ಪುಟ:ರಾಮಚಂದ್ರ ಚರಿತ ಪುರಾಣಂ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪರಾಮಾಯಣದ ಕಥೆ

61

ಒದಗುವುದೆಂದೂ ಬಂಧು ಸಂತಾನಕ್ಕೆ ಈ ರೀತಿಯಾಗಿ ಸಾವನ್ನು ತರುವುದು ಸರಿಯಲ್ಲವೆಂದೂ ಹೇಳಿಕೊಳ್ಳಲು ರಾವಣನು ರೋಷಾವೇಶದಿಂದ ಮಂಡೋದರಿಯನ್ನು ತೊಲಗಿ ಹೋಗೆಂದು ಗರ್ಜಿಸಿದರೂ ಆಕೆಯು ಹೊರಡದೆ ಮರಳಿ ಕೇಳಿ ಕೊಳ್ಳಲು ರಾವಣನು ಕಾಳಗದಲ್ಲಿ ತನ್ನೆದುರಿಗೆ ನಿಲ್ಲುವ ಗ೦ಡರು ಯಾರೂ ಇಲ್ಲವೆಂದೂ ಆ ವಿಷಯವಾಗಿ ತಾನು ಅಂಜಬೇಡವೆಂದೂ ನುಡಿದು ಸನ್ನಾಹ ಭೇರಿಯನ್ನು ಹೊಯಿಸಿ ರಣಭೂಮಿಗೆ ಬಂದು ಒಡ್ಡಿ ನಿಂತನು.
ರಣಭೂಮಿಯಲ್ಲಿ ಭೀಕರಾಕಾರವಾಗಿ ನಿಂತಿದ್ದ ರಾವಣನ ರಥವನ್ನು ಕಂಡು ಸೀತಾರಮಣನು ಎದುರಿಗೆ ಕಾಣುವುದು ಸರ್ವತವೋ ಜೀಮೂತವೋ ಎಂದು ಜಾಂಬವನನು, ಕೌತುಕದಿಂದ ಕೇಳಲು ಅದು ರಾವಣನ ಬಹುರೂಪಿಣೀ ವಿದ್ಯಾ ವಿನಿರ್ಮಿತವಾದ ವರೂಥವೆಂದು ಆತನು ಹೇಳಿದನು. ಅದನ್ನು ಕೇಳಿ ರಾಮಲಕ್ಷ್ಮಣರು ಸಿಂಹ ಗರುಡ ವಾಹಿನೀ ರಥಗಳನ್ನೇರಿ ಚತುರಂಗ ಬಲದೊಡನೆ ಶುಭಶಕುನಗಳನ್ನಿದಿರ್ಗೊ೦ಡು ರಣಭೂಮಿಗೆ ಬಂದು ನಿಲ್ಲಲು ಯುದ್ದವು ಪ್ರಾರಂಭವಾಯಿತು. ಮಯನು ಭಯಂಕರವಾಗಿ ಯುದ್ಧ ಮಾಡಿ ಹನುಮಂತನನ್ನೂ ಪ್ರಭಾಮಂಡಲನನ್ನೂ ಸುಗ್ರೀವನನ್ನೂ ಸೋಲಿಸಲು ದಾಶರಥಿಯು ಮುಳಿದು ಮಯನನ್ನು ಗೆದ್ದು ಸೆರೆಹಿಡಿದನು. ಇದನ್ನು ಕಂಡು ರಾವಣನು ರಾಮನ ಮೇಲೆ ಎತ್ತಿ ಬರಲು ಲಕ್ಷ್ಮಣನು ರಾಘವನ ರಥವನ್ನು ಹಿಂದಿಕ್ಕಿ ತಾನು ಯುದ್ದಕ್ಕೆ ನಿಂತನು. ರಾವಣ ಲಕ್ಷಣರಿಗೆ ಘೋರಯುದ ವು ನಡೆದು ಲಕ್ಷ್ಮಣನನ್ನು ಹೇಗೆಯೂ ಗೆಲ್ಲಲಾರದೆ ರಾವಣನು ಬಹುರೂಪಿಣೀ ವಿದ್ಯೆಯಿ೦ದ ಅಪಾರವಾದ ದೇಹಗಳನ್ನು ಪಡೆಯಲು ಭೂಮಿಯೂ ಆಕಾಶ ಭೂ ದಿಕ್ಕುಗಳೂ ರಾವಣಮಯ ವಾದುವು. ಇವರೆಲ್ಲರೂ ಲಕ್ಷ್ಮಣನನ್ನು ಮುತ್ತಿ ಭಯಂಕರವಾಗಿ ಕಾಡುತ್ತಿರುವಲ್ಲಿ ಲಕ್ಷಣನು ರಾವಣಕೋಟಿಯನ್ನು ನಿರ್ಮೂಲಮಾಡಲು ರಾವಣನು ಬಹು ರೂಪಿಣೀ ವಿದ್ಯೆಯನ್ನುಳಿದು ಚಂದ್ರಹಾಸದಿಂದಿರಿಯಲು ಲಕ್ಷ್ಮಣನು ಸೂರಹಾಸದಿಂದ ಅದನ್ನು ಭಂಗಪಡಿಸಿದನು. ಆಗ ರಾವಣನು ಸುದರ್ಶನ ದಿವ್ಯ ಚಕ್ರ ದಿಂದ ಲಕ್ಷಣನ್ನಿಡಲು ಅದು ಲಕ್ಷ್ಮಣನನ್ನು ಮೂರುಸಾರಿ ಬಲಗೊಂಡು ಆತನ ಬಲಭುಜದ ಬಳಿ ನಿಂತಿತು. ಆಗ ರಾಮಚಂದ್ರನು ಲಕ್ಷ್ಮಣನಿಗೆ ದೊರೆತ ಚಕ್ರದಿಂದ ರಾವಣನನ್ನು ಇಡೆಂದು ಹೇಳಲು ಲಕ್ಷ್ಮಣನು ರಾವಣನಿಗೆ ಮರಳಿ ಬುದ್ದಿ ವಾದವನ್ನು ಹೇಳಿ ಸೀತೆಯನ್ನೊಪ್ಪಿಸಿ ಬದುಕನ್ನಲು ರಾವಣನು ನಂದುವ ಸೊಡರಿನಂತೆ ಕೋಪದಿಂದ ಪ್ರಜ್ವಲಿಸಿ ರಥದಿಂದಿಳಿದು ಚಂದ್ರಹಾಸಾಸಿಯನ್ನು ಜಡಿಯುತ್ತ ಬರಲು ಲಕ್ಷಣನು ಕೋಪದಿಂದ ಅವನಮೇಲೆ ಚಕ್ರವನ್ನೆಸೆದನು. ಆ ಚಕ್ರವು ರಾವಣನ ಎದೆಯನ್ನು ಸೀಳಿ ಬೆನ್ನಿನಲ್ಲಿ ಹೊರಡಲು ದಾನವೇಂದ್ರನು ಪ್ರಾಣವನ್ನುಳಿದು ನೆಲಕ್ಕೆ ಬಿದ್ದನು. ಆಗ ಪುಷ್ಪವೃಷ್ಟಿ ಸುರಿಯಿತು, ಸುರದುಂದುಭಿ