ಪುಟ:ರಾಮಚಂದ್ರ ಚರಿತ ಪುರಾಣಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪರಾಮಾಯಣದ ಕಥೆ

69

ಪೃಥುವಿಗೆ ಹೇಳಿ ಕಳುಹಿಸಲು, ಆತನು ಅವಜ್ಞಾತ ಕುಲದವನಿಗೆ ಕೂಸನ್ನು ಕೊಡೆನೆಂದು ಗರ್ಜಿಸಿ ಹೇಳಿ ದನು. ಅದನ್ನು ಕೇಳಿ ವಜ್ರಜಂಘ ನು ಕಡು ನುಳಿದು ಪೃಥುವಿನ ಮೇಲೆ ದಂಡೆತ್ತಿ ಹೋದುದನ್ನು ತಿಳಿದು ಅವಾಂಕುಶರೂ ಹೊರಟು ವಜ್ರಜಂಘನನ್ನು ಸೇರಿ ಪೃಥುವಿನ ಮೇಲೆ ಯುದ್ಧ ಮಾಡಿ ಅವನನ್ನು ಸೋಲಿಸಲು ಅವನು ಓಡಿ ಹೋದನು. ಆಗ ಲವಾಂಕುಶರು ಹಿ೦ದಟ್ಟಿ ಕೊಂಡು ಹೋಗಿ ಅರಿಯದ ಕುಲದವರಿಗೆ ಬೆಂಗೊಟ್ಟೋಡುವುದು ಯುಕ್ತವಲ್ಲವೆ೦ದು ಮೂದಲಿಸಲು ಪೃಥುವು ಎಡೆಗೆಟ್ಟು ಕೈಮುಗಿದು ತನ್ನ ದೋಷಕ್ಕೆ ಕ್ಷಮಿಸಬೇಕೆಂದು ಬೇಡಿಕೊಂಡು ಅವರನ್ನು ತನ್ನ ಪಟ್ಟಣಕ್ಕೆ ಕರೆದುಕೊಂಡು ಹೋಗಿ ಕನಕಮಾಲೆಯನ್ನು ಕುಶನಿಗೆ ಮದುವೆಮಾಡಿ ಕೊಟ್ಟನು.
ತರುವಾಯ, ಲವಾ೦ಕುಶರು ವಜ್ರಜಂಘನನ್ನು ಪುಂಡರೀಕಿಣೀ ಪುರಕ್ಕೆ ಕಳು ಒಸಿ ದಿಗ್ವಿಜಯ ಪ್ರಯಾಣ ಭೇರಿಯನ್ನು ಹೊಯ್ಲಿ ವಂಗ ಮಗಧ ಮೊದಲಾದ ಸಕಲ ದೇಶಗಳನ್ನೂ ಬಾಯ್ಕಳಿಸಿ ಗಂಗಾನದಿಯನ್ನು ದಾಟಿ ಕೈಲಾಸ ನಗರದ ಉತ್ತರ ಭಾಗವನ್ನು ಸೇರಿ ಸಿಂಧುವಿನ ಬಳಿಗೆ ಬಂದು ಪಶ್ಚಿಮ ಸಮುದ್ರ ತೀರವನ್ನು ಹಿಡಿದು ನಡೆದು ಅಲ್ಲಿಯ ರಾಜರುಗಳಿ೦ದ ಕಪ್ಪವನ್ನು ಕೊಂಡು ಸಿದ್ದ ದಿಗ್ವಿಜಯರಾಗಿ ಬ೦ದು ಪುಂಡರಿ ಕಿಣಿಪುರವನ್ನು ಸೇರಿ ಸುಖದಿಂದಿದ್ದರು. ಆ ಸಮಯದಲ್ಲಿ ಹಿಂಸಾನಂದನಾದ ನಾರದನು ಸೀತೆಯಿದ್ದ ತಾನನ್ನರಿತು ಪ್ರ೦ಡರಿಕ ಪುರವನ್ನು ಹೋಗಲು ಲವಾ೦ಕುಶರು ಆತನನ್ನು ಕಂಡು ಭಕ್ತಿಯಿ೦ದೆರ ಮಣಿಮಯಾಸನ ದಲ್ಲಿ ಕುಳ್ಳಿರಿಸಿದರು. ಅದಕ್ಕೆ ಸಂತೋಷಪಟ್ಟು ನಾರದನು ರಾಮಲಕ್ಷ್ಮಣರಂತೆ ಮಹಾನುಭಾವರಾಗಿರೆಂದು ಅವರನ್ನು ಹರಸಲು ಲವಾಂಕುಶರು ಆ ರಾಮಲಕ್ಷ್ಮಣರು ಯಾರೆಂದು ಕೇಳಿ, ಅವರ ವೃತ್ತಾಂತವನ್ನು ವಿಶದವಾಗಿ ತಿಳಿಸಬೇಕೆಂದು ಆ ಮಾಯ ಜೋಗಿಯನ್ನು ಬೇಡಿದರು. ಅದಕ್ಕೆ ನಾರದನು ರಾಮಲಕ್ಷ್ಮಣರ ವೃತ್ತಾಂತ ವನ್ನು ಸವಿಸ್ತಾರವಾಗಿ ಹೇಳಲು, ಅದನ್ನು ಕೇಳಿ ನಿರಂಕುಶನಾದ ಅಂಕುಶನು “ ಮುನಿವರರೇ ! ಅಯೋಗ್ಯರ ಮಾತನ್ನು ಕೇಳಿ ತನ್ನ ಘನತೆಯನ್ನು ಇದು ಪಾಪ ಕಂಜದೆ ಗುಣವತಿಯಾದ ಸತಿ ದುನ್ನು ತೊರೆದ ನಿರ್ಗುಣನಾದ ಜಡಮತಿ ಯನ್ನು ತಮ್ಮಂಥವರು ಹೊಗಳಬಹುದೇ ?” ಎಂದು ಹೇಳಿ ಆ ಅಯೋಧ್ಯೆಯು ಎಷ್ಟು ದೂರವಿರುವುದೆಂದು ಕೇಳಿದನು. ನಾರದನು ನೂರೈವತ್ತು ಯೋಜನವೆನ್ನಲು ಕೂಡಲೆ ಲವಾ೦ಕುಶರು ನಮಸ್ತ ಬಲದೊಡನೆ ಅಲ್ಲಿಗೆ ಹೊರಟು ಕೆಲವು ದಿನಗಳಿಗೆ ಅಯೋಧ್ಯೆಯನ್ನು ಸೇರಿ ಊರ ಹೊರಗೆ ಬೀಡನ್ನು ಬಿಟ್ಟರು. ಕ್ಷುಲ್ಲಕನಾದ ನಾರದನು ಪ್ರಭಾಮಂಡಲನ ಬಳಿಗೆ ಹೋಗಿ ಲವಾ೦ಕುಶರ ತೆರನೆಲ್ಲವನ್ನೂ ತಿಳಿಸಲು ಅದಕ್ಕೆ ಆತನು ಮನನೊಂದು ಜನಕ ವಿದೇಹಿಗಳೊಡನೆ ಪುಂಡರೀಕಿಣೀಪುರಕ್ಕೆ ಬಂದು ಸೀತಾದೇವಿಯನ್ನು ಕಂಡನು. ಆಕೆಯು ತಾಯಿ ತಂದೆ ಅಣ್ಣಂದಿರಿಗೆ