ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ೦ಚದಶಾಶ್ವಾಸಂ ೪೬4 ಗೆಂಟಲೊಳೆ ರಾಜಚಿಹ್ನಂಗಳನಿರಿಸಿ ಭಟ್ಟಾರಕರ೦ ಮೂರು ಸೂತ್ ಬಲಗೊಂಡು ದಿವ್ಯಾರ್ಚನಂಗಳಿಂದರ್ಚಿಸಿ ಸರ್ವಾಂಗ ಪ್ರಣತರಾಗಿ ನಿಜ ನಿಯತ ಸ್ಥಾನದೊಳ್ ಕುಳ್ಳಿ ರ್ದು ಧರ್ಮ ಶ್ರವಣಾನಂತರಂ ನಾರಾಯಣನೆಂದನೀ ತ್ರಿಜಗವ್ಯೂಷಣ ಜ್ವರದಂ ಚತುರ್ದಿನವೇಕಾರಣ೦ ಕವಳಂಗೊಳ್ಳದೆಂಬುದಂ ಬೆಸಸಿಮೆನೆ ಕ೦ 11 ಅಪವರ್ಗ ಶ್ರೀಯ ಕಟಾ ಕ್ಷಪಾತವೆಂಬಂತು ದಂತರುಚಿ ನಿಮಿರ್ವಿನಖಾ 1 - ದ್ವಿಪಮನ್ಯಜನ್ಮಮಂ ತಿಳಿ ದುಪಶಮನಂ ತಳೆದು ಕವಳಮಂ ಕೊಳ್ಳದೆನಲ್ || ೩೪ || ಮುಗಿದ ಕರ ಕಿಸಲಯಂಗಳ್ ಸೊಗಯಿಸೆ ಮತ್ತಂ ಮುನೀಂದ್ರ ವೃಂದಾರಕರಂ !! ಜಗದಧಿಪ೦ ಗಜದ ಭವಾ ಳಿಗಳಂ ವಿನಮಿತ ಶಿರೋಧರಂ ಬೆಸಗೊಂಡಂ {{ ೩೫ || ಅಂತು ಬೆಸಗೊಳ್ಳುದುಂ ದೇಶಭೂಷಣ ಕೇವಲಿಗಳಿ೦ತೆ೦ದು ಬೆಸಸಿದರೀ ವಿನೀತಾನಗರದೊಳ್ ಸುಪ್ರಭಂಗಮಾತನರಸಿ ಪ್ರಹ್ಲಾದಿನಿಗಂ ಸೂದ್ಯೋದಯನುಂ ಚಂದ್ರೋದಯನುಮೆಂಬ ತನೂಜರಾಗಿ ವೃಷಭ ಸ್ವಾಮಿಗಳೊಡನೆ ಪೋಗಿ ತಪಸ್ಸ ರಾಗಿ ಸೈರಿಸಲಾಗಿದೆ ಪರೀಷಹ ಭಗ್ನ ಮನರಾಗಿ ಮರೀಚಿಯೊಡನೆ ಕೂಡಿ-... ಕಂ | ತಾಪಸರಾಗಿ ಕುಧಮ್ಮ ವ್ಯಾಪಾರದೊಳೆಸಗಿ ಘೋರ ಸಂಸಾರ ಮಹಾ || ಕೂಪದೊಳಗಣ್ಣು ಪಿರಿದ ಪ್ರಾಪತ್ಯಂ ಪೆತ್ತನೇಕ ಭವಮಂ ಬಂದರ್‌ || ೩೬ || ಅಂತು ಬಾರದ ಭವಮಂ ಬಂದಂತಾನುಂ ಕುರುಜಾ೦ಗಣ ವಿಷಯದ ಗಜ ಪುರಮನಾಳ್ವ ಹರಿಪತಿಗಮಾತನರಸಿ ಚಂದ್ರಾನನೆಗಂ ಮುಂ ಪೇಟ್ಟಿ ಚಂದ್ರೋದಯಂ ಕುಲಂಕರನೆಂಬ ಮಗನಾಗಿ ರಾಜ್ಯದೊಳ್ ನಿಂದನಾ ಪುರದೊಳ್ ಸೂದ್ಯೋದಯ ನುಂ ವಿಶ್ವಾವಸುವೆಂಬ ಪಾರ್ವಂಗೆ ಮೂಢಶ್ರುತಿಯೆಂಬ ಪುತ್ರನಾಗಿ ಕುಲಂಕರ ನೆಂಬ ನೃಪತಿಗೆ ಪುರೋಹಿತನಾಗೆ ಕುಲಂಕರನುಂ ಹಿಂಸಾಹೇತುಗಳಪ್ಪ ಜನಂಗಳ ನಿರಿಸಿ ತಾಪಸ ರೂಪ ಧಾರಿಗಳೆ ಗುರುಗಳೆಂಬ ನಂಬುಗೆಯಂ ಮಾಡಿ ನಡೆಯಿಸು ಅರ್ಪಿನಂ ಕುಲಂಕರನರಸಿ ದುಲೆ ಶ್ರೀಮತಿಯೆಂಬ ಪಾಣೆ ಮೆಚ್ಚಿದರೊಡನೆ ಮಚ್ಚಿದಂತೆ ವಿಷಯ ಸುಖಮನನುಭವಿಸಲೆಂದು