ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭೮ ರಾಮಚಂದ್ರಚರಿತಪುರಾಣಂ ಜನಕ ತನೂಜೆಯೆಂ ಪ್ರಭಾಮಂಡಲನನುಜೆಯೆಂ ರಾಮಸ್ವಾಮಿಯ ಭಾರೈ ಸೀತಾ ದೇವಿಯೆಂಬೆನೆನ್ನ ಮೇಲೆ ಜನಪದ ಜನಂ ಪೊಲ್ಲನಪ್ಪ ರಾವಣನುಯ್ದಳಂ ತಂದು ವಿಚಾರಿಸದೆ ಮಹಾದೇವೀಪಟ್ಟಂಗಟ್ಟುವುದಾವುಚಿತವೆಂದಿಟ್ಟಳವಿಟ್ಟು ನುಡಿಯೆ ಲೋಕಾಪವಾದಕ್ಕೆ ರಾಮಸ್ವಾಮಿ ನಾಣ್ಣಿ ಕೃತಾಂತವಕ್ರನೆಂಬ ಪಡೆವಳನಂ ಕರೆದು ಸಮ್ಮೇದಂ ಮೊದಲಾದ ತೀರ್ಥಸ್ಥಾನಂಗಳ ಜಿನಾಲಯಂಗಳಂ ವಂದಿಸಿ ಬರ್ಸ ಮೆಂದು ನಂಬೆ ನುಡಿದೊಡಗೊಂಡುಯ್ದು ಬಿಸುಟ್ಟು ೭ಾರ್ಪುದೆಂದೊಡಾತನೆನ್ನಂ ನಿರ ಪರಾಧೆಯಂ ತಂದಿಲ್ಲಿ ಬಿಸುಟು ಪೋದನೆ೦ದು ಮಹಾದೇವಿ ಕಣ್ಣೀರ್ಗಳಂ ನೆಗಸೆ ಕಂ || ಸವಣಿಲ್ಲದ ಸೀತೆಯ ಶೋ ಕ ವಡ್ನಿಯಂ ಸೂಕ್ತಿ ಸಲಿಲದಿಂದಾಜಿಸಿದ೦ | ಭವ ವಿಭವದ ಚಪಲತೆಯಂ ಸವಿಸ್ತರ೦ ತಿಳಿಸಿ ವಜ್ರಜಂಘ ನರೇಂದ್ರಂ || ೮೨ | ಅನ೦ತರವಿಂತೆಂದನಾಂ ಸೋಮ ವಂಶದರಸಂ ದ್ವಿರದ ವಾಹನಂಗಂ ಸುಬಂಧು ಮಹಾದೇವಿಗಂ ಪುಟ್ಟದೆಂ ವಜ್ರಜಂಘನೆಂಬೆ೦ ಪುಂಡರೀಕಿಣೀ ಪುರಮನಾಳ್ಳೆಂ ಜಿನ ಧದ ದೆಸೆಯಿಂ ನೀಮೆನಗೆ ತಂಗೆವಿರಪ್ಪಿರ್ ಬಿಜಯಂಗೆಯ್ಯ ಮೆಂದು ಸಿವಿಗೆಯ ನೇರಿಸಿಕೊಂಡು ಪೋಗಿ ಕಾಂತಾರಮಂ ಕದನುಕ್ರಮದಿಂ ಪುಂಡರೀಕಿಣೀ ಪುರ ಮನೆಯ್ದ ನಿಜ ರಾಜಭವನಮಂ ಪೊಕ್ಕು ಶೀಲವತಿ ವೆಸರ ನಿಜಾಗ್ರಜೆಯ ಮಾಡ ಕುಯು ರಾಮದೇವರ ಭಾರೈ ಜನಕತನೂಜೆ ಪ್ರಭಾಮಂಡಲನ ತಂಗೆ ಸೀತಾ ದೇವಿ ನಮಗಂ ಜಿನಧದ ದೆಸೆಯಿಂದೊಡವುಟ್ಟಿದಳೆಂದು ಸಮರ್ಪಿಸಿ ಸೀತಾ ದೇವಿಯಂ ನಿಮಗೆ ಪ್ರಭಾಮಂಡಲನಿಂದಗ್ಗಳಮಾಗೆ ಬೆಸಕೆಯ್ದೆನೆಂದು ಸಂತೋಷಂ ಬಡೆ ನುಡಿದು ವಜ್ರಜಂಘ೦ ತನ್ನ ಮಾಡಕ್ಕೆ ಪೋದನಿತ್ತಲ್ ಕಂ || ಜಿನಮುನಿಗಾಹಾರಮನನು ದಿನವಿತ್ತು ಜಿನೇಂದ್ರ ಪೂಜೆಯಂ ಮಾಡುತ್ತು೦ || ಮನಮೊಸೆದು ಶೀಲವತಿಯುಂ ಜನಕಜೆಯುಂ ಕೂಡಿ ದಿವಸಮಂ ನಡೆಯಿಸಿದರ್ || ೮೩ || ಇತ್ತಲಾ ಕೃತಾಂತವಕ್ರಂ ಪೋಗಿ ರಾಘವನಂ ಕಂಡು ಸೀತೆ ಕಲಿಸಿದ ಮಾತೆ ಇಮಂ ಪೇತಿ ಕೇಳು ಮೂರ್ಛವೋಗಿ ನೀಡe೦ದೆಬ್ಬಿತ್ತು ಮತ್ತ ಮತಿ ಪ್ರಲಾಪಂ ಗೆಯ್ಯ ಲಕ್ಷಣಂ ಶೋಕ ವಿಕಲನಾಗೆ ಕೃಶಾಂತವಕ್ಕನವರ ಶೋಕಮನುಪ ಶಮಿಸುವುದುಂ ರಾಮಚ೦ದ್ರ೦ ಚಂದ್ರಕಲಶನೆಂಬ ಸೀತಾ ಮಹತ್ತರನಂ ಕರೆದು--