ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೮೮

ರಾಮಚಂದ್ರಚರಿತಪುರಾಣಂ

ಪೋದನಿತ್ತ ಮೇಘಕೇತನನುರಿಯುತ್ತಿ ರ್ದ ಕುಂಡದ ಸಮೀಪದ ವಿಯನ್ಮಂಡಲದೊಳ್‌
ವಿಮಾನಾರೂಢನವಲೋಕಿಸುತ್ತಿರ್ದನಾ ಪ್ರಸ್ತಾವದೊಳ್‌ ಸೀತಾದೇವಿ ತದಗ್ನಿಕುಂಡ
ದೇಜಕಿಯಂ ಮೆಟ್ಟ--

ಚ||ನೆರೆದ ವಿಯಚ್ಚರಾಮರ ನರ ಪ್ರಮುಖರ್ಕಳುಮೆಯ್ದೆ ಕೇಳೆ ಸು |
ಸ್ವರಮಿಟಿಕಿಕೆಯ್ಯೆ ಕೋಕಿಲ ಕಲ ಸ್ಪರಮಂ ನುಡಿದಳ್‌ ವಸುಂಧರಾ ॥
ವರನೆನಿಸಿರ್ದ ರಾಘವನೊಳಲ್ಲದೆ ರಾವಣನಾದಿಯಾಗೆ ಮಿ।
ಕ್ಕರೊಳಬಿಪಂ ಮನಕ್ಕೆ ತರೆ ಮಾರಣಮಕ್ಕೆನಗೀ ಕೃಶಾನುವಿಂ॥ ೨೬ ॥

ಎಂದತಿ ಪ್ರತಿಜ್ಞೆಗೆಯ್ದು ಪಂಚಪರಮೇಷ್ಠಿಗಳ್ಗೆ ನಮಸ್ಕಾರಂಗೆಯ್ದು ಧಗದ್ಧಗಿಸಿ
ತಿಣ್ಣಮುರಿಯುತ್ತಿರ್ದ ಕುಂಡದೊಳಗೆ ಮೆಯ್ಯನೀಡಾಡೆ--

ಮ ॥ ಮರವಟ್ಟತ್ತು ಮರುದ್ಗಣಂ ಪರಿಜನಂ ಬೆರ್ಚಿತ್ತು ಶೋಕಾಗ್ನಿಯಿಂ |
ದುರಿದತ್ತಾಪ್ತಜನಂ ಲವಾಂಕುಶರೊಳಾದಶ್ತಾಕುಲಂ ವಿಹ್ವಲಂ ॥
ಪಿರಿದಾದತ್ತು ರಘೂದ್ವಹಂಗೆ ಪರಿತಾಪಂ ಲಕ್ಷ್ಮಣಂಗಾಗಳು |
ಬ್ಬರಮಾದತ್ತು ಲತಾಂಗಿ ಸೀತೆ ಪುಗೆ ತೇಜಃಪಿಂಡಮಂ ಕುಂಡಮಂ॥೨೭॥

ಅಂತು ಮಹಾಸತಿ ನೀರಂ ಪುಗುವಂತೆ ಕೆರ್ಚಂ ಪುಗುವುದುಂ--

ಕಂ॥ಜಳದೇವತೆ ಕೋಡುವ ತಿಳಿ
ಗೊಳದೊಳಗಿರ್ಪಂತೆ ಶೀಲವತಿ ಸೀತೆ ವಿನಿ |
ಶ್ಚಳಮಿರೆ ಮನದೊಳ್ ಜಿನಪತಿ
ಚಳಣಂ ದಳ್ಳುರಿಯ ನಡುವೆ ಕೋಡುತ್ತಿರ್ದಳ್‌॥೨೮ ॥

ಸತಿಯ ವಿಶುದ್ದಾಚಾರಂ
ಹುತಾಶನ ಪ್ರಬಲ ದಾಹಿಕಾ ಶಕ್ತಿಯುಮಂ ॥
ಪ್ರತಿಬಂಧಿಸಿದುದು ಜೋದ್ಯಮೆ
ಪತಿವ್ರತಾಗುಣದ ಮಹಿಮೆ ಸಾಧಾರಣಮೇ॥ ೨೯ ॥

ಆಗಳಾಖಂಡಲನ ಬೆಸದಿನಿರ್ದ ದೇವನಾ ಕುಂಡಮನೆ ಪದ್ಮಷಂಡಂ ಮಾಡಿ
ಯಲ್ಲಿ ಸಹಸ್ರ ದಳ ಸುವರ್ಣ ತಾಮರಸಮುಮದಲಜ ಕರ್ಣಿಕೆಯ ಮೇಲೆ ಸಿಂಹಾಸನ
ಮುಮಂ ವಿಗುರ್ವಿಸಿ ತನ್ನ ದೇವಿಯರ್ಕಳಿನಾ ಸರೋವರದೊಳಿರ್ದ ಸೀತಾದೇವಿಯ
ನೆತ್ತಿ ತರಿಸಿ ಸಿಂಹಾಸನದೊಳಿರಿಸಿ ತಾನಾಕಾಶದೊಳಿರ್ದು ಲೋಕಕೆಲ್ಲಮಾಶ್ಚರ್ಯ
ಮಾಗೆ ಪೂವಿನ ಮಲೆಯಂ ಕಜಕೆವುದುಮದಂ ಕಂಡು--