ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ ಚತುರ್ದಶಾಶ್ವಾಸಂ ಕಂದಿವಿಜ ಭವನಕ್ಕೆ ಹಾ ದಾ ನವೇ೦ದ್ರ ನೀನತಿಥಿಯಾದೆ ತುಡುವವರಿನ್ನಾರ್ | ನವ ಮುಖಭೂಷಣಮಂ ಸೈ ರ ವಿಹಾರದಿನೇಹವನ್ನರಾರ್ ಪುಷ್ಪ ಕಮಂ || ೧೯ | ಉ || ಅತ್ತ ಸುರಾಸುರರ್ ನೆರೆದು ಬೊಬ್ಬಿಡೆ ನೀ೦ ಕಿ ಜುಗುಂಡನೆತ್ತುವಂ; ತೆತ್ತಿದ ಬನ್ನಮಂ ಬಗೆಗೆ ತಂದು ಕುಬೇರ ಗಿರೀ೦ದ್ರಮಾರ್ಸ್ಯೆ ಮೆ | ಮೈರೆ ನಿರ್ಝರಚ್ಚಲದಿನೋಕುಳಿಯಾಡುವಿನ ದಶಾಸ್ಯ ದೇ ! ವೋತ್ತಮ ಕಾಮಿನೀಜನದ ತೋಳ್ವಲೆಯೊಳ್ ತೊಡರಿ ತಕ್ಕುದೇ ll ೨೦೦ !! ಎತ್ತು ವಿನಂ ಮಹೋತ್ಸವ ಪತಾಕೆಗಳುತ್ಸವ ತೂರ ನಿಸ್ವನ'! ಬಿತ್ತರಿಪನ್ನಮಂತಕನ ಬಾರಿಗೆ ಸೋವತವಾದೆ ದೇವ ದು || ರ್ವೃತ್ರ ವಿರೋಧಿ ನಿರ್ದಲನ ಕಾಳೆಗದೊಳ್ ಪಿಡಿಪೆತ್ತ ಸತ್ತ ಬೆ | ನಿತ ವಿರೋಧಿ ಭೂಭುಜರ ಖೇಚರ ರಾಜರ ರಾಜಧಾನಿಯೊಳ್ || ೨೦೧ || ಎ೦ದತಿ ಪ್ರಲಾಪಂಗೆಯ್ಯುತ್ತುಂ ರಾವಣನ ಚರಣೋಪಾಂತದೋಳ್ ಮೆಯ್ಯ ನೀಡಾಡಿ ಹಾಹಾ ದಶಾಸ್ಯ ಕೀರ್ತಿ ವಲ್ಲರೀ ವಲಯಿತ ದಿಶಾಸ್ತ್ರ ಹಾಹಾ ವಿಲಾಸ ಮಕರ ಧ್ವಜ ಖೇಚರಕುಲ ಧ್ವಜ ಹಾಹಾ ತ್ರಿಲೋಕ ವಿಜಯಸ್ತಂಭ ಜಯಶ್ರೀ ಸಾಲ ಭಂಜಿಕಾ ರಂಜಿತ ಭುಜಸ್ತಂಭ ಹಾಹಾ ದುರ್ವಾರ ದೈತ್ಯ ದರ್ಪ ವಿಧ್ವಂಸ ಸರಸ್ವತೀ ಕರ್ಣಾವತಂಸ ಹಾಹಾ ರಿಪು ನೃಪತಿ ಕಟಕ ವಿಟಸಿ ಕುಠಾರ ಖಚರ ಕಾಮಿನೀ ಪಯೋಧರ ಮಧ್ಯ ರಾಜಿತ ತರಳ ತಾರಹಾರ ಹಾಹಾ ವನಿತಾ ' ಯೌವನವನ ವಸಂತ ಅನವರತ ಚತುದ್ವಿಧ ಪುರುಷಾರ್ಥ ಚಿಂತಿತ ಸ್ವಾಂತ ನಿನ್ನ೦ತಃಪುರದ ಕಾಂತಾಜನದ ಕದ೦ಪಿನೊಳ್ ಮೃಗಮದ ಪತ್ರಲೇಖೆಯಂ ಬರೆಯಲುಂ ಬಾಹು ಲತೆಯೊಳ್ ಸಿಂಡುಗಂಕಣಮನೇಜಿಸಲ೦ ಘನ ಸೈನಮಂಡಲದೊಳ್ ಮಲಯ ರುಹ ಚರ್ಚೆಯನೊಡರ್ಚಲು ನಿತಂಬ ಬಿಂಬದೊಳ್ ನೂಲ ತೊಂಗಲನೊಡ ರ್ಚಲು ಪದ ಪ್ರಯೋಜದೊಳ್ ಮಣಿ ನೂಪು ರಮನಳವಡಿಸಲುಮತಿ ಪರಿಚಯದಿ ನಲಸಿದಂತೆ ದಿವಿಜ ಕಾಂತಾಸ೦ಭೋಗ ಲೀಲಾಲಸನಾಗಿ ಕಂ || ದಿಗಿಭಕ್ಕೆ ಕುಲಾದ್ರಿಗೆ ಪ ಆಗ ಪತಿಗತಿ ಭಾರಮಾಗೆ ಭೂಭಾರಮನೇ || ಕೆ ಗಡಂ ನೀನೊಪ್ಪಿಸಿ ವ ಜಿಗೆ ತಲ್ಲಳವಾಗೆ ದಿನಕೆ ದಾಳಿಯನಿಟ್ಟಿ, 11 ೨೦೨ ||