ಪುಟ:ರಾಮಚಂದ್ರ ಚರಿತ ಪುರಾಣಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

68

ಪ೦ಪರಾಮಾಯಣದ ಕಥೆ

ಮಂಡಲನ ತಂಗಿಯೆಂದೂ ರಾಮಚಂದ್ರನ ಭಾರೈಯಾದ ಸೀತಾದೇವಿಯೆಂದೂ , ಲೋಕಾಪವಾದಕ್ಕಾಗಿ ರಾಮಸ್ವಾಮಿಯು ನಿರಾಪರಾಧಿಸಿಯಾದ ತನ್ನನ್ನು ಈ ರೀತಿ ಯಾಗಿ ಅಡವಿಗೆ ಕಳುಹಿಸಿದನೆಂದೂ ಹೇಳಿ ಕಣ್ಣೀರನ್ನು ಸುರಿಸಲು ವಜ್ರ ಜಂಘನು ಆಕೆಯ ಶೋಕವನ್ನು ತನ್ನ ವಿನಯೋಕ್ತಿಗಳಿಂದ ಆರಿಸಿ, ತಾನು ಪುಂಡರೀಕಿಣಿಪುರವನ್ನಾಳುವ ವಜ್ರಜಂಘನೆಂದೂ ಜಿನಧದ ದೆಸೆಯಿಂದ ಆಕೆಯು ತನಗೆ ತಂಗಿಯೆಂದೂ ತನ್ನೊಡನೆ ಬಿಜಯಮಾಡಿರೆಂದೂ ಹೇಳಿ ಅ೦ದಳದಲ್ಲಿ ಕುಳ್ಳಿರಿಸಿಕೊಂಡು ಪುಂಡರೀಕಿಣೀಪುರವನ್ನು ಸೇರಿ ತನ್ನ ದೊಡ್ಡ ಮಗಳಾದ ಶೀಲವತಿಯ ಮಾಡಕ್ಕೆ ಕರೆದುಕೊಂಡು ಹೋಗಿ ಆಕೆಗೆ ಒಪ್ಪಿಸಿ ತಾನು ಪ್ರಭಾಮಂಡಲನಿಗಿಂತಲೂ ಅಧಿಕವಾದ ಗೌರವದಿಂದ ಸೀತಾದೇವಿ ಯನ್ನು ನೋಡಿಕೊಂಡಿರುವೆನೆಂದು ಹೇಳಿ ತನ್ನ ಅರಮನೆಗೆ ಹೋದನು. ಸೀತಾ ದೇವಿಯು ಶೀಲವತಿಯೊಡನೆ ಪ್ರತಿ ದಿನವೂ ಜಿನಮುನಿಗಾಹಾರವನ್ನಿತ್ತು ಜಿನ ಪೂಜೆಯನ್ನು ಮಾಡುತ್ತ ಕಾಲವನ್ನು ಕಳೆದಳು.
ಇತ್ತ, ಕೃತಾ೦ತವನು ಹಿಂದಕ್ಕೆ ಹೋಗಿ ರಾಘವನನ್ನು ಕಂಡು ಸೀತಾದೇವಿಯು ಹೇಳಿದ ಮಾತುಗಳೆಲ್ಲವನ್ನೂ ಹೇಳಲು ರಾಮಸ್ವಾಮಿಯು ಮೂರ್ಛೆ ಹೋಗಿ ಬೇಗನೆಚ್ಚತ್ತು ಬಹಳವಾಗಿ ಪ್ರಲಾಪಿಸಿದನು. ಇದನ್ನು ನೋಡಿ ಲಕ್ಷಣನೂ ಶೋಕವಶಗತನಾಗಲು ಕೃತಾಂತವಕ್ರನು ಇಬ್ಬರನ್ನೂ ಸಮಾಧಾನ ಪಡಿಸಿದನು. ಆಗ ರಾಮಚ೦ದ್ರನು ಚ೦ದ್ರ ಕಲಶನೆ೦ಬ ಸೀತಾ ಮಹತ್ತರನನ್ನು ಕರೆಯಿಸಿ ಸೀತಾದೇವಿಯು ಹೇಳಿದ ತೆರನಾಗಿ, ಜಿನಪತಿ ಪೂಜೆಯನ್ನೂ ಮುನಿ ಜನಕ್ಕೆ ಚತುರ್ವಿಧ ದಾನವನ್ನೂ ಮಾಡಿಸೆಂದು ಅಪ್ಪಣೆಕೊಟ್ಟನು.


ಆಶ್ವಾಸ ೧೬- ಪರಿನಿರ್ವಾಣ ಕಲ್ಯಾಣೋತ್ಸವ

ಸೀತಾದೇವಿಯು ವಜ್ರಜಂಘನ ಪೋಷಣೆಯಲ್ಲಿ ದು ನವಮಾಸಗಳು ತುಂಬಲು ಶ್ರಾವಣಮಾಸದ ಹುಣ್ಣಿಮೆಯ ಹಗಲಿನಲ್ಲಿ :- ಚ೦ದ್ರದೇವೇಂದ್ರರಿಗೆಣೆಯಾದ ಅವಳಿ ಮಕ್ಕಳನ್ನು ಹೆತ್ತಳು. ಅವರಿಗೆ ಮಹಾ ವೈಭವದಿಂದ ಚಾತಕರ್ಮ ನಾಮಕರಣಗಳನ್ನು ಮಾಡಿಸಿ ಲವ ಕುಶರೆಂಬ ಹೆಸರನ್ನಿಟ್ಟರು. ಅವರು ಶುಕ್ಲ ಪಕ್ಷದ ಚ೦ದ್ರನಂತೆ ದಿನದಿನಕ್ಕೆ ಪ್ರವರ್ಧಮಾನರಾಗಿ ಶೈಶವವನ್ನು ಕಳೆಯಲು ಸಿದ್ದಾರ್ಥನಿಂದ ಅರುವತ್ತು ನಾಲ್ಕು ಕಲೆಗಳನ್ನೂ ಶಸ್ತ್ರಾಸ್ತ್ರವಿದ್ಯೆಗಳೆಲ್ಲವನ್ನೂ ಕಲಿತು ಅಸಮಾನರಾದರು. ಆಗ ವಜ್ರಜಂಘನು ಶಶಿಮಾಲೆಯೆಂಬ ತನ್ನ ಮಗಳೊಡನೆ ಮೂವತ್ತೆರಡು ಮಂದಿ ಕನ್ನಿಕೆಯರನ್ನು ಲವನಿಗೆ ಮದುವೆಮಾಡಿ ಪೃಥ್ವಿಪುರ ವನ್ನಾಳುವ ಸೃಥುವಿನ ಮಗಳಾದ ಕನಕಮಾಲೆಯನ್ನು ಕುಶನಿಗೆ ಕೊಡುವಂತೆ