ಪುಟ:ರಾಯಚೂರು ವಿಜಯ ಭಾಗ ೧ .djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ ದ್ವಿತೀಯ ಭಾಗ ೧೫ ನೆಯ ಪ್ರಕರಣ C“ ತಾನೊಂದು ಬಗೆದರೆ ದೈವವೊಂದು ಬಗೆಯಿತು, 2) “ನೈವಾಕೃತಿಃಫಲತಿ ನವಕುಲಂ ನಶೀಲಂ | ವಿದ್ಯಾಪಿನೈವ ನಚಯತ್ನ ಕೃತಾಪಿ ಸೇವಾ | ಭಾಗ್ಯಾನಿಪೂರೈ ಕಪಸಾ ಖಲುಸಂಚಿತಾನಿ | ಕಾಲೇಫಲಂತಿ ಪುರುಷಸ್ಯ ಯಥ್ವವೃಕ್ಷಾಃ ||” “ಅನ್ಯಥಾ ಚಿಂತಿತುಕಾರಂ ದೈವಮನ್ಯು ಚಿಂತಯೇತ್ ? ಹೀಗೆ ಮುಕ್ಕಾಂಬರಾಮರಾಜರ ಸಹಾಯದಿಂದ ವಿಜಯಸಿಂಹನು ವಿಮುಕ್ತನಾಗಿ ವಿಜಯನಗರವನ್ನು ಸೇರಿ ಕೆಲವು ದಿವಸಗಳಾದಬಳಿಕ ಬಂದು ರಾತ್ರಿ ತನ್ನ ಹಾಸಿಗೆಯಮೇಲೆ ಮಲಗಿಕೊಂಡು ತನ್ನ ಮುಂದಿನ ಶುಭೋ ದಯವನ್ನು ಕುರಿತು ಗಂಧರ್ವ ನಗರಗಳನ್ನು ಕಲ್ಪಿಸಿಕೊಳ್ಳುತ್ತಿದ್ದನು. ಆ ದಿನ ಮುಕ್ತಾಂಬೆಯ, ಆಪತ್ತಿನಿಂದ ತನ್ನನ್ನು ರಕ್ಷಿಸುವುದಕ್ಕೆ ಮಾಡಿದ ಉಪಾ ಯಗಳನ್ನು ನೆನೆನೆನೆದು ಸಂತೋಷಪಟ್ಟು ಕೊಳ್ಳುತ್ತಿದ್ದನು. ರಾಜಮಂತ್ರಿ ಗಳಿಬ್ಬರೂ ತನ್ನ ವಿಷಯದಲ್ಲಿ ಅನುಗ್ರಹಹೊಂದಿದ್ದುದರಿಂದ ತಾನು ಮುಂದೆ ಉನ್ನ ತಪದವಿಯನ್ನು ಹೊಂದುವನೆಂದೂ ಆಗ ಮುಕ್ಕಾಂಬೆಯನ್ನು ಮದುವೆ ಮಾಡಿಕೊಂಡು ಸಂಸಾರ ಸುಖಸಾಮ್ರಾಜ್ಯವನ್ನು ಅನುಭವಿಸಬಹುದೆಂದೂ ಬಗೆಬಗೆಯಾಗಿ ಯೋಚಿಸಿಕೊಳ್ಳುತ್ತಿರಲು, ಉಂಗುರವನ್ನು ತರುವುದಕ್ಕಾಗಿ ಕಳುಹಿಸಿದ್ದ ರಾಜಭಟನು ಎಂದು ಅದನ್ನು ಕೇಳಿ ತೆಗೆದುಕೊಂಡು, ತಿರುಗಿ