ಪುಟ:ರಾಮಚಂದ್ರ ಚರಿತ ಪುರಾಣಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪರಾಮಾಯಣದ ಕಥೆ

57

ವ್ಯಥೆಪಡುತ್ತಿದ್ದನು. ಲಕ್ಷ್ಮೀಧರನು ಮೂರ್ಛೆ ಹೋದುದನ್ನು ಸೀತಾದೇವಿಯು ಕೇಳಿ ಹಲವು ತೆರನಾಗಿ ಪ್ರಲಾಪಿಸುತ್ತಿರಲು ಖಚರಕಾಂತೆಯಾದ ವಿನೀತ ಎಂಬವಳು ಆಕೆಯನ್ನು ಸಮಾಧಾನಪಡಿಸಿ ಲಕ್ಷಣನು ವಾಸುದೇವನಾದುದರಿಂದ ಸಾಯುವನಲ್ಲವೆಂದು ಹೇಳಿದಳು. ಆ ಸಮಯಕ್ಕೆ ಜನಕನು ಕಳುಹಿಸಿದ ಗಗನಚರನೊಬ್ಬನು ಕಾಳೆಗದ ಸುದ್ದಿಯನ್ನು ತಿಳಿಯುವುದಕ್ಕಾಗಿ ಬಂದು ಲಕ್ಷ್ಮಣನ ಮೂರ್ಛಾ ವೃತ್ತಾಂತವನ್ನರಿತು ಆ ಮೂರ್ಛೆಯನ್ನು ಪರಿಹರಿಸುವ ಉಪಾಯ ವನ್ನು ತಾನು ಬಲ್ಲೆನೆಂದು ಹೇಳಲು ಪ್ರಭಾಮಂಡಲನು ಅತ್ಯಂತ ಸಂತೋಷ ದಿಂದ ಅವನನ್ನು ರಾಮಸ್ವಾಮಿಯ ಬಳಿಗೆ ಕರೆದುಕೊಂಡು ಹೋದನು. ಆ ಗಗನಚರನು ರಾಮಸ್ವಾಮಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿ ಲಕ್ಷ್ಮೀಧರನಿಗೆ ಸರ್ವ ಕ್ಷೇಮವಾಗುವುದೆಂದು ಹೇಳಿ ತನ್ನ ಬಿನ್ನಪವನ್ನು ಕೇಳಬೇಕೆಂದು ಈ ರೀತಿಯಾಗಿ ಹೇಳತೊಡಗಿದನು:-
“ ನಾನು ದೇವನೀತಪುರದೊಡೆಯನಾದ ಶಶಿಮಂಡಲನ ಮಗನು, ಅತಿ ಚ೦ದ್ರನೆಂಬ ಖೇಚರನು. ಒ೦ದಾನೊಂದು ದಿನ ವಾಯುಪಥದಲ್ಲಿ ನಾನು ವಿಹರಿಸು ತಿರುವಾಗ ಸಹಸ್ರವಿಜಯನೆಂಬ ನನ್ನ ಹಗೆಯೊಬ್ಬನು ನನ್ನ ಮೇಲೆ ಬಿದ್ದು ಶಕ್ತಿಯಿಂದಿಡಲು ಸತ್ವವುಡುಗಿ ಆಕಾಶಮಾರ್ಗದಿಂದ ಬಿದ್ದು ಸಾಕೇತದ ಮಹೇಂದ್ರೋ ದ್ಯಾನವನವನ್ನು ಸೇರಿದೆನು. ಅಲ್ಲಿಗೆ ಆಗ ಭರತನು ನನ್ನ ಪುಣ್ಯವಶದಿಂದ ಬಂದು ನನ್ನನ್ನು ಕರುಣದಿಂದ ಕಂಡು ದಿವ್ಯ ಸುಗಂಧ ತೇಯವನ್ನು ತರಿಸಿ ನನ್ನ ಮೈಗೆ ಹಚ್ಚಲು ಶಕ್ತಿಯು ಶಕ್ತಿಗುಂದಿ ನಾನು ಮೂರ್ಛೆಯಿಂದೆಚ್ಚತೆನು. ಆ ಗಂಧ ಸಲಿಕ್ಕೆ ಅಷ್ಟು ಸಾಮರ್ಥ್ಯವಿರುವುದರ ಕಾರಣವೇನೆಂದು ನಾನು ಭರತನನು ಕೇಳಲು ಆತನು ತನ್ನ ಮಾವನಾದ ದೊಣಮೇಘನ ಹೆಂಡತಿಯು ಅನೇಕ ವ್ಯಾಧಿಗಳಿ೦ದ ಪೀಡಿತಳಾಗಿರುವಾಗ ಗರ್ಭವನ್ನು ಧರಿಸಿ ಒಂದು ಹೆಣ್ಣು ಮಗುವನ್ನು ಹೆರಲು ವ್ಯಾಧಿಯು ನಾಶವಾಯಿತೆಂದೂ ಆ ಕೂಸಿಗೆ ಆ ಕಾರಣ ದಿ೦ದ ವಿಶಲ್ಯ ಸೌಂದರಿಯೆಂಬ ಹೆಸರಾಯಿತೆಂದೂ ಆ ಮಗುವಿನ ಮಜ್ಜನ ಜಲದಿಂದ ತನ್ನ ದೇಶವೆಲ್ಲವೂ ವ್ಯಾಧಿರಹಿತವಾಯಿತೆಂದೂ ದೋಣಮೇಘನು ತನಗೆ ತಿಳಿಸಿದ ನೆಂದು ಹೇಳಿದನು. ಇಷ್ಟೇ ಅಲ್ಲದೆ ವಿಶಲ್ಯಸೌಂದರಿಗೂ ಲಕ್ಷ್ಮಣನಿಗೂ ಪೂರ್ವ ಜನ್ಮದ ಸಂಬಂಧವಿರುವುದೆಂದು ಸರ್ವಭೂತಹಿತ ಭಟ್ಟಾರಕರು ಭರತನಿಗೆ ತಿಳಿಸಿದು ದನ್ನೂ ಆತನು ನನಗೆ ತಿಳಿಸಿದನು. ”
ಹೀಗೆಂದು ಅತಿ ಚಂದ್ರನಿಯಚ್ಚರನು ಬಿನ್ನವಿಸಲು ರಾಮಚಂದ್ರನು ಮೆಚ್ಚಿ ಆತನಿಗೆ ಮೆಚ್ಚುಗೊಟ್ಟು ಹನುಮ ಅಂಗದ ಪ್ರಭಾವುಂಡಲ - ಇವರನ್ನು ಗಂಧೋದಕವನ್ನು ತರುವುದಕ್ಕಾಗಿ ಭರತನ ಬಳಿಗೆ ಅಟ್ಟಿದನು. ಅವರು ವಿಮಾನಗಳ