ಚತುರ್ದಶಾಶ್ವಾಸಂ ೪94 ಅಂತಿರ್ಪುದುಂ ಕಂ | ಪ್ರಕಟಿಸಿದುದು ಶುಕ್ಲ ಧ್ಯಾ ನ ಕೃಶಾನು ಜ್ವಾಲೆಯಿಂದವರ್ ಸುಡೆ ಮೂಲ || ಪ್ರಕೃತಿಗಳೊಳ್ ಘಾತಿಗಳಂ ಸಕಲ ಪದಾರ್ಥಾವಭಾಸಿ ಕೇವಲ ಬೋಧಂ || ೨೦ || ಇತ್ತ ಧಾತಕೀಷಂಡದೊಳ್ ತೀರ್ಥ೦ಕರ ಕುಮಾರ ಜನೋತ್ಸವವನ್ನು ದುಂ ಚತುರ್ನಿಕಾಯ ದೇವನಿಕಾಯಂ ಭಗವಜ್ಜನ್ಮಾಭಿಷವಣಮಂ ತೀರ್ಚಿ ಲಂಕೆಯ ಮೇಲೆ ಬರುತ್ತುಂ ಕುಸುಮಾಯುಧೋದ್ಯಾನದೊಳ್ ಸರ್ವಜ್ಞತ್ವಮಂ ಪೆರ್ದ ಪ್ರ ಮೇಯ ಭಟ್ಟಾರಕರಂ ಕಂಡು ಬಲಗೊಂಡು ಪೊಡೆವಟ್ಟು ಪೂಜಿಸುವ ಸಮಯ ದೊಳ್ ಭೋಂಕನೆ ಪಸರಿಸುವ ಶಂಖ ಪಟಹಾದಿ ವಿವಿಧ ವಾದ್ಯ ರವ೦ಗಳ೦ ರಾಮಲಕ್ಷ್ಮಣರುಂ ವಾನರಧ್ವಜರುಂ ಕೇಳು ಜಿನ ಪೂಜೋತ್ಸವ ಪಟಹ ರವ೦ಗ ಛಂದದಿಂದ್ರಜಿನ್ನೇಘವಾಹನ ಕುಂಭಕರ್ಣಾದಿಗಳಿಂ ಪರಿವೃತರಾಗಿ ಭಟ್ಟಾರಕ ರಿರ್ದೆಡೆಗೆ ವೋಗಿ ಉ || ಆ ರಘುವಂಶ ಕೇತು ಬಲಗೊಂಡು ಲಲಾಟದೊಳೊಪ್ಪೆ ಹಸ್ತ ಪಂ | ಕೇರುಹ ಕುಟ್ಕಲಂ ವಿನಮಿತಂ ವಿವಿಧಾರ್ಚನೆಯಿಂದಘೋಘ ಸಂ || ಹಾರಕರಂ ಭವಾಂಬುನಿಧಿ ತಾರಕರಂ ನೆಗಟ್ಟಿ ಪ್ರಮೇಯ ಭ | ದ್ವಾರಕರಂ ರಘುಪ್ರವರನರ್ಚಿಸಿದಂ ಕವಿತಾ ಮನೋಹರಂ ಇದು ಪರಮ ಜಿನಸಮಯ ಕುಮುದಿನೀಶರಚ್ಚಂದ್ರ ಬಾಲಚಂದ್ರ ಮುನೀಂದ್ರ ಚರಣನಖ ಕಿರಣ ಚ೦ದ್ರಿಕಾ ಚಕೋರ ಭಾರತಿ ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ ರಾಮಚಂದ್ರ ಚರಿತ ಪುರಾಣದೊಳ್ - ರಘುವೀರ ವಿಜಯವರ್ಣನಂ ಚತುರ್ದಶಾಶ್ವಾಸಂ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೪೩
ಗೋಚರ