ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೧. WAYLyn ಕಾಯರು ವಿಜಯ ಇಷ್ಟರಲ್ಲಿ ಆ ಗುಂಪಿನಲ್ಲಿದ್ದ ಧೈತ್ಯಶಾಲಿಯೊಬ್ಬನು ಒಂದು ಕೋಲಿನಿಂದ ಗೂಳಗೆ ಬಲವಾಗಿ ಕೆಲವು ಏಟುಗಳನ್ನು ಹಾಕಲು ಅದಕ್ಕೆ ಹೆದರಿಕೆಯುಂ ಟಾಗಿ ಹುಚ್ಚನನ್ನು ಬಿಟ್ಟು ಓಡಿಹೋಯಿತು, ಆದುದರಿಂದ ಹುಚ್ಚನಿಗೆ ಬಂದಿ ದ ಆಪತ್ತು ತಪ್ಪಿತು. ಈ ಸಾಹಸಕೃತ್ಯವನ್ನು ಮಾಡಿದಾತನು ಇಂತಹವ ನಂದು ಪಾಠಕರು ಊಹಿಸಲಾರರಲ್ಲವೆ? ಈತನು ವಿಜಯಸಿಂಹನೇ ಹೊರ ತು ಮತ್ತೆ ಯಾರೂ ಅಲ್ಲ. ಜನರು ವಿಜಯಸಿಂಹನ ಧೈಲ್ಯವನ್ನು ಹೊ ಗಳಿಕೊಳ್ಳುತ್ತಾ ತಮ್ಮ ತಮ್ಮ ಕೆಲಸಗಳಿಗೆ ಹೊರಟುಹೋದರು. ಹುಚ್ಚ ನು ತನ್ನ ಕೂತಿಯನ್ನು ಹಿಡಿದುಕೊಂಡು ಸುಮ್ಮನೆ ಹೊರಟುಹೋಗುತ್ತಿ ದ್ದನು. ಅಷ್ಟರಲ್ಲಿ ಒಬ್ಬ ವೃದ್ದನು ಬಂದು “ ನಿನಗೆ ಉಪಕಾರಮಾಡಿದ ವನಿಗೆ ಏನಾದರೂ ಪ್ರತ್ಯುಪಕಾರಮಾಡದೆ ಹೀಗೆ ಸುಮ್ಮನೆ ಹೊರಟು ಹೋಗುವುದು ಸರಿಯೇ ?” ಎಂದು ಕೇಳಲು ಹುಚ್ಚನು ತನ್ನ ಕೈಯಲ್ಲಿ ಟ್ಟುಕೊಂಡಿದ್ದ ಒಂದು ಉಂಗುರವನ್ನು ವಿಜಯಸಿಂಹನಿಗಾಗಿ ಕೊಟ್ಟು ಬಿಟ್ಟು ತನ್ನ ದಾರಿಯನ್ನು ಹಿಡಿದನು, ಆ ವೃದ್ದನು ವಿಜಯಸಿಂಹನ ಬಳಿಗೆ ಓಡುತ್ತ ಬಂದು“ ಅಯ್ಯಾ ಮಹನೀಯನೇ! ನೀನು ಆ ಹುಚ್ಚನಿಗೆ ವಾ ಡಿದ ಉಪಕಾರಕೋಸ್ಕರ ಅವನು ನಿನಗೆ ತನ್ನ ಕೃತಜ್ಞತೆಯನ್ನು ತೋರಿ ಸಲು, ಈ ಉಂಗುರವನ್ನು ಕೊಟ್ಟು ಕಳುಹಿಸಿರುವನು ” ಎಂದು ಹೇಳಿ ಬಲಾತ್ಕಾರದಿಂದ ಅದನ್ನು ಅವನ ಬೆರಳಿಗೆ ಇಟ್ಟು ಹೊರಟುಹೋದನು. ವಿಜಯಸಿಂಹನೂ ಮನಸ್ಸಿಲ್ಲದೆ ಆ ಉಂಗುರವನ್ನು ಧರಿಸಿಕೊಂಡು, ತನ್ನ ಕೆಲಸಕ್ಕೆ ಹೋದನು.