ಮೂಡಶಾಶ್ವಾಸಂ ೪೭ ಸುಖದಿನಿರ್ಪುದುಮೊಂದು ದಿವಸಂ ಸುಗ್ರೀವ ಸುಷೇಣ ಜಾಂಬವ ಪ್ರಮುಖರಧಿರಾಜ ನಲ್ಲಿಗೆ ಬಂದವಸರಂಬಡೆದು ಕಂ || ಪರ ವಿಷಯದೊಳಿರಿಪುದೆ ಸ ಚರಿತ್ರೆಯಂ ದೇವ ಜಾನಕೀದೇವಿಯನಿ೦ || ಬರಿಸುವುದಿದ ನೇಗೊಳ್ಳುದು ಕರುಣಿಪುದೆನಗೆಂದು ವಿನಯನಂ ಪ್ರಕಟಿಸಿದರ್ || ೨೩ || ಎಂದು ಬಿನ್ನವಿಸೆ ರಾಘವನಿಂತೆಂದಂ ಕಂ| ಲೋಕಾಪವಾದ ಭಯದಿಂ ದಾಕೆಯನಾಂ ಕಳೆದೆನವಗುಣಾರೋಪಣದಿ೦|| ಪೋ ಕಳೆದೆನೆ ಸಚ್ಚರಿತದೊ ಳಾಕೆಗೆ ಸಮರಾರುಮಿಲ್ಲದುದನಾನ ಜಿವೆಂ || ೨೪ || ಅದನೆಲ್ಲರುಮಜಯ ದಿವ್ಯ ದಿನಪವಾದಮಂ ಕಳೆವಂತು ಮಾಲ್ಕುದೆಂಬುದು ನವರ್ ಮಹಾಪ್ರಸಾದವೆಂದು ಬೀಳ್ಕೊಂಡು ಪುಂಡರೀಕಿಣೀಪುರಕ್ಕೆ ಬಂದು ಸೀತಾದೇವಿಯಂ ಕಂಡು ಕೈಮುಗಿದು ರಾಮದೇವರ ಕಾರುಣ್ಯಂಗೆಯ ತೆಜನ ನಜ್ಪೆ ವೈದೇಹಿ ವಿಷಯ ವಿರಕ್ಕೆ ದಿವ್ಯದೊಳ್ ಶುದ್ದೆಯಾಗಿ ತಪಂಬಡುವೆನೆಂದು ಮನದೊಳ್ ಪರಿಚ್ಛೇದಿಸಿ ಪುಷ್ಪಕ ವಿಮಾನವನೇ ಆ ಗಗನ ಮಾರ್ಗದಿಂ ಬಂದ ಯೋಧ್ಯೆ ಯನೆಯ್ಲಿ ನೇಸರ್ ಪಡುವುದು ಮಹೇಂದ್ರೋದ್ಯಾನದೊಳಿರುಳಂ ಕಲಸಿ ಮುದಿವಸಂ ರಾಘವನಂ ಕಂಡು ಮ | ಅವಿಚಾರಂ ಕಳೆದೆನ್ನನಿ೦ತಿನಿತು ನೋವಂ ಮಾಡಿದಿರ್ ದೇವರೆಂ । ದು ವಿಷಾದಂ ಮಿಗೆ ನೊಂದು ಸೀತೆ ನುಡಿದ ತಾನಂತದಂ ಕೇಳು ರಾ ! ಘವದೇವಂ ಜನತಾಪವಾದ ಭಯದಿಂದೀ ಖೇದಮಂ ಮಾಡಿದೆಂ । ಭುವನ ಖ್ಯಾತಮೆನಿಪ್ಪ ನಿನ್ನ ಚರಿತಂ ಪೇಟಾರ್ಗಮಜ್ಞಾತಮೇ | ೨೫ || ಅದ೪೦ ಲೋಕ ಪ್ರತ್ಯಯಮಪ್ಪಂತು ಮಾದನೆ ಮಹಾಪ್ರಸಾದವೆಂದು ಪಿರಿದಪ್ಪದೊಂದು ಕೊಂಡಮನಗುಲಿಸಿ ಚಂದನದಗರುವಿನಿಂಧನಗಳುಮಂ ಸು ಗಂಧ ದ್ರವ್ಯಂಗಳುಮನಿಕ್ಕಿ ಕಿರ್ಚ೦ ತಗುಟ್ಟುವುದು ಮಾ ಸಮಯದೊಳ್ ಸಕಲ ಭೂಷಣ ಭಟ್ಟಾರಕರ ಕೇವಲಜ್ಞಾನ ಪೂಜೆಗೆ ಬರ್ಸ ದೇವ ನಿಕಾಯದೊಳ್ ದೇವೇಂದ್ರಂ ಸೀತಾದೇವಿಯ ಮಹೋಪಸರ್ಗಮನದು ಮೇಘಈತನನೆಂಬ ದೇವನಂ ನೀನೀ ಮಹಾಸತಿಯುಪಸರ್ಗಮಂ ಪಿಂಗಿಸಿ ಬರ್ಪುದೆಂದು ನಿಯಮಿಸಿ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೭೭
ಗೋಚರ