೧೦೦ ರಾಯರು ವಿಜಯ www 0 . ತಿದ್ದ ಭಿಕ್ಷಗಾರರು ಸಿಕ್ಕಿದಷ್ಟನ್ನು ಸಂಪಾದಿಸಿಕೊಂಡು ಹೋಗಬೇಕೆಂದು ಕಡೆಯ ಪ್ರಯತ್ನಗಳನ್ನು ನಡೆಯಿಸುತ್ತಿದ್ದರು, ಕೆಲವರು ವರ್ತಕರು ಕೃಪಶಿರೋಮಣಿಗಳೆಂಬುದನ್ನು ತಿಳಿಯದೆ ಅವರನ್ನು ಯಾಚಿಸಿ ಯಾಚಿಸಿ ಸ್ವಲ್ಪವಾದರೂ ಪ್ರಯೋಜನಹೊಂದದೆ ತಡೆಯಲಾರದಷ್ಟು ವ್ಯಸನವನ್ನು ಅನುಭವಿಸುತ್ತಾ ಕೆಲವರು ಭಿಕ್ಷುಕರು ತಮ್ಮ ತಮ್ಮ ಗುಡಿಸಲುಗಳನ್ನೂ ಹಾಳುಮಂಟಪಗಳನ್ನೋ ಅಥವಾ ಮುರುಕುಮನೆಗಳನ್ನೂ ಕುರಿತು ಹೋಗುತ್ತಿದ್ದರು, ಇನ್ನು ಕೆಲವರು ಯಾಚಕರು ದಯಾರಸಪೂರಿತರಾದ ದಾತೃಗಳನ್ನು ಯಾಚಿಸಿ ಅಲ್ಪಸ್ವಲ್ಪ ಪ್ರಯೋಜನವನ್ನಾದರೂ ಪಡೆದ ತಮ್ಮ ದೀನನಿವಾಸಸ್ಥಾನಗಳ ಕಡೆಗೆ ಹೋಗುತ್ತಿದ್ದರು, ಮತ್ತೊಂದು ಕಡೆ, ಐಶ್ವರ್ಯವಂತರಾದವರು ಕುದುರೆ ಎತ್ತುಗಳನ್ನು ಕಟ್ಟಿದ್ದ ಗಾಡಿಗಳಲ್ಲಿ ಕುಳಿತು ವಿಹಾರಕ್ಕಾಗಿ ಹೊರಟು, ಹಿಂದಿರುಗುತ್ತಿದ್ದರು." ಈ ಸಮಯದಲ್ಲಿ ವಿಜಯನಗರದ ಒಬ್ಬ ಹೂವಾಡಿಗನ ಅಂಗಡಿಯ ಮುಂಗಟ್ಟಿನಲ್ಲಿ ನಿಂತಿದ್ದ ಒಬ್ಬ ಯುವತಿಗೂ ಆ ಅಂಗಡಿಯವನಿಗೂ ಈ ಮುಂದೆ ಹೇಳುವಂತ ಸಲ್ಲಾಪವು ನಡೆಯುತ್ತಿದ್ದಿತು :- ಯುವತಿ-* ವಸಂತಾ ವಸಂತಾ ! ಏನುಮಾಡುತ್ತಿರುವೆ ? ಕೂಗಿ ದರೂ ಕೇಳಿಸುವುದಿಲ್ಲವೆ ? !! ವಸಂತ- ಮಾಲತೀವಿರಹಿತನಾದ ವಸಂತನು ಈ ರೀತಿಯಲ್ಲಿ ಕು ವುದರಲ್ಲಿ ವಿಶೇಷವೇನು ? ಬಾ, ಕುಳಿತುಕೊ " ವಾಂತಿ-“ ನಿನಗೆ ಯಾವಾಗಲೂ ಹುಡುಗಾಟವೇ ! 91 - ವಸಂತ-“ ಸುಂದರೀ ! ಕೋಪಮಾಡಬೇಡ, ಹದಿಹಾಸವನ್ನು ಈಾಡಿದರೆ ಕೋಪಿಸಿಕೊಳ್ಳುವವಳು ನೀನೊಬ್ಬಳೇ ಸರಿ ! ಈಗ ನೀನು ಇಲ್ಲಿಗೆ ಬಂದುದಕ್ಕೆ ಕಾರಣವೇನು ?” ಮಾಲತಿ-“ ವಸಂತ ನನಗೆ ಕೋಪವೇನೂ ಬರಲಿಲ್ಲ, ನನಗೆ ಈ ದಿನದ ಹೂವಿನ ದಂಡೆಯನ್ನು ಕೊಡುವೆಯಾ ??? ವಸಂತ-1ನಾನು ಕಟ್ಟಿಕೊಡುವ ಹೋದಂಡೆಗಳನ್ನು ನೋಡಿ ನಿಮ್ಮ ಯಜಮಾನಿಯವರು ಮೆಚ್ಚಿ ಕೊಂಡಿರುವರೋ ? ಇವುಗಳ ವಿಷಯವಾಗಿ. ನಿನಗೆ ಎಂದಾದರೂ ಏನಾದರೂ ಹೇvರುವರೋ ? ) _0 ದಿ.
ಪುಟ:ರಾಯಚೂರು ವಿಜಯ ಭಾಗ ೧ .djvu/೧೧೦
ಗೋಚರ