ಕರ್ನಾಟಕ ಗ್ರಂಥಮಾಲೆ ರಿಂದಲೂ ಒಂದುಪಕ್ಷಕ್ಕೆ ವಿಜಯಸಿಂಹನಿಗೆ ಒಳ್ಳೆಯದೇ ಆದಾಯಿತು. ಅವನ ಕಣ್ಣುಗಳು ತೆರೆದಿದ್ದರೂ ದಾರಿಯುದ್ದಕ್ಕೂ ಅಲ್ಲಲ್ಲಿ ನಿಂತಿದ್ದ ಈರಪರಿಚಿತರನ್ನು ಗುರುತಿಸಲಾರದೆ ಹೋದುವು : ಪ್ರೇಕ್ಷಕರು ಮಾತ ನಾಡಿಕೊಳ್ಳುತ್ತಿದ್ದ ದೂಪಣೆಯನ್ನಾಗಲಿ ಭೂಷಣವನ್ನಾಗಲಿ ಅವನ ಕಿವಿ ಗಳು ಗ್ರಹಿಸಲಾರದಿದ್ದುವು ; ವಧ್ಯಾನದ ದುರ್ಗಂಧವನ್ನು ಫಣೇಂದ್ರಿ) ಯವು ಗ್ರಹಿಸಲಶಕ್ತವಾಗಿತ್ತು. ಸಂತತವಾಗಿ ಆ ದುರಾತ್ಮರ ಅಪವಿತ್ರಕರ ಸತ್ಯವು ಉಂಟಾಗಿದ್ದರೂ, ಆ ಚಂಡಾಲರ ಸಂಶಗಳು ತನ್ನ ಕೈಗಳನ್ನು ಬಂಧಿಸಿದ್ದರೂ ವಿಜಯಸಿಂಹನಿಗೆ ಬೇರೆ ಗೋಚರವಾಗುತ್ತಿರಲಿಲ್ಲ, ಹೀಗಿದ್ದ ವಿಜಯಸಿಂಹನನ್ನು ಚಂಡಾಲರು ಮಧ್ಯ ಸ್ಥಾನಕ್ಕೆ ಕರೆತಂದು ನಿಲ್ಲಿಸಿದರು. ಅಲ್ಲಿ ಎತ್ತರವಾದ ಕೆಲವು ವೃಕ್ಷಗಳದ್ದುವು. ಇವು ಸ್ಮಶಾನವಾಸಿಗ ಳಾದ ಕೆಲವು ಗೃಧು ಕಾಕಗಳಿಗೆ ಮನೆಯಾಗಿದ್ದುವು, ವಧಿತರಾದ ನಿರಾ ಗ್ಯರ ಅಸ್ಥಿರೋಮಗಳಿಂದಲೂ ದುರ್ಗಂಧದಿಂದಲೂ ಸ್ಮಶಾನವು ಭೀಭತ್ಸೆ ಜನಕವಾಗಿತ್ತು. ಆದರೂ ಆಶ್ಲೀಲಮನಸ್ಕರೂ, ಕಾರಭಾರರಹಿತರೂ, ಈರ್ಷ್ಯಾಟ್ಕರೂ, ಅನುತಾಪಸಂತಪ್ತರೂ ಆದ ಕೆಲವರು ಆ ಸ್ಥಳಕ್ಕೂ ಬಂದು ನೋಡುತ್ತಿದ್ದರು. ಇವರಲ್ಲಿ, ಅನುತಾಪದಿಂದಿದ್ದ ಕೆಲವರು ವಿಜಯಸಿಂಹ ನಿಗೆ ಒದಗಿದ್ದ ದುರ್ದೆಸೆಯಲ್ಲಿ ಅವನನ್ನು ಬಿಟ್ಟು ಹೋಗಲಾರದೆ ಕಂಬನಿಗರೆ ಯುತ್ತಾ ನಿಂತುಕೊಂಡಿದ್ದರು. ಇತರರು ವಧೆಯು ಯಾವಾಗ ಆದೀತೆಂದು ಕುತೂಹಲದಿಂದ ಕಾದುಕೊಂಡಿದ್ದರು. ಇಂತಹವರಲ್ಲಿ ರುದ್ರದೇವನೂ ಒಬ್ಬನು. ತನಗೆ ಪ್ರಬಲಪ್ರತ್ಯರ್ಥಿಯಾದ ವಿಜಯಸಿಂಹನ ಮರಣವಾಕ್ಕೆ ಯನ್ನು ಮುಕ್ತಾಂಬೆಗೆ ತಿಳಿಸಬೇಕೆಂದು ಅತ್ಯಂತ ಕುತೂಹಲದಿಂದ ಕಾದಿ ದ್ದನು, ಚಂಡಾಲರು ವಿಜಯಸಿಂಹನಿಗೆ ಕಟ್ಟು ಕಟ್ಟಿ ವಧ್ಯ ಸ್ಥಾನಕ್ಕೆ ಕರೆ ತಂದು ಒಂದು ಚಪ್ಪಡಿಯ ಮುಂದೆ ನಿಲ್ಲಿಸಿದರು. ತನ್ನ ಅಂತ್ಯಸವ ಯವು ಸನ್ನಿಹಿತವಾಯಿತೆಂದು ಭಾವಿಸಿ, ವಿಜಯಸಿಂಹನು ತಾನು ತಿಳಿದೂ
ಪುಟ:ರಾಯಚೂರು ವಿಜಯ ಭಾಗ ೧ .djvu/೧೪೨
ಗೋಚರ