ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



60
ಪ೦ಪರಾಮಾಯಣದ ಕಥೆ

ಆಗ ಮಂಡೋದರಿ ಮೊದಲಾದ ಅಂತಃಪುರ ಸ್ತ್ರೀಯರು, ಜಪವನ್ನು ನಿಲ್ಲಿಸಿ ತಮ್ಮನ್ನು ಸಲಹೆ೦ದು ಅಳುತ್ತ ಕೇಳಿಕೊಂಡರೂ ರಾವಣನು ಚಲಿಸದೆ ಚಿತ್ರ ನಿರೋಧದಿಂದ ವಿದ್ಯೆಯನ್ನು ಸಾಧಿಸಿದನು. ಆ ವಿದ್ಯಾ ದೇವತೆಯು ಪ್ರತ್ಯಕ್ಷವಾಗಿ ಅಪ್ಪಣೆಯೇನೆಂದು ರಾವಣನನ್ನು ಬೇಡಿ ರಾಮಲಕ್ಷ್ಮಣರನ್ನುಳಿದು ಮಿಕ್ಕವರು ಯಾರನ್ನೂ ಉಳಿಯಲೀಯೆನೆಂದು ಹೇಳಲು ರಾವಣನು ಅದರಿಂದ ತನಗೇನೂ ಫಲವಿಲ್ಲವೆಂದು ಹೇಳಿ ವಿದ್ಯಾದೇವತೆಗೆ ನಮಸ್ಕರಿಸಿ ಹೊರಡುವಷ್ಟರಲ್ಲಿ ಅ೦ಗ ದಾದಿಗಳು ತಮ್ಮ ಬಿಡಾರವನ್ನು ಸೇರಿದರು. ರಾವಣನು ಅಂಗದ ಮೊದಲಾ ದವರು ತನ್ನ ಅಂತಃಪುರ ಸ್ತ್ರೀಯರಿಗೆ ಮಾಡಿದ ಅಪಮಾನವನ್ನೂ ತೊಂದರೆಯನ್ನೂ ತಿಳಿದು ಅವರನ್ನು ಕ್ಷಣಮಾತ್ರದಲ್ಲಿ ಸೆರೆಗೊಂಡು ತಂದು ಪರಿಭವಿಸುವೆ ನೆಂದು ತನ್ನ ಸ್ತ್ರೀಯರನ್ನು ಸಮಾಧಾನಗೊಳಿಸಿ ಜಿನಭವನದಲ್ಲಿ ಮಹಾ ಪೂಜೆಯನ್ನು ಮಾಡಿಸಿದನು.
ತರುವಾಯ ರಾವಣನು ತಾನು ಸಾಧಿಸಿದ ವಿದ್ಯೆಗಾಗಿ ಬಹಳ ಸಂತೋಷಪಟ್ಟು ಸೀತೆಯ ಮೇಲಣ ಮೋಹದಿ೦ದ ಪ್ರಮದ ವನಕ್ಕೆ ಬಂದು ತನ್ನನ್ನು ಇನ್ನು ಮೇಲೆ ಯಾರೂ ಜಯಿಸಲಾರರೆಂದೂ ಆದುದರಿಂದ ರಾಮನ ಹಂಬಲನ್ನು ಬಿಟ್ಟು ತನ್ನನ್ನು ಸೇರಿ ಸಾಮಾಜ್ಯ ಸುಖವನ್ನನುಭವಿಸೆಂದೂ ಸೀತೆಗೆ ಹೇಳಲು ಆಕೆಯು ಬಹಳ ವ್ಯಸನದಿಂದ ರಾಮನ ಪ್ರಾಣವಿರುವವರೆಗೂ ತನ್ನ ಬಳಿಗೆ ಬರಬೇಡೆಂದು ಹೇಳಿ ಮೂರ್ಛಹೊಂದಿದಳು. ಅದನ್ನು ನೋಡಿ ರಾವಣನಿಗೆ ಕರುಣೆ ಹುಟ್ಟಿ ಸೀತೆಯ ವಿಷಯದಲ್ಲಿ ವೈರಾಗ್ಯ ಪರನಾಗಿ ಆಕೆಯ ಗುಣಸ್ತವನ ಮಾಡಿ ತಾನು ಮಾಡಿದ ಪಾಪಕೃತ್ಯಗಳಿಗಾಗಿ ತನ್ನನ್ನು ತಾನೇ ದೂಷಿಸಿ ಕೂಂಡು ರಾಮಲಕ್ಷ್ಮಣರನ್ನು ಯುದ್ಧದಲ್ಲಿ ಸೋಲಿಸಿ ಸೆರೆಹಿಡಿದು ತಂದು ಅವರಿಗೆ ಸೀತೆಯನ್ನು ಕೊಡುವೆನೆಂದು ನಿಶ್ಚಯಿಸಿ ತನ್ನ ಮನೆಗೆ ಬಂದನು. ಆಗ ಅ೦ಗದ ಪ್ರಭಾಮಂಡಲ ಸುಗ್ರೀವ ಹನುಮುವಾದಿಗಳು ಮಾಡಿದ ದುರಾಚಾರವ, ನೆನಪಿಗೆ ಬಂದು ರಾವಣನು ಅವರನ್ನು ಕೂಡಲೆ ಕೊಲ್ಲುವೆನೆಂದು ಶಪಥಮಾಡಿ ದನು. ಆ ಸಮಯದಲ್ಲಿ ಭೂಮಿಯು ಗುಡುಗುವುದು, ಕರುಮಾಡದ ಕಲಶಗಳು ಬೀಳುವುದು, ಹಗಲಿನಲ್ಲಿ ಉಲ್ಕಾಪಾತವಾಗುವುದು-ಇವೇ ಮೊದಲಾದ ಅನೇಕ ಉತ್ಪಾತಗಳು ಸಂಭವಿಸಲು ನೈಮಿತ್ತಿಕರು ನಾಳಿನ ಕದನದಲ್ಲಿ ರಾವಣನಿಗಪಾಯವಾಗುವುದೆಂದು ನಿಶ್ಚಯಿಸಿ ನುಡಿಯುತ್ತಿರುವಲ್ಲಿ ರಾವಣನು ಸಿ೦ಹಾ ಸನಾರೂಢನಾಗಿದ್ದು ಸೆರೆಯಲ್ಲಿದ್ದ ತನ್ನ ಮಕ್ಕಳನ್ನೂ ತಮ್ಮನನ್ನೂ ನೆನೆದು ಮುಳಿದು ಕಾಳಗಕ್ಕೆ ಹೊರಡಲು ಸನ್ನದ ನಾದನು. ಆಗ ಮಂಡೋದರಿಯು ಬಂದು ಪತಿಯನ್ನು ನಮಸ್ಕರಿಸಿ ತಾನು ಸೀತೆಯನ್ನು ರಾಮನಿಗೆ ಕೊಟ್ಟು ಇಂದಗಿ ಮೇಘನಾದ ಕುಂಭಕರ್ಣರನ್ನು ತರುವೆನೆಂದೂ ಯುದ್ದಕ್ಕೆ ನಿಂತರೆ ಅವರಿಗೆ ಸಾವು