ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೬ ರಾಮಚಂದ್ರಚರಿತಪುರಾಣಂ ಕಂ || ಎನಿತಂ ಕೊ೦ಡಾಡುವ ನೀ ತನ ಮಸಕಮನೀಗಳಿ೦ತೆ 'ಕಿಡಿಸುವೆನೆಂದಾ | ದನುಜೇ೦ದ್ರಂ ರೋಷ ಹುತಾ ಶನನೆರ್ದೆಯೊಳ್ ತಿಣ್ಣಮುರಿಯೆ ಕಿಡಿಕಿಡಿವೋದಂ || ೧೭೩ || ಅ೦ತತಿ ಪ್ರಬಲ ಕಲುಷ ವಶಗತನಾಗಿ ಮ | ಪರಚಕ್ರ ಕ್ಷಯ ಕಾಲಚಕ್ರಮೆನಿಸಿರ್ದಾತ್ಮೀಯ ಚಕ್ರಕ್ಕೆ ಖೇ || ಚರ ಚಕ್ರೇಶ್ವರನುಯ್ಕೆ ಕೈಯನದು ತೇಜಶ್ಚ ಕ್ರದಿಂ ಕೋಟಿ ಭಾ | ಸ್ವರಚಕ್ರ ಪ್ರಭೆಯಂ ಪಳಂಚಲೆದು ಕೈಗೆಝಂದು ಲೋಕೈಕ ಭೀ | ಕರನಾಟ೦ದುದು ನೀಲ ಮೇಘ ನಿಕಟ ಪ್ರಸ್ಥಾರ ದಂಭೋಳಿವೋಲ್ ||೧೭೪|| ಅಂತು ವೀರಪುರುಷ ರತ್ನನೆನಿಪ ರಾವಣನ ಕೈಗೆ ಚಕ್ರರತ್ನಂ ಬರ್ಪುದುಮದಂ ಲಕ್ಷಣಂ ಕೋವರ ಚಕ್ರಮಂ ಬಗೆವಂತೆ ಬಗೆದುಉ || ಭೇದಿಸೆನೀ ದಶಾನನನ ಚಕ್ರಮುನೀತನ ಕಂಠ ನಾಳಮಂ | ಛೇದಿಸಿ ತೋರ್ಪೆನೆನ್ನ ಭುಜ ವೀರಮನೆಂದು ಕಡಂಗಿ ವಿಕ್ರಮಾ || ಸಾದಿತ ವಿಶ್ವ ಲೋಕ ವಿಜಯಂ ಕುಲಿಶಾಸ್ತ್ರದ ಪಿಳು ನಾರಿಯೊಳ್ | ಕೋದು ಕದಂಪನೆಯೇ ಧನುವಂ ತೆಗೆದರ್ವಿಸಿದ ಜನಾರ್ದನಂ || ೧೭೫ ! ಮ||! ಕಡಿಖಂಡಂಮಾಡುವೆ೦ ಚಕ್ರಮನೆಡೆಯೊಳೆನುತ್ತುಂ ಧನುರ್ದಂಡಮಂ ಜೇ। ವೊಡೆಗೆಟ್ಟು ಗ್ರಾಮ೦ ಸಂಧಿಸಿ ತಿರುವಿನೊಳಾಲೀಡದೊಳ್ ನಿಂದು ಕೋಲು!! ಕಡೆಗಣ್ಣುಂ ಕೈಯುಮಿಂಬಾಗಿರೆ ತೆಗೆನೆಜತೆದವ್ಯಗ್ರನೇಕಾಗ್ರ ಚಿತ್ತಂ । ಬಡೆದಿರ್ದ೦ ಚಂದ್ರ ಚೂಡಂ ತ್ರಿಪುರಮನಿಸಲೆಂದಿರ್ದವೋಲ್ ರಾಮ ಚಂದ್ರಂ || ೧೭೬ ೧ ಉ | ದಂಡಧರಂಬೊಲಿರ್ದನಭಿವೀಕ್ಷಿಸುತುಂ ಶತ ಖಂಡಮಪ್ಪಿನಂ || ಖಂಡಿಸುವೆಂ ವಿಯಚ್ಚರನನಚ್ಚಿನ ಚಕ್ರಮನೆಂದು ಘನಾ | ರಂಡಲಿ ಗಂಡ ಮಂಡಲದಿನಲ್ಲುಗೆ ಲೋಹಿತ ಲೋಚನಂ ಪ್ರಭಾ | ಮಂಡಲನೆ ಚ೦ಡ ಭುಜದಂಡ ವಿಮಂಡಿತ ಮಂಡಲಾಗ್ರಮಂ || ೧೭೭ || ಕಂ ॥ ಇಡೆ ದಶವದನನ ಚಕ್ರದ ಪೊಡರ್ಸನಾಂ ಕಿಡಿಹೆನೆಂದು ಶೂಲಾಯುಧನಂ || ಪಿಡಿದೆತ್ತಿ ಸೂಸೆ ಕಣ್ಣಳ್ ಕಿಡಿಯಂ ಭೈರವನವೋಲ್ ವಿಭೀಷಣನಿರ್ದ೦ | ೧೭೮ 1: ನೆರ ಪುವೆ. ಗ ಘ ಚ