ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೆರಡನೆಯ ಪ್ರಕರಣ ಗಿರಿ ಯ ಸಹಾಯದಿಂದ ವಿಷಯವಲ್ಲವನ್ನೂ ತಿಳಿದುಕೊಂಡಳು, ಉಂಗುರಗಳು ವಿನಿಮಯವಾಗಿರುವುದನ್ನು ಮಂತ್ರಿಯು ಕಂಡು ಬೆರಗಾಗಿಹೋಗಿ ನಿರುಕ್ಕ ರನಾದನು. ರಾಯರು ಆತನನ್ನು ಕುರಿತು (f ಈಗ ಏನುಹೇಳುವಿರಿ ? ಈಗ ಉಾದರೂ ಕಾಗದವು ವಾಸ್ತವವಾದುದೆಂದು ನಂಬುವಿರಲ್ಲವೇ ?” ಎಂದು ಕೇಳಿದರು, ಅದಕ್ಕೆ ಮಂತ್ರಿಯು “ ನಂಬಬೇ ಕಾಗಿದೆ; ಅಂದರೆ ನಾನು ಈ ವರೆಗೂ ವಿಜಯಸಿಂಹನು ಇಂತಹವನೆಂದು ತಿಳಿದಿರಲಿಲ್ಲ; ಅವನನ್ನೇ ಅಲ್ಲಿಗೆ ಕರೆಯಿಸಿ ಕೇಳಿದರೆ ಏನುಹೇಳುವನೋ ? ೨೨ ಕೃ, ದೇ-“ ಇದುವರೆಗೂ ಉಪಕಾರವನ್ನು ಮಾಡಿರುವ ಅವನನ್ನು ನನ್ನ ಇದಿರಿಗೆ ನಿಲ್ಲಿಸಿಕೊಂಡು ವಧಾಜ್ಞೆ ಮಾಡುವುದು ಸರಿಯಲ್ಲ. ಉಂಗುರವೇ ಪ್ರತ್ಯಕ ಪ್ರಮಾಣವಾಗಿರುವುದರಿಂದ, ಅವನನ್ನು ಕರೆಯಿಸಿ ಕೇಳುವ ಆವಶ್ಯಕತೆಯೇ ಇಲ್ಲ ; ಅವನನ್ನು ನಾಳೆಯೇ ಶೂಲಕ್ಕೆ ಏರಿಸಿ ಬಿಡಬೇಕಂದು ಚಂಡಾರಿಗೆ ಆಜ್ಞಾಪತ್ರವನ್ನು ಕಳುಹಿಸಿಬಿಡಿ ” ಎಂದು ಹೇಳಿದರು. ಮಂತ್ರಿಯ ಆ ಮಾತಿಗೆ ಪ್ರತಿಯಾಡಲು ಪ್ರಯತ್ನಿಸಲಿಲ್ಲ. ಆದರೂ ಒಂದು ಆಲೋಚನೆಯು ಹೊಳೆದುದದಿಂದ ಆತನು ಇದು ಹೂವಿನ ದಂಡೆಯಲ್ಲಿದ್ದಿತೆಂದಲ್ಲವೇ ತಾವು ಅಪ್ಪಣೆಕೊಡಿಸಿದುದು ? ಹೂವಾಡಿಗನನ್ನು ಕರೆಯಿಸಿ ಕೇಳಿದರೆ ಏನಾದರೂ ಸಂಗತಿಗಳು ಹೊರಸರು ವುವೇನೋ ? ವಿಚಾರಿಸಿದರೆ ಒಳ್ಳೆಯದೆಂದು ನನ್ನ ಬುದ್ಧಿಗೆ ಹೊಳೆಯು ಇದೆ ಎಂದನು. ಕೃ, ದೇ-ಅಂತಃಪುರದೊಹಿಯನ್ನು ಬಿಟ್ಟುಬಿಡಬೇಕೆಂದು ನಿಮಗೆ ಅಭಿಪаಯವಿರುವುದೇನ ? ಉಂಗುರಗಳನ್ನು ವಿನಿಮಯಮಾಡಿಕೊಂಡಿರು ಪುದನ್ನು ಕಂಡೂ ಇಷ್ಟೊಂದು ಸಂಶಯವೇಕ ? 11 ಮಂತ್ರಿ-“ ಮಹಾಸ್ವಾಮಿಯವೆರ. ಕೇಳೆಣವಾಗಬೇಕು, ನಿಸು ದುಪ್ಪನಿಗ್ರಹಕ್ಕೆ ಎಂದಿಗೂ ಹಿಂದೆಗೆಯುವವನಲ್ಲ ವೆಂದು ಚಿತ್ರಕ್ಕೆ ವೇದ್ಯವ

.. * * * * \ , New S & S 2. ಕುಸಿತವನ್ನು ವರಿಸಿ ಟwರVKು ಆ• ಆಜ್ಞಾಪತ್ರವನ್ನು ಬರೆದು ಕಳುಹಿಸಿಬಿಡಿ, ?”