ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪
ರಾಮಚಂದ್ರಚರಿತಪುರಾಣಂ

        ಕಂ|| ಮೂವತ್ತಾ ಅ೦ ಗುಣದಿಂ
             ಭಾವಜನಂ ಕಟ್ಟ ಪಟ್ಟ ವೆದರ್ ವೃಷಧೀ
             ಭಾವಿಪೊಡೆ ಮೇಘಚಂದ್ರ
             ತೈವಿದ್ಯ ರದೆಂತೊ ಶಾಂತರಸಮಂ ತಳೆದರ್

   ಮ||ಮುನಿನಾಥಂ ದಶಧರಧಾರಿ ದೃಢ ಸಂಶದ್ದು ಣ೦ದಿವ್ಯ ಬಾ |
        ಣ ನಿಧಾನ೦ನಿನಗಿಕ್ಷುಚಾಪಮಳಿನೀ ಹ್ಯಾ ಸೂತ್ರ ಮೊರೊಂದೆ |ಪೂ
        ವಿನ ಬಾಣಂಗಳವಯೆ ಹೀನನಧಿಕಂಗಾಕ್ಷೇಪಮಂ ಮಾಲ್ಕುದಾ
        ವ ನಯಂ ದೆರ್ಸಕ ಮೇಘಚ೦ದ್ರ ಮುನಿಯೊಳ್ ನಾಣ್ಯ ನಿನ್ನ ದೋರ್ದರ್ಪಮಂ ||
 
        ಕಂ || ಅಭಿನವ ಗಣಧರರೆನೆ ದಿ
               ವ್ಯ ಭಾಷೆಯಂ ತಾಳಿ ಕುಮತಮಂ ತಳ್ಳಿದರಂ ||
               ಶುಭಕೀರ್ತಿ ದೇವರಂ ಸಕ
               ಲ ಭುವನಜನ ಪೂಜ್ಯಪಾದರೆನ್ನದರೊಳರೇ ||೨೧||

   ಚ|| ಮದನನ ದರ್ಶನಂ ಕಿಡಿಸಿ ಮಾಣಿ ತಮ್ಮ ತಪಃಪ್ರಭಾವದಿಂ
        ಮದಯುತರಪ್ಪ ವಾದಿಗಳ ದರ್ಪಮನೋವಧಿಸಿತತ್ಸಭಾ ||
        ಸದರಭಿವರ್ಣಿಪಂತು ತಪದಿಂ ಶ್ರುತದಿಂ ಭುವನಪ್ರಸಿದ್ಧಿಗಾ |
        ಸ್ಪದರೆನಿಸಿರ್ದರೆಂಬೆನಯೆಂ ಪೊಗಳಲ್ ಶುಭಕೀರ್ತಿದೇವರಂ || ೨೨||

   ಉ|| ಕೂಡಿಡೆ ವಾಸುಪೂಜ್ಯ ಮುನಿಯೊಳ್ ಮರುಳಾದಸೆ ಚಿತ್ತ ಜನ್ಮ ನೀ೦ |
        ನೋಡ ನಿಜಾಪ್ತ ವರ್ಗದಳವಂ/ಮಲಯಾನಿಲನಸ್ಥಿರಂ ರಣ ||
        ಕ್ರೀಡೆಗೆ ನಿಲ್ಟನೇ ಪರಚ್ಛತಂ ನಿನಗಪ್ಪನೆ! ಯುದ್ಧದೊಳ್ ಬಿಗು |
        ರ್ತೊಡದೆ ಮಾಣ್ಣನೇ ಮೃಗಧರಂ ಮಧುಪಂ ಪ್ರಥನಕ್ಕೆ ಯೋಗ್ಯನೇ ||೨೩||

  ಶಾ || ಆವೊಂ ವಾದಿ ಕಥಾತ್ರಯ ಪ್ರವಣದೋಳ್, ವಿದ್ವಜ್ಜನಂ ಮೆಚ್ಚೆ ವಿ |
         ದ್ಯಾವಷ್ಟಂಭಮನಸ್ಸು ಕೆಯ್ದು | ಪರವಾದಿ ಕ್ರೋಣಿಚ್ಛತ್ರ ಕ್ಷಮಂ ||
         ದೇವೇಂದ್ರಂ ಕಡಿದಂದದಿಂದೆ ಕಡಿದಂ ಸ್ಯಾ ದ್ವಾದ ವಿದ್ಯಾಸ್ರ್ತದಿಂ |
         ತೈವಿದ್ಯಶ್ರುತಕೀರ್ತಿ ದಿವ್ಯಮುನಿವೋಲ್ ವಿಖ್ಯಾತಿಯಂ ತಾಳಿದಂ || ೨೪ ||


1. ಪೆಟ್ಟವೆಳದರ್‌. ಕ. ಖ.; ಪೆಟ್ಟವೇಳದ. ಗ. ಘ. ಚ. ೧೯ ನೆಯ ಪದ್ಯವು ಮಲ್ಲಿನಾಥ ಪುರಾಣದಲ್ಲಿ ಮೊದಲನೆಯಾಶ್ಚಾಸದ ೨೧ ನೆಯ ಪದ್ಯವಾಗಿದೆ ; ಮತ್ತು ಶ್ರವಣಬೆಳೊಳದ ಶಾಸನದ ೪೨ ನೆಯ ಪುಟದಲ್ಲಿದೆ.
2. ಳುಮೆ .ಗ. ಘ. ೨೦ ನೆಯ ಪದ್ಯವು ಶ್ರ|| ಬೆ|| ಶಾ|| ೩೪ ನೆಯ ಪುಟದಲ್ಲಿದೆ.
3. ಶುಭಚಂದ್ರ. ಕ. ಖ. ೨೪ ನೆಯ ಪದ್ಯವು ಶ್ರ|| ಬೆ|| ಶಾ॥ ೧೪ ನೆಯ ಪುಟದಲ್ಲಿದೆ.