ಪುಟ:ರಾಮಚಂದ್ರ ಚರಿತ ಪುರಾಣಂ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪರಾಮಾಯಣದ ಕಥೆ

ವಿಭೀಷಣನೊಡನೆ ಯುದ್ಧಕ್ಕೆ ನಿಂತನು. ಇಬ್ಬರೂ ಕಾದಾಡುತ್ತಿರುವಲ್ಲಿ ಇಂದ್ರ ಜಿತ್ತು ಮಾರನು ಪ್ರವೇಶಿಸಿ ವಿಭೀಷಣನೊಡನೆ ಕಾದಲುದ್ಯುಕ್ತನಾಗಲು ಲಕ್ಷ ಣನು ಅವನನ್ನೆದುರಿಸಿದನು. ರಾಘವನು ಕುಂಭಕರ್ಣನ ಮೇಲೆಯೂ ಹನು ಮಂತ ಸುಗ್ರೀವ ಪ್ರಭಾಮಂಡಲ ಮೊದಲಾದ ನಾಯಕರು ತಮ್ಮ ಸಮಾನರಾದ ರಾಕ್ಷಸ ಬಲದ ನಾಯಕರ ಮೇಲೆಯೂ ಮಹಾ ಯುದ್ಧವನ್ನು ಹೂಡಿದರು. ಲಕ್ಷ್ಮಣನು ಇಂದಗಿಯನ್ನು ವಿರಥನನ್ನಾಗಿ ಮಾಡಿ ನಾಗಪಾಶದಲ್ಲಿ ಕಟ್ಟಿ ವಿರಾಧಿತನ ಕೈಯಲ್ಲಿ ತನ್ನ ಬೀಡಿಗೆ ಕಳುಹಿಸಿದನು. ರಾಮನು ಕುಂಭಕರ್ಣನನ್ನು ಗೆದ್ದು ಪ್ರಭಾಮಂಡಲನಿಗೊಪ್ಪಿಸಲು ಆತನು ಮೇಘವಾಹನನನ್ನು ನಾಗಪಾಶದಲ್ಲಿ ಕಟ್ಟಿ ಅವನನ್ನೂ ಕುಂಭಕರ್ಣನನ್ನೂ ಬೀಡಿಗೆ ಕೊಂಡು ಹೋದನು.
ಇತ್ತ, ರಾವಣನು ವಿಭೀಷಣನೊಡನೆ ಮಹಾಯುದ್ಧವನ್ನು ಮಾಡಿ ಅವನನ್ನು ಕೊಲ್ಲಬೇಕೆಂದಿರಲು ಲಕ್ಷಣನು ಕಂಡು ವಿಭೀಷಣನನ್ನು ಮರೆಮಾಡಿ ತಾನು ರಾವಣನೊಡನೆ ಯುದ್ದಕ್ಕೆ ನಿಂತನು. ಆಗ ರಾವಣನು ಲಕ್ಷ್ಮಣನನ್ನು ದಿವ್ಯಶಕ್ತಿಯಿಂದಿಡಲು ಆ ಶಕ್ತಿಯು ಲಕ್ಷ್ಮಣನನ್ನು ನಿಶ್ಯಕ್ತನನ್ನಾಗಿ ಮಾಡಿ ಮೂರ್ಛ ಗೊಳಿಸಿತು. ಇದನ್ನು ಕೇಳಿ ರಾಮನಿಗೆ ವ್ಯಸನವೂ ಕೋಪಾಟೋಪವೂ ಉಂಟಾ ಗಲು ಆತನು ರಾವಣನ ಮೇಲೆ ಬಿದ್ದು ಅವನನ್ನು ಏಳು ಸಾರಿ ನಿರಥನನ್ನಾಗಿ ಮಾಡಿ ಅವನ ಕವಚವನ್ನು ಕತ್ತರಿಸಿ ವ್ರಣಕಾಯನನ್ನಾಗಿ ಮಾಡಿದರೂ ಅವನು ಲಕ್ಷ ಮಾಡದಿರಲು ರಾಮನು, ಕುಲಾದ್ರಿಯನ್ನೇ ಭೇದಿಸುವ ತನ್ನ ದಿವ್ಯ ಬಾಣಗಳು ರಾವಣನ ದೇಹವನ್ನು ಸ್ವಲ್ಪವೂ ಭೇದಿಸದೆ ಹೋದುದಕ್ಕೆ ಆಶ್ಚರ ಪಟ್ಟು ದನು ಜನು ಅಲ್ಪಾಯುವಲ್ಲವೆಂದು ಬಗೆದನು. ಆ ಹೊತ್ತಿಗೆ ಸರಾಸ್ತಮಯವಾಗಲು ಎರಡು ಸೇನೆಗಳೂ ತಂತಮ್ಮ ಬೀಡಿಗೆ ಹೋದುವು. ರಾವಣನಿಗೆ ಲಕ್ಷ್ಮಣನನ್ನು ಮೂರ್ಛಗೊಳಿಸಿದೆನೆಂಬ ಸಂತೋಷವೂ ತನ್ನ ಮಕ್ಕಳಾದ ಇಂದಗಿ ಮೇಘ ವಾಹನರೂ ತಮ್ಮನಾದ ಕುಂಭಕರ್ಣನೂ ಸೆರೆಸಿಕ್ಕಿದುದಕ್ಕೆ ವ್ಯಸನವೂ ಉಂಟಾ ಯಿತು. ಲಕ್ಷ್ಮಣನು ಮೂರ್ಛ ಬಿದ್ದಿರುವುದಕ್ಕಾಗಿ ರಾಮನು ವ್ಯಸನಾಕ್ರಾಂತನಾ ಗಿರಲು ಜಾಂಬವ ಸುಷೇಣ ಮೊದಲಾದ ಮಂತ್ರಿಗಳು ರಾಮನಿಗೆ ಧೈಯ್ಯ ಹೇಳಿ ಎಂಟನೆಯ ಕೇಶವನಾದ ಲಕ್ಷ್ಮಣನಿಗೆ ಯಾವ ಅಪಾಯವೂ ಉಂಟಾಗದೆಂದೂ ಆತನಿಂದಲೇ ರಾವಣನಿಗೆ ಅಪಾಯವಾಗುವುದೆಂದೂ ಹೇಳಿದರು. ಸುಗ್ರೀವನು ಲಕ್ಷ್ಮಣನ ಸುತ್ತಲೂ ವಿದ್ಯಾ ಮಯವಾದ ಏಳು ಪ್ರಾಕಾರಗಳನ್ನು ನಿರ್ಮಿಸಿ ಒಂದೊಂದು ಬಾಗಿಲಲ್ಲಿ ಒಬ್ಬೊಬ್ಬ ನಾಯಕನನ್ನು ಸೇನಾಸಮೇತನಾಗಿ ಕಾವಲು ನಿಲ್ಲಿಸಿ ತಾನೂ ಒ೦ದು ಬಾಗಿಲಲ್ಲಿ ಕಾಯುತ್ತಿದ್ದನು.
ಇತ್ತ, ರಾವಣನು ಆ ರಾತ್ರಿ ಲಕ್ಷಣನು ಸಾಯದೆ ಬದುಕನೆಂದೂ ಸತ್ತಲ್ಲಿ, ಸೆರೆಯಾಗಿರುವ ತನ್ನ ಮಕ್ಕಳನ್ನೂ ತಮ್ಮನನ್ನೂ ಹಗೆಗಳು ಉಳಿಸರೆಂದೂ