್ನೂ ಆಪ್ತಜನರನ್ನೂ ಬರಿಸಿ ದುರ್ಮಾರ್ಗಿಯೂ ಮದಾಂಧನೂ ಆದ ರಾವಣನಿಗೆ ತಂಗಿಯನ್ನು ಕೊಟ್ಟರೆ ಇಹದಲ್ಲಿ ಕೇಡೂ ಪರದಲ್ಲಿ ಪಾತಕವೂ ಉಂಟಾಗುವುದೆಂದು ಹೇಳಿ ಅವನಿಗೆ ಕೂಸನ್ನು ಕೊಟ್ಟಲ್ಲಿ ಅವನಿಗೆ ನಮಸ್ಕಾರ ಮಾಡಬೇಕಾಗುವುದೆಂದೂ, ಹಾಗೆ ಮಾಡಿದಲ್ಲಿ ತನ್ನ ವ್ರತವು ಕೆಡುವುದೆಂದೂ, ಕೊಡದೆ ಯುದ್ಧಕ್ಕೆ ನಿಂತಲ್ಲಿ ಬಹುಕಾಲದಿಂದ ಬಂದ ರಾಕ್ಷಸ ವಾನರ ವಂಶಗಳ ಸ್ನೇಹವು ತನ್ನಿಂದ ನಾಶವಾಗುವು ದೆಂದೂ ನಾನಾ ವಿಧವಾಗಿ ಆಲೋಚನೆ ಮಾಡಿ ಪಾಪಕ್ಕೂ ನಿಂದೆಗೂ ಎಡೆ ಗೊಡದ ತಪಸ್ಸನ್ನು ಮಾಡುವುದಕ್ಕೆ ನಿಂತಲ್ಲಿ ತನ್ನ ಕುಲವೂ ಚಲವೂ ವ್ರತವೂ ಕೆಡದೆ ನಡೆಯುವುದೆಂದು ನಿಶ್ಚಯಿಸಿ ಸುಗ್ರೀವನಿಗೆ ರಾಜ್ಯವನ್ನು ಕೊಟ್ಟು ತಪಸ್ಸಿಗೆ ಹೋದನು. ಸುಗ್ರೀವನು ತಂಗಿಯನ್ನು ರಾವಣನಿಗೆ ಪಾಣಿಗ್ರಹಣ ಮಾಡಿಕೊಟ್ಟು ಸುಖದಿಂದಿದ್ದನು.
ರಾವಣನು ನಿತ್ಯಾಲೋಕನೆಂಬ ವಿದ್ಯಾಧರನ ಮಗಳಾದ ರತ್ನಾವಳಿಯನ್ನು ಮದುವೆ ಮಾಡಿಕೊಂಡು ಹಿಂದಕ್ಕೆ ಬರುತ್ತಿದ್ದ ಸಮಯದಲ್ಲಿ ಕೈಲಾಸದ ಮೇಲಣ ತಪ್ಪಲಲ್ಲಿದ್ದ ಮಹಾಮುನಿಯ ಮೇಲೆ ತನ್ನ ವಿಮಾನವು ನಡೆಯದೆ ನಿಲ್ಲಲು ವಿಸ್ಮಯ ಪಟ್ಟು, ಅವಲೋಕಿನೀ ವಿದ್ಯೆಯಿಂದ ವಾಲಿದೇವನೆಂದರಿತು, ತನ್ನ ಮೇಲಣ ಮುನಿಸಿ ನಿಂದ ತನ್ನ ವಿಮಾನವನ್ನು ಹಾಗೆ ನಿಲ್ಲಿಸಿದನೆಂದು ತಿಳಿದು, ಆ ಪರ್ವತವನ್ನು ಕಿತ್ತು ತೆಗೆದುಕೊಂಡು ಹೋಗಿ ಸಮುದ್ರದಲ್ಲಿ ಹಾಕುವೆನೆಂದಾಲೋಚಿಸಿ ವಿಮಾನ ದಿಂದ ಭೂಮಿಗೆ ಬಂದು ರಸಾತಳಕ್ಕಿಳಿದು ಆ ನಗದ ಬುಡವನ್ನು ಸೇರಿ ಸಾವಿರ ವಿದ್ಯೆಗಳಿಂದಲೂ ವಿಕುರ್ವಿಸಿದ ಅನೇಕ ಭುಜಗಳಿಂದಲೂ ಕೈಲಾಸವನ್ನೆತ್ತಲು