ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿಮೂರನೆಯ ಪ್ರಕರಣ ht my ಏಕ್ಷ ಯಿಸಿಕೊಂಡಳು. ಮಾಲತಿಯ ತನ್ನ ಒಡತಿಯ ಆಪತ್ಕಾಲದಲ್ಲಿ ಆಕೆಯೊಡನೆಯೇ ಇದ್ದುಕೊಂಡಿರಬೇಕೆಂದು ನಿರ್ಧರಿಸಿದಳು, ಆದುದರಿಂದ ಆದಿನ ರಾತ್ರಿಯೇ ಅನಂಗಸೇನೆ ಮಾಲತಿಯರು ವಿಜಯನಗರವನ್ನು ಬಿಟ್ಟು ಹೊರಟುಹೋದರು. ಸ್ವಜನರು ಆ ಸಮಾಚಾರವನ್ನು ಕೇಳಿದ ಕೂಡಲೆ ಆನಂಗಸೇನೆಯು ವಾಸ್ತವವಾಗಿಯೂ ಅಪರಾಧಿನಿಎಂದೇ ಭಾವಿಸಿಕೊಂಡರು. ಹದಿಮೂರನೆಯ ಪ್ರಕರಣ, ಮತ್ತೊಂದು ಸಭೆ. ಮಂತ್ರಃ ಕಾರ್ಯಾನುಗೋ ಯೇಷಾಂ ಕಾರ್ಯ ಸ್ವಾಮಿಹಿತಾನುಗಮ | ತ ಏತೇ ಮಂತ್ರಿ ರಾಜ್ಞಾ೦ ನ ಯೋ ಗಶಪಲ್ಲವಾಃ || ಆನೆಗೊಂದಿಯಲ್ಲಿ ಮತ್ತೊಂದುಸಲ ಪ್ರಹರೇಶ್ವರಾದಿಗಳ ಸಭೆಯು ಸೇರಿತು, ಪೂರ್ವದ ಸಭೆಯಲ್ಲಿ ಆಗಿದ್ದಂತೆಯೇ ಈ ಸಭೆಯಲ್ಲೂ ರಾಮ ಯನು ಅಧ್ಯಕ್ಷನಾಗಿದ್ದನು, ಆದರೆ ಈ ಸಭೆಗೆ ಮುಕ್ಕಾಂಬೆಯು ಮೂತ್ರ ಬಂದಿರಲಿಲ್ಲ, ಆಕೆಯನ್ನು ಸಭೆಗೆ ಬರುವಂತೆ ರಾಮಯನೂ ಒತ್ತಾಯ ಮಾಡಲಿಲ್ಲ, ರುದ್ರದೇವಾದಿಗಳು ಮುಕ್ತಾಂಬೆಯು ಬಾರದಿದ್ದುದಕ್ಕೆ ಕಾರ ಇಗಳನ್ನು ಊಹಿಸಿ ಸಾಕಾಯಿತು; ಆದರೂ ಕಾರಣತಿಳಿಯಲಿಲ್ಲ, ಕಟ್ಟ ಕಡೆಗೆ ರುದ್ರದೇವನು ರಾಮನನ್ನು ಕುರಿತು ' ಮುಕ್ಕಾಂಬೆಯು ಈ ಸಭೆಗೆ ಏಕೆ ಬರಲಿಲ್ಲ ? ಮೃದುಮಧುರವಾಗಿಯ ಸಯುಕ್ತಿಕವಾಗಿಯೂ ಮಾತನಾಡಿ ಕಾರ್ಯನಿಕ್ತ ಯಮಾಡುವುದಕ್ಕೆ ಆಕೆಗಿರುವ ಸಾಮರ್ಥವು ಅಸಾಧಾರಣವಾದುದು ಎಂದು ಹೇಳಿದನು. ಈ ಮಾತುಗಳನ್ನು ಕೇಳಿ, ಉತ್ತರಕೊಡದಿದ್ದರೆ ರುದ್ರದೇವನಿಗೆ ಕೋಪಬಂದೀತೆಂದು ತಿಳಿದು, ರಾಮಯನು ಮುಕ್ಕಾಂಬೆಯು ಈದಿನದ ಸಭೆಗೆ ಬಾರದಿರುವುದಕ್ಕೆ ಬಂದು ಪ್ರಬಲಕಾರಣವಿರುವುದು, ನೀಚತ್ತವು ಅತಿಚಂಚಲವಾದುದು, ಅವರಿದಿರಿಗೆ ಹೇಳದ ರಹಸ್ಯವು ಬಯಲಿಗೆ ಬರದಿ ರದು, ಆ ದಿನ ವಿಜಯಸಿಂಹನನ್ನು ಕೊಲ್ಲಬೇಕೆಂದು ನಾವು ಮಾಡಿದ ಆ ಲೋಚನೆಗಳೆಲ್ಲವೂ ಬಹಿರಂಗವಾಗಿ, ನಮ್ಮ ಉದ್ದೇಶವು ವ್ಯರ್ಥವಾದುದು