ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪ್ರಥಮಾಶ್ವಾಸಂ
೩

      ಕಂ || ಅಕಳಂಕಚ೦ದ್ರ ವಾಕ್ಚ್ಂ
            ದ್ರಿಕೆಯಿಂ ಧವಳಿಗೆ ದಿಗಂಬರ ಶ್ರೀ ಭವ್ಯ ||
            ಪ್ರಕರ ಚಕೋರಂ ನಲಿದುದು
            ಮುಕುಳಿತವಾಯ್ತನವಾದಿ ವದನಾಂಭೋಜಂ||

ಉ ||ಚಾರು ಚರಿತ್ರ ತೀರ್ಥಜಲದಿಂದಘಕರ್ದಮನಂ ಕಲ್ಪಿಸಂ |
     ಸಾರ ಸಮುದ್ರಮಂ ತೃಣಪಯುಕ್ತಣದಿಂದಿಕೆಯು ದಿವ್ಯಭಾ ||
     ಷಾರಸ ಪೂರ್ಣಮಂ ಶ್ರುತಸಯೋಧಿಯನೀಸಿದ ವರ್ಧಮಾನ ಭ |
     ಟ್ಟಾರಕರಂ ವಚಸ್ಸುರಭಿ ಚಂದನ ಚರ್ಚೆಗಳಿ೦ದಮರ್ಚಿಪೆಂ

     ಕಂ ॥ ವಿಮಲ ಶೃತಂ ಕೈವ
           ಲ್ಯ ಮೆಂಬ ಸಂಕಲ್ಪ ಮಿನಿತೆ ನೇರ್ಗಿಯಂ ವಿ ||
           ಶ್ವಮನಸಿನ ಮಹಿಮೆಯಿಂ ನ
           ರ್ಧಮಾನ ಜಿನಪತಿಗೆ ವರ್ಧಮಾನ ಮುನೀಂದ್ರಂ ||೧೫||

ಮ || ಸುರಿದಂತಾದುವು ಪೂವಿನಂಬು ವಿನಿವಿಲ್ ನಿಸ್ಸಾರಮಾದತ್ತು ಸೀ |
      ಕರಿವೋದತ್ತು ಮೃಣಾಳತಂತು ರಚಿತ ಜ್ಯಾರೇಖೆ ಮಾನಧ್ವಜಂ ||
      ಕೊರಗಿತ್ತಗ್ಗದ ಕಂತು ಸೀದ ಕರಿಯಂತಾದಂ ತಪೋರಾಜ್ಯ ತ |
      ತ್ಪರ ಯೋಗೀಶ್ವರ ಭಾಲಚಂದ್ರ ಮುನಿನಾಥ ಜ್ಞಾನನೇತ್ರಾಗ್ನಿಯಿ೦ ||೧೬||

ಮ||ಸ್ರ|| ಅರವಿಂದ ಸ್ಮರವಾಸ್ಯಂ ತಿಳಿಸೆ ಹೃದಯ ಸಂಶುದ್ಧಿಯಂ ಮಾನಸ೦ ಶ್ರಾಂ|
       ತ ರಸಾಧೀನಂ ಸಮಾಧಾನಮನಸೆ ತಪಸ್ತಮುತ್ತ ಕಾರ್ತ
       ಸ್ವರ ಶಾಖಾ ಲೀಲೆಯಂ ಪಾಲಿಸೆ ತನು ನಯನಂ ಕೊಟ್ಟರಿಂಮಾಡೆ ಕಾರು |
       ಣ್ಯರಸ ಪ್ರೋತ೦ಗಳಿ೦ ಲೋಕಮನೆಆಗಿಸಿದಂ ಬಾಲಚಂದ್ರ ವ್ರತೀ೦ದ್ರ||೧೭||

      ಕಂ || ಪ್ರಚುರ ಕಲ್ಯಾತರಕುಟಲ
            ರಚಂಚಲರ್; ಶುದ್ದ ಪಕ್ಷ ವೃತ‌ ದೋಷಾ ||
            ಪಚಯ ಪ್ರಕಾಶನೆ ಬಾ
            ಲಚ೦ದ್ರದೇವ ಪ್ರಭಾವವೇನಚ್ಚರಿಯೋ ||೧೮||


1. ಶ್ರುತಂ ಬಹು. ಗ. ಘ.
2. ನನೆವಿಲ್ ಎಂದು ಮಲ್ಲಿನಾಥ ಪುರಾಣದ ಮೊದಲನೆಯಾಶ್ವಾಸದ ೧೯ ನೆಯ ಪದ್ಯದಲ್ಲಿದೆ.
3. ಸೀದ ಗರಿ. ಗ. ಘ. ೧೬ ನೆಯ ಪದ್ಯವು ಕ. ಘ. ಚ. ಗಳಲ್ಲಿಲ್ಲ.
4. ಶೋಭಾ . ಗ. ಘ