ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫೨ ರಾಮಚಂದ್ರಚರಿತಪುರಾಣಂ ಎಂದು ಬಹುವಿಧದಿಂ ಪಳವಿಸುವ ಪೌಲಸ್ತನ ಕುಲಸ್ತ್ರೀಯರಂ ಕಂಡು ರಾಮ ಸ್ವಾಮಿ ಕರುಣಿಸಿ ರಾವಣಂಗಿ ಮರಣಮಿಾತನ ದುರ್ವ್ಯಸನದಿಂದಾದುದಲ್ಲದೆ ದಾದುದಲ್ಲಾ ರ್ಗಾದೊಡಂ ಸಂಸಾರ ಸ್ವರೂಪಮಿಂತುಟಿ ವಲಮಾರ ಜೀವನಮುಂ ಜವ್ವನಮುಂ ಧನ ಧಾನ್ಯ ಮುನಿಷ್ಟ ಸಂಯೋಗಮುಂ ಕ್ಷಣದೆ ನಶ್ವರಂಗಳದ೦ ದವರ್ಗಲದಲಸದೆ ಸೈರಿಸುವುದೆಂದವರುಮಂ ವಿಭೀಷಣನುಮ೦ ಸಂತಯಿಸಿ-- ಕಂ || ಬವರಂಗೆಯಾ ತಂಗಾ ಯವಸಾನಂ ತಕ್ಕುದಲ್ಲು ಪಗೆಗೊಳ್ಳುದು ಮಿ | ಕವರೊಳ್ ನಮಗೆಂದಂ ರಾ ಘವಂಗೆ ಸಚ್ಚರಿತದೆಸಕಮೊಂದಚ್ಚರಿಯೇ || ೨೦೩ || ಎ೦ದು ತಾನುಂ ಲಕ್ಷಣನುಮಾನೆಯನೇ ಆ ಸಲದ ಸಾಮಂತರ್ ಬಳಸಿ ಬರೆ ಮಂಡೋದರಿಯ ಸಮಾಪಕ್ಕೆ ಬಂದಾಕೆಯ ಶೋಕಮಂ ಸಂಸಾರ ಸ್ವರೂಪ ಮಂ ಪೇಯ್ದು ಪಿಂಗಿಸಿ ಬಲಿಯಂ ಕರ್ಪೂರಾಗರು ಗೋಶೀರ್ಷ ಚಂದನಾದಿಗಳಿಂ ರಾವಣನಂ ಯಥಾವಿಧಿಯಿಂ ಸಂಸ್ಕರಿಸಿ ತದನಂತರಮಂದಗಿ ಮೇಘವಾಹನ ಕುಂಭ ಕರ್ಣ ಮಯ ಮಾರೀಚಾದಿಗಳಂ ಬರಿಸಿ ಸೆಜತೆಯಂ ಬಿಡಿಸಿ ಪಲತೆಆದಿನವರ ಶೋಕ ಮನುಪಶಮಿಯಿಸಿ ಕಂ || ರಾವಣನೊರ್ವನೆ ಕದಂ ನೀವಿನಿಬರುವ ೨೦ ವಿಭೀಷಣನೊಳ್ ಸ || ದ್ಯಾವಮನೆ ಮೆರೆದು ಖಚರ ಶ್ರೀ ವಿಭವಮನೆಂದಿನಂದದಿಂದನುಭವಿಸಿ || ೨೦೪ || ಎಂಬುದುಂ ಕುಂಭಕರ್ಣಾದಿಗಳ ರಾಮಲಕ್ಷ್ಮಣರ ನಿಷ್ಕಷಾಯತ್ವಮುಮಂ ಸಂಸಾರ ಭೀರುತ್ವಮುಮಂ ಧೈರಮುಮಂ ಬಾಹುವೀರಮುಮಂ ಮೆಚ್ಚಿ ಪೊಗ ಅಲ್ಲಿ ನಮಗೆ ಸಂಸಾರ ಸುಖಂ ಸಾಲ್ಕು ಮೆಂದು ಭೋಗ ನಿರ್ವೆಗ ಪರರಾಗಿ ನುಡಿದು ರಾಮಲಕ್ಷಣರ್ವೆರಸು ಪದ್ಮಸರೋವರದೊಳ್ ಜಲದಾನ ಕ್ರಿಯೆಯಂ ನಿರ್ವತಿ್ರಸಿ ದಿಂಬಯಂ ನೇಸರ್ ಪಡುವ ಸಮಯದೊಳ್ ಕ೦ || ಅನುಪಮರಣಸಾಸಿರ್ವ‌್ರ ಮುನಿಗಳೊರಸಪ್ರಮೇಯ ಮುನಿ ನಾಥರ್ ಬಂ || ದಿನ ಪಥದಿಂ ಲಂಕೆಯನಂ ದನ ವ ನಿಯಮ ನಿಯಮಿತರಿರ್ದಿ | ೨೦೫ |