ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭1 ರಾಮಚ೦ದ್ರಚರಿತಪುರಾಣಂ ಕಂ|| ರಾಮಂ ಕಲಿಸಿದ ತೆಲದಿಂ ರಾಮೆಗೆ ಪುಸಿನುಡಿದು ರಥಮನೇಲಿಸಿ ಕೊ೦ಡಾ || ಭೀಮಾಟವಿಯಂ ಕರಿ ಹರಿ ಭೀಮಾನಮಂ ಕೃತಾಂತಮುಖನೆಯ್ತಂದಂ | ೭೫ || ಆ ಮಹಾಗಹನಮಂ ಪೊಕ್ಕು ತನ್ಮಧ್ಯ ನಿರ್ಝರ ವಾರಿಧಾರಾ ಪರೀತ ಗಿರಿ ದರೀ ಪ್ರದೇಶದೊಳ್ ಮಹಾಸತಿಯಂ ರಥದಿಂದಿಲಿಪಿ ಮನ್ಯು ಗದ್ಗದ ಕಂಠನಾಗಿ ಕಣ್ಣೀ ರ್ಗಳಂ ನೆಗಪುವುದುಂ ಕೃತಾಂತವಕ್ರನಂ ಸೀತಾದೇವಿ ಕಂಡಿದೇಕೆ ಶೋಕಂಗೆಯ್ದು ಪೆ ಪೇಂದೊಡಾತನೆಂದನಬ್ಬಾ ನಿಮ್ಮಮೇಲೆ ಲೋಕಮೆಲ್ಲಮಭಿಯೋಗಮನಿಟ್ಟೂ ಡರಸಂ ನಿಮ್ಮನಡವಿಯೊಳ್ ಬಿಸುಟ್ಟು ಬರವೇ ಡಿಲ್ಲಿಗೆ ತಂದೆನೆನೆ ಸೀತಾದೇವಿ ಕೇಳು ಮೂರ್ಛವೋಗಿ ಕಿಜದುಂ ಬೇಗದಿಂ ಚೇತರಿಸಿ ಕೃತಾಂತವಕ್ರಂಗಿಂತೆಂ ದಳ ರಾಮದೇವ‌ ಸಕಲ ವಸುಧಾ ತಲಮಂ ನ್ಯಾಯದಿಂ ಪ್ರತಿ ಪಾಲಿಸುವುದು ದೇವ ಗುರು ಪೂಜೆಯಂ ಮಜಿರೆಯದಿರ್ಪುದು ಜನಾಪವಾದ ಭಯದಿಂದೆನ್ನಂ ಬಿಸು ಟ್ಟ೦ತೆ ಮಿಥ್ಯಾ ದೃಷ್ಟಿಗಳ ನುಡಿಯಂ ಕೇಳರ್ಹತ್ಪರಮೇಶ್ವರ ಶ್ರೀಧರಮಂ ಬಿಸುಡ ದಿರ್ಪುದೆನಗೆ ದಯೆಗೆಯ್ಯರದ್ದೊಡೆಂದಳೆಂಬುದಂ ಮರೆಯದೆ ಪೇರೆಂದು ಬಾಷ್ಪ ಜಲ ಲುಲಿತ ಲೋಚನೆ ತಲೆಯಂ ಬಾಗಿ ನೆಲನಂ ಬರೆಯುತ್ತು ಮಿರ್ದಳಂ ಕೃತಾಂತ ವಕ್ತಂ ನೋಡಿ ಕಂ !! ತರುಣಿಯನಂತರ್ವತ್ನಿಯ ನರಣ್ಯದೊಳ್ ಬಿಸುಡವೇಡೀ ಬೆಸನಂ ಕಾ 1 ಪುರುಷನೆನೇಗೊಂಡೆ ಕಿಂ ಕರ ಭಾವದಿನಪ್ರಶಸ್ತಮಾವುದುಮುಂಟೇ | ೩ || ಎಂದು ತನ್ನ ತಾನೆ ನಿಂದಿಸಿಕೊಂಡು ಕಣ್ಣೀರ್ಗಳಂ ಸಿಡಿಯುತ್ತುಂ ಸೀತಾ ದೇವಿಗೆ ಕ್ಷಮಿಯಿಸುವುದೆಂದು ಪೊಡೆವಟ್ಟು ಬೀಆಂಡಯೋಧ್ಯೆಗೆ ಪೋದ ನಿತ್ತಲ್ ಕ೦ || ಗುಣವತಿ ರಾಘವನಂ ಲ ಕ್ಷಣನಂ ನೆನೆ ನೆನೆದು ಶೋಕ ಪಾವಕನೆರ್ದೆಯೊಳ್ | ಮಣಿಯದೆ ದಳ್ಳಿಸೆ ಕಣ್ಣಳ ಪೊಣರಿಂ ಕಣ್ಣನಿಗಳು ದೆಸೆಗೆಟ್ಟರ್ದಳ್ ಅಂತಿಷ್ಟ ವಿಯೋಗ ವಿಕಲಿ ದಶ ದಿಶಾಮುಖ ದತ್ತ ದೃಷ್ಟಿ ಪೆರಾರುಮಂ ಕಾಣದ || ೭೭ 1).