ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
58
ಪ೦ಪರಾಮಾಯಣದ ಕಥೆ
ನ್ನೇರಿ

ಮನೋವೇಗದಿಂದ ಸಾಕೇತಪುರವನ್ನು ಹೊಕ್ಕು ಭರತನನ್ನು ಕಂಡು ರಣವಾರ್ತೆಯನ್ನು ಸಂಕ್ಷೇಪವಾಗಿ ತಿಳಿಸಿ ತಾವು ಬಂದ ಕಾರವನ್ನು ಹೇಳಿ ಆ ರಾತ್ರಿಯೇ ವಿಶಲ್ಯಸೌಂದರಿಯು ಮಿಂದ ಗಂಧೋದಕವನ್ನು ತಂದು ಕೊಡಬೇಕೆಂದೂ ಇಲ್ಲದಿದ್ದರೆ ಹೊತ್ತು ಹುಟ್ಟಿದೊಡನೆಯೇ ಲಕ್ಷ್ಮಣನ ಪ್ರಾಣವು ಹೋಗುವುದೆಂದೂ ಹೇಳಲು ಭರತ ಶತ್ರುಘ್ನರು ರಾವಣನ ಮೇಲೆ ಯುದ್ಧಕ್ಕೆ ಹೊರಡಲು ಸನ್ನದ್ಧರಾದರು. ಅದಕ್ಕೆ ಪ್ರಭಾಮಂಡಲನು ರಾಮನಪ್ಪಣೆಯಿಲ್ಲದೆ ಅವರನ್ನು ಕರೆದುಕೊ೦ಡು ಹೋಗುವುದು ಅನುಚಿತವೆಂದು ತಿಳಿಸಿ ಗಂಧೋದಕವನ್ನು ತರಿಸಿ ಕೊಡೆಂದು ಕೇಳಲು ಭರತನು ವಿಶಲ್ಯ ಸೌಂದರಿಗೆ ಲಕ್ಷ್ಮೀಧರನೇ ವರನೆಂಬು ದನ್ನು ಮುನಿಮುಖದಿಂದ ತಿಳಿದಿರುವೆನಾದುದರಿ೦ದ ಗ೦ಧೋದಕದೊಡನೆ ಆಕೆ ಯನ್ನೂ ಕರೆದುಕೊಂಡು ಹೋಗಿರೆಂದು ಹೇಳಿ ದ್ರೋಣ ಮೇಘನ ಬಳಿಗೆ ತನ್ನ ಪ್ರಧಾನರನ್ನಟ್ಟಿದನು. ದ್ರೋಣ ಮೇಘನು ಭರತನ ಮಾತಿಗನುಸಾರವಾಗಿ ವಿಶಲ್ಯ ಸೌ೦ದರಿಯನ್ನೂ ನೂರು ಮಂದಿ ಕನೈಯರನ್ನೂ ಕೊಟ್ಟು ಕಳುಹಿಸಲು ಅವರೆಲ್ಲರನ್ನೂ ಪ್ರಭಾಮಂಡಲನು ವಿಮಾನವನ್ನಿರಿಸಿಕೊಂಡು ಹೊರಟು ನಕ್ಷತ್ರಮಾರ್ಗ ವಾಗಿ ಕ್ಷಣಮಾತ್ರದಲ್ಲಿ ರಣಭೂಮಿಯನ್ನು ಸೇರಿದನು. ವಿಶಲ್ಯಸೌಂದರಿಯು ಲಕ್ಷ್ಮಣನನ್ನು ನೋಡುತ್ತ ನೋಡುತ್ತ ಶಕ್ತಿಯ ಶಕ್ತಿಯು ಕುಂದುತ್ತ ಬಂದು ಕಡೆಗೆ ಶಕ್ತಿಯು ಕಿಡಿಗಳನ್ನುಗುಳುತ್ತ ಜನಾರ್ದನನ ವಕ್ಷಸ್ಥಳವನ್ನು ಬಿಟ್ಟು ಮೇಲಕ್ಕೆ ಹೋಗುತ್ತಿರುವಾಗ ಪವನಜನು ಶಕ್ತಿಯನ್ನು ಹಿಡಿದನು. ಆಗ ಶಕ್ತಿಯು ದಿವ್ಯಸ್ತ್ರೀ ರೂಪವನ್ನು ಧರಿಸಿ ತಾನು ವಿಶಲ್ಯಸೌಂದರಿಯಿಂದಲ್ಲದೆ ಹೋಗತಕ್ಕವ ಇಲ್ಲೆಂದೂ ತನ್ನನ್ನು ಬಿಟ್ಟು ಬಿಡಿರೆ೦ದೂ ಕೇಳಿಕೊಳ್ಳಲು ಹನುಮನು ಬಿಟ್ಟು ಬಿಟ್ಟನು. ಆಗ ವಿಶಲ್ಯ ಸೌಂದರಿಯ ಕರಸ್ಪರ್ಶನದಿಂದಲೂ ಸುರಭಿಸಲಿಲ ಸೇಚನೆದಿಂದಲೂ ಲಕ್ಷಣನು ಮೂರ್ಛಿಯಿಂದೆಚ್ಚು ಎದ್ದು ಕುಳಿತುಕೊಂಡು ವಿಶಲ್ಯ ಸೌಂದರಿಯನ್ನು ನೋಡಿ ಮನ್ಮಥ ಬಾಧೆಯನ್ನು ಪಡೆದನು. ಹನುಮದಾದಿಗಳು ಆಕೆಯನ್ನೂ ಆಕೆಯೊಡನೆ ಬಂದ ನೂರ್ವರು ಕನೈಯರನ್ನೂ ಮದುವೆಯಾಗುವಂತೆ ಲಕ್ಷ್ಮಣನನ್ನೊಡಂಬಡಿಸಿ ಶುಭಮುಹೂರ್ತದಲ್ಲಿ ಪಾಣಿಗ್ರಹಣ ಮಾಡಿಸಿದರು.

ಅತ್ತ, ದಶಶಿರನು ಲಕ್ಷ್ಮಣನ ಪುಣ್ಯ ಪ್ರಭಾವವನ್ನು ಕೇಳಿ, ಸೀತೆಯ ನೊಪ್ಪಿಸಿ ಸಂಧಿಗೊಡಂಬಡುವಂತೆ ಸಲಹೆಯನ್ನು ಕೊಟ್ಟ ತನ್ನ ಮಂತ್ರಿಗಳ ಮೇಲೆ ಬಹಳ ಸಿಟ್ಟಾಗಿ ತನ್ನ ಯಶಶ್ಚಂದ್ರಿಕೆಗೆ ಕಳ೦ಕವಾಗದಂತೆ ಮಾಡುವೆ ನೆಂದು ನುಡಿದು, ರಾಮಲಕ್ಷ್ಮಣರು ಅಸಾಧಾರಣರಾದುದರಿಂದ ಬಹುರೂಪಿಣೀ ವಿದ್ಯೆಯನ್ನು ಸಾಧಿಸಿ ಹಗೆಯನ್ನು ಗೆಲ್ಲುವೆನೆಂದು ಬಗೆದು ಲಂಕಾಪಟ್ಟಣದಲ್ಲಿಯೂ ದೇಶದ ಎಲ್ಲ ಕಡೆಗಳಲ್ಲಿಯೂ ಹಿಂಸೆ ಬೇಡೆಂದು ಡಂಗುರ ಹೋಯಿಸಿ ಜಿನಪೂಜೆಯನ್ನು ಪ್ರತಿದಿನವೂ ಮಾಡುವಂತೆ ನಿಯಮಿಸಿ, ಪಟ್ಟಣಕ್ಕೆ ಯಾರು ಎಷ್ಟು