ಪುಟ:ರಾಯಚೂರು ವಿಜಯ ಭಾಗ ೧ .djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wwwswxrwwwkwwwmm. woor ಒಂಬತ್ತನೆಯ ಪ್ರಕರಣ ಎಸೆಯಲು ಅದು ಆ ಉಂಗುರವನ್ನು ಕೆಳಗೆಹಾಕಿ ಹಣ್ಣನ್ನು ತೆಗೆದು ಕೊಂಡಿತು. ಆಗ ಅನಂಗಸೇನೆಯು ಸಂತೋಷದಿಂದ ಆ ಉಂಗುರವನ್ನು ತಗೆದುಕೊಂಡು ತನ್ನ ಬೆರಳಗೆ ಇಟ್ಟುಕೊಂಡಳು. ಹುಚ್ಛನು ತನ್ನ ಕೋತಿಯನ್ನು ಕರೆದುಕೊಂಡು ಬೀದಿಗೆ ಬಂದ ಕೂಡಲೆ ಅವನಿಗಾಗಿ ಕಾದಿದ್ದ ಪೋಲಿಹುಡುಗರು ಚಪ್ಪಳ ಹಾಕುತ್ತ ಅವನ ಹಿಂದೆಹಿಂದೆ ಹೋಗುತ್ತಿದ್ದರು, ಹೀಗೆ ಸ್ವಲ್ಪ ದೂರ ಹೋಗಲಾಗಿ, ಗಂಗಣ ಎಂದು ಕಿರುಗಂಟೆಗಳನ್ನು ಧ್ವನಿಮಾಡುತ್ತ ಒಂದು ಬಸವನು ಆ ಮಾರ್ಗವಾಗಿ ಬರುತ್ತಿದ್ದುದು ಕಂಡುಬಂದಿತು. ಅದರ ಬಿಳಿಯಮ್ಮೆಯನ್ನೂ ಅಂದವಾದ ಕೊಂಬುಗಳನ್ನೂ ಮುದ್ದಾದ ಮುಖವನ್ನೂ ನೋಡಿದರೆ ಬಹಳ ಸಂತೋಷವಾಗುವಂತಿದ್ದಿತು. ಹುಚ್ಚನ ಹಿಂದೆ ಬರುತ್ತಿದ್ದ ಹುಡುಗರ ಗುಂಪನ್ನೂ ಅವರು ಮಾಡುತ್ತಿದ್ದ ಗಲಿಬಿಲಿಯನ್ನೂ ಕಂಡು ಆ ಗೂಳಿಯು ತನ್ನ ಕಿವಿಗಳನ್ನು ನೆಟ್ಟಗೆ ಮಾಡಿಕೊಂಡು ಬಾಲವನ್ನು ಅಲ್ಲಾಡಿಸುತ್ತ ಗುಟರೆಹಾಕಿತು. ಇಷ್ಟರಲ್ಲಿ ಹುಚ್ಚನೂ ಆವನ ಹಿಂದೆ ಇದ್ದ ಹುಡುಗರೂ ಸವಿಾಪವಾದರು. ಹುಡುಗರಲ್ಲಿ ತುಂಟನಾದವನೊಬ್ಬನು ತಾನು ಹೊದೆದ. ಕೊಂಡಿದ್ದ ಕೆಂಪುಬಣ್ಣದ ರೇಷ್ಮೆಯ ವಸ್ತ್ರವನ್ನು ಗೂಳಿಯ ಕಡೆಗೆ ಎಸೆದು ದರಿಂದ ಗೂಳಿಯು ಗುಟರೆಹಾಕುತ್ತಾ ಆ ಜನರ ಗುಂಪಿನ ಮೇಲೆ ನುಗ್ಗಿ ತು ಇಷ್ಟರಲ್ಲಿ, ವಕ್ರ ವಕ್ರವಾಗಿ ಮಸಿಯನ್ನು ಬಳಿದುಕೊಂಡಿದ್ದ ಹುಚ್ಚನೂ ಕೋತಿಯ ದೃಷ್ಟಿಗೆ ಬೀಳಲಾಗಿ, ಗಳಿಗೆ ಮತ್ತೂ ಹೆದರಿಕೆ ಹೆಚ್ಚಿತು. ಕೋತಿಯು ಪ್ರಾಣಭಯದಿಂದ ಹಾರಾಡುತ್ತ ತನಗೆ ಕಟ್ಟಿದ್ದ ಹುರಿಯನ್ನು ಕಿತ್ತು ಹಾಕಿಕೊಂಡು ಸವಿಾಪದಲ್ಲಿದ್ದ ಒಂದು ಮರವನ್ನು ಹತ್ತಿತು. ಹುಚ್ಚ ವಿಗೆ ಮಾತ್ರ ತಪ್ಪಿಸಿಕೊಳ್ಳಲು ಅವಕಾಶ ಸಿಕ್ಕದೆ ಅವನು ಕೊಡಲು ರಂಭಿಸಿದನು. ಗೂಳಿಯು ಅವನನ್ನು ತರುಬಿಕೊಂಡು ಹೋಗುತ್ತಿದ್ದಿತು. ಹುಚ್ಚನು ಸತ್ತನೆಂದು ಕೂಗಿಕೊಳ್ಳುತ್ತಾ ಜನರು ಹಿಂದೆಹಿಂದೆ ಹೋಗು ತಿದ್ದರೇ ಹೊರತು ಅವನನ್ನು ಬಿಡಿಸಿಕೊಳ್ಳುವುದಕ್ಕೆ ಒಬ್ಬನಾದರೂ ಪ್ರಯತ್ನಿಸಲಿಲ್ಲ. ಕಡೆಗೆ ಹುಚ್ಚನು ಮುಂದಕ್ಕೆ ಓಡಲು ಶಕ್ತಿಯಿಲ್ಲದೆ ಕೆಳಗೆ ಬಿದ್ದುಬಿಟ್ಟನು. ಗೂಳಿಯ ರೌದ್ರಾವೇಶದಿಂದ ಅವನನ್ನು ತಿವಿಯುವುದಕ್ಕೆ ತನ್ನ ಕೊಂಬುಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಿತು. ಡಿ. ಗಿ ಒ ಈ © ದಿ |