ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸಂ ಆ೪೫ ಮ !! ಸಮರ ಕೋಣಿಯನೆಮ್ಮೆ ರಾವಣ ಶಿರಂಗಳ್ ತೀವಿ ತಟ್ಟೋಯ್ದ ನು | ಕ್ರಮದಿಂ ಪುಂಜಿಸಿ ರೌದ್ರಮಾದುವು ಸುಮಿತ್ರಾಪುತ್ರ ಬಾಣಾಸನಾ | ಶ್ರಮದೊಳ್ ವಿಶ್ರಮಿಸಿರ್ಪ ಯೋಗಿನಿ 'ಜಯ ಶ್ರೀವಿಶ್ರುತಾಕಾಶ ಲಿಂ ಗಮನಾರಕ್ತ ಸರೋಜ ಸಂತತಿಗಳಿಂದಭ್ಯರ್ಚನಂಗೆಯ್ದ ವೋಲ್ || ೧೭೦ || ಅಂತಗುರ್ವಾಗೆ ಬಿಗುರ್ವಿಸಿ ಕಾದುವಲ್ಲಿ ರಾವಣನ ತಲೆಗೆ ನೆಲನುಮಾಕಾ ಶಮುಮಡೆನೆಯದೆನೆ ತ೦ದೊಟ್ಟೆ ರಾವಣಂ ಬಹುರೂಪಿಣೀ ವಿದ್ಯೆಯನುಣಿದು ಮುಳಿಸನುಲಿಯ ಚಂದ್ರಹಾಸದಿನಿಆತಿಯ ಲಕ್ಷಣಂ ಸೂರಹಾಸದಿನದರ್ಕೆ ಭಂಗಮನೊಡರ್ಚೆ ಕೆರ್ಚೆ ಅಣದ ಕೋಪದಿಂ ಮನ೦ಬೆರ್ಚಿ ಮ || ದೊಣೆಯಿಂದ ತೆಗೆಯಲೆ ಮರ್ವು ನಭಮಂ ಸರ್ವಿತ್ತು ದಿವ್ಯಾಸ್ತಮಂ || ಗೊಣೆಯಕ್ಕುಯ್ಯಲೋಡಂ ದಿನಾಧಿಪನ ತೇಜಂ ಪಿಂಗಿಪೋದತ್ತು ರಾ | ವಣನೇಸಾಡಿದೊಡಾಯ್ತು ರಾತ್ರಿ ಸಮಯಂ ಸಹನಾಸ್ತ್ರಕ್ಕೆ ಲ | ಕ್ಷಣ ವೀರಂ ಪ್ರತಿಕಾರ ಮಂತ್ರ ವಿಕಲಂ ವಿಭ್ರಾಂತನಾಗಿರ್ಪಿನಂ || ೧೭೧ || ಅನ್ನೆಗಮಿತ್ತ ಚಂದ್ರವರ್ಧನ ವಿಯಚ್ಚರೇಂದ್ರನ ಮಗಳಿರೆರ್ ಕನ್ನೆಯರ್ ಮಣಿಮಯ ವಿತಾನ ವಿರಾಜಮಾನ ವಿಮಾನಾರೂಢಿಯರ್ ವಿಯನ್ಮಾರ್ಗದಿಂ ಬಂದು ಲಕ್ಷಣನಂ ನೋಡುತ್ತುಮಿರೆ ದೇವಾಪ್ಪರೋಗಣಿಕೆಯರಾಕೆಗಳಂ ನೀಮಾ ರ್ಗೆನಿಮಿತ್ತ ಮಿಲ್ಲಿಗೆ ಬಂದಿರೆಂದು ಬೆಸಗೊಳ್ಳುದುಮವರಿಂತೆಂದರ್ ಸೀತಾಸ್ವಯಂ ವರಕ್ಕೆ ಮದೀಯ ಜನಕನೊಡಗೊಂಡು ಪೋಗಿ ಲಕ್ಷ್ಮಣನ ಕಂಡು ಮನದೆ ಕೊಂಡೊಮ್ಮನೀತಂಗೆ ಕೊಟ್ಟೆನೆಂಬುದುಮೆಮಗೀತನೆ ಪುರುಷನನ್ನು ದಜಿನೀತನನು ವರವೆಂತಾದಪುದೆಂಬುದಂ ನೋಡಲ್ ಬಂದೆವೆನೆ ಲಕ್ಷ್ಮಣನಾ ಮಾತಂ ಕೇಳಾಕೆ ಗಳನಳ್ಳ ರ್ತು ನೋಟ್ಟು ದುಮವರ್‌ ಸಮಯೋಚಿತಮನಅದು ಸಮ್ಮೋಹನ ಶರ ಶಕ್ತಿಯನೀ ಮಂತ್ರದಿಂ ಕಿಡಿಸೆಂದುಚ್ಚರಿಸುವುದುಮಾ ಮಂತ್ರದಿನಭಿಮಂತ್ರಿಸಿಚ ॥ ಶರಧಿಯನುರ್ಚೆ ಸಿಂಗಿದುದು ಭೋಂಕನೆ ಕತ್ತಲೆ ದಿವ್ಯ ಬಾಣಮಂ | ತರೆ ತಿರುವಿಂಗೆ ತೀವ್ರ ಕಿರಣಂ ತಲೆದೊಆದನಾರ್ದು ಪಂಕಜೋ !! ದರನಿಗೆ ರಾತ್ರಿ ಪಿಂಗಿ ಪಗಲಪುದುಮಾದುದು ಸಂತಸ ಸುರಾ | ಸುರರ್ಗವಲೋಕಿಸಲ್ ಪಡೆದೆವೆಂದವರಿರ್ವರ ದೋರ್ವಲಂಗಳಂ ೧೭೨ || ಅಂತು ಸಮ್ಮೋಹನಾಸ್ತ್ರಂ ಕೂರ್ಪುಗಿಡೆ ಪೊಡರ್ಪುಗಿಡದೆ ರಾವಣಂ ವಿಘ್ನ ವಿನಾಯಕಾಸ್ತ್ರದಿಂದಿಸುವುದುಮದಂ ಲಕ್ಷಣಂ ಸಿದ್ದಾರ್ಥ ವಿದ್ಯಾಶಿಲೀಮುಖದಿಂ ಪರಾಲ್ಕುಖಂಮಾಟ್ಟು ದುಂ 1: ಚಯ, ಗ ಘ ಚ.