೪) ಕರ್ಣಾಟಕ ಗ್ರಂಥಮಾಲೆ ಆ ನಾಲ್ಕು ದಿನಗಳಲ್ಲಿ ಅರಮನೆಯಿಂದಾಗಲೀ ಮಂತ್ರಿಯ ಮನೆಯಿಂದಾಗಲೀ ಯಾವ ವರ್ತಮಾನವೂ ಬರಲೇಯಿಲ್ಲ ತನ್ನ ವೃತ್ತಾಂತವನ್ನು ಸಾಂತವಾಗಿ ಅರಿಕೆಮಾಡಿಕೊಳ್ಳಲು ಚಕ್ರವರ್ತಿಗಳ ಬಳಿಗೆ ಕರೆದುಕೊಂಡು ಹೋಗ ಬೇಕೆಂದು ಕಾರಾಧಿಕಾರಿಗೆ ಪುನಃ ಪ್ರಾರ್ಥಿಸಿಕೊಂಡನು. ಸುಂಕದವನೊಡನೆ ಸುಖದುಃಖವನ್ನು ಹೇ ಕೊಂಡರೆ ಕೇಳುವನೆ ? ವಿಜಯಸಿಂಹನ ಪ್ರಾರ್ಥನೆ ಯನ್ನು ಆ ಅಧಿಕಾರಿಯು ಕಿವಿಗೆ ಹಾಕಿಕೊಳ್ಳಲೇ ಇಲ್ಲಿ ಚಕ್ರವರ್ತಿಗಳ ಸಂದರ್ಶನವು ತನಗೆ ಸಿಕ್ಕಿದರೆ ತನ್ನ ಆಸಕ್ಕನ್ನು ತೊಲಗಿಸಿಕೊಳ್ಳಬಹುದೆಂದು ತಿಳಿದುಕೊಂಡಿದ್ದನು ಆದರೆ ರಾಜಸಂದರ್ಶನವು ದೊರೆಯುವುದು ಹೇಗೆ ? ಸೂರ್ ಸಂದರ್ಶನವು ಲಭಿಸಿದರೆ ಚಳಿಯಬಾಧೆಯು ನಶಿಸುವುದು ಆದರೆ ಸಾಂದ್ರಮೇಫು ವೃಂದಗಳ - ಪ್ರತಿಬಂಧಿಸುತ್ತಿರಲು ಬಹಳ ತೊಲಗುವುದು ಹೇಗೆ ? ಆದುದರಿಂದ ವಿಜಯ ಸಿಂಹನು ತನಗೆ ಮರಣವು ನಿಶ್ಚಯವೇ ಎಂದು ನಿರ್ಧರಿಸಿಕೊಂಡನು. ಪ್ರತ್ಯರ್ಥಿಯಾದ ಮಹಾವೀರನ ಶಸ್ತ್ರಕ್ಕೆ ಗುರಿಮಾಡ ಬೇಕೆಂದಿದ್ದ ತನ್ನ ಶರೀರವನ್ನು, ಪಶುಪಾಯರಾದ ಮಾನವರನ್ನು ಕೊಲ್ಲುವ ಚಂಡಾಲನ ಕತ್ತಿಗೆ ಗುರಿಮಾಡಬೇಕಾಯಿತು ಎಂದು ದುಃಖವು ಕ್ಷಣಕ್ಷಣ ಹೆಚ್ಚು ತಿದ್ದು ಇದರಜೊತೆಗೆ ನಿರಪರಾಧಿಯಾದ ತನ್ನನ್ನು ಮಹಾಸ ವಾದವು ಮುಸುಕಿತಲ್ಲಾ ಎಂಬ ದುಃಖವು ಸಹಿಸಲಶಕ್ಯವಾದ ಸಂತಾಪವ ನ್ನುಂಟುಮಾಡುತ್ತಿತ್ತು, ಈ ದುಃಖದ ಮಧ್ಯದಲ್ಲಿ ಮುಕ್ಕಾಂಬೆಯ ಜ್ಞಾಪಕ ವು * ಗಂಡಸ್ಕೋಪರಿ ಸ್ಫೋಟಕ ' ವೆಂಬಂತೆ ಮನಸ್ಸಿನಲ್ಲಿ ಕೊರೆಯುತಿತ್ತು. ಯಾವ ಲಲನಾಮಣಿಯ ಬುದ್ಧಿ ಚಾತುರದಿಂದ ಸನ್ನಿಹಿತವಾದ ಮೃತ್ಯುವು ತೊಲಗಿತ್ತೊ ಅಂತಹವಳ ಸ್ನೇಹಫಲವನ್ನು ಅನುಭವಿಸದೆಯೇ ಸಾಯಬೇ ಕಾಗಿದೆಯಲ್ಲ ಎಂದು ಬಹಳವಾಗಿ ಕೊರಗಿದನು. ಅಂತಹ ಮುಕ್ಕಾಂಬೆ ಯನ್ನು ದುರಾತ್ಮರ ಕೈಯಲ್ಲಿಟ್ಟು ಸಾಯಬೇಕಲ್ಲಾ ಎಂಬ ಒಂದು ಸಂತಾಪವು ಬೇರೆ ಕೊರೆಯುತಿತ್ತು, ಹೀಗೆ ಪರಿತಪಿಸುತ್ತಿದ್ದಾಗ ಇಬ್ಬರು ಅವನಿದ್ದ
ಪುಟ:ರಾಯಚೂರು ವಿಜಯ ಭಾಗ ೧ .djvu/೧೩೮
ಗೋಚರ