ಪುಟ:ರಾಯಚೂರು ವಿಜಯ ಭಾಗ ೧ .djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯ ರು ವಿಜಯ ವಿಜಯಸಿಂಹನ ಆಕಾರವನ್ನು ಕಂಡು ಗೇಲಿಮಾಡಿದರು. ಇನ್ನು ಕೆಲವರು ಆಶ್ಚರದಿಂದ ಮೌನವಾಗಿ ನೋಡುತ್ತಿದ್ದರು ಮತ್ತೆ ಕೆಲವರು ಅಂತಹ ಸ್ಪುರದ್ರೂಪಿಯಾದ ಯೌವನಸ್ಥನಿಗೆ ಎಂತಹ ದೆಸೆಯದು ಟಾಯಿತು ಎಂದು ಮರುಗುತ್ತಿದ್ದರು. ವಿಜಯಸಿಂಹನ ಕೌ‌ ದಾರಾದಿ ಸುಗುಣಗಳನ್ನು ಕಂಡು ಹೊಟ್ಟೆ ಕಿಚ್ಚಿನಿಂದ ಪರಿತಪಿಸುತ್ತಿದ್ದ ಉಳಿದ ಕೆಲವರು ತಮ್ಮ ಹಗೆಗೆ ಬಂದ ಈ ಅವಸ್ಥೆಯನ್ನು ಕಂಡು ಹಿಗ್ಗುತ್ತಿದ್ದರು. ಆಹಾ ! ದೈವೇಚ್ಛೆಯು ಅಚಿಂತ್ಯವಾದುದಲ್ಲವೆ ? ತನ್ನ ಬಾಹುಪರಾಕ್ರಮದಿಂದ ಮಂತ್ರಿವಯ್ಯನನ್ನು ಆಕ್ರಮಿಸಿದ್ದ ಶತ್ರುಗಳನ್ನು ಬಡಿದಟ್ಟಿ, ತನಗೆ ಎದಿರಿಸಿದ್ದ ರುದ್ರದೇವನೇ ಮೊದಲಾದ ಶೂರರನ್ನು ದ್ವಂದ್ವ ಯುದ್ಧದಲ್ಲಿ ಪರಿಭವಿಸಿ, ಮಹಾರಾಜರ ಕೃಪೆಗೆ ಪಾತ್ರನಾಗಿ ಅನೇಕರ ಗೌರವವನ್ನು ಸಂಪಾದಿಸಿದ್ದ ವಿಜಯಸಿಂಹನು ಈಗ ಅಧಮರಾದ ಚಂಡಾಲರ ಕೈಗೆ ಸಿಕ್ಕಿ ವಧ್ಯ ಸ್ಥಾನಕ್ಕೆ ಹೋಗಿ ಕಟು ಕರ ಕತ್ತಿಗೆ ತಲೆಕೊಡುವ ಹಾಗಾದುದು ಎಂತಹ ವಿಪರೀತ ದೆಸೆ ; ವಿಜಯ ನಿಂಹನಿಗೆ ಈ ಸಂಕಟಸಮಯದಲ್ಲಿ ತನ್ನ ಪೂರಸ್ಮರಣೆಯುಂಟಾಗಲು, ರಾಜ ಮಂತ್ರಿಗಳ ಕಟಾಕ್ಷವನ್ನು ಪಡೆದಿದ್ದ ತಾನು ನಿರಪರಾಧಿಯಾಗಿದ್ದರೂ, ಈ ಅವಸ್ಥೆಗೆ ಗುರಿಯಾಗಬೇಕಾದುದು ದೈವಚಿತ್ರವೆಂದೂ, ಅದಕ್ಕಾಗಿ ಪರಿತಪಿ ಸುವುದರಿಂದ ಏನೂ ಪ್ರಯೋಜನವಿಲ್ಲವೆಂದೂ ಮನಸ್ಸನ್ನು ಗಟ್ಟಿ ಮಾಡಿ ಕೊಂಡು ಶಾಂತನಾಗಲು ಯತ್ನಿಸುತ್ತಿದ್ದನು. ಆದರೆ ಇಂತಹ ವಿಷಮಸಮ ಯದಲ್ಲಿ ಚಾಂಚಲ್ಯJಲವಾದ ಮನಸ್ಸು ಶಾಂತವಾಗಿರುವುದು ಹೇಗೆ ?.ಶ್ರನಃ ಪುನಃ ಅತ್ಯಂತ ವಿವೇಕಶಾಲಿಗಳಾದ ರಾಜಮಂತ್ರಿಗಳು ತನ್ನ ನಿರಪರಾಧಿತ್ವ ವನ್ನು ಕಂಡು ಹಿಡಿ ಮಲಾರರೆ ? ಕಂಡು ಹಿಡಿಯುವ ಮಾರ್ಗವು ಯಾವು ದು ? ಇವೇ ಮೊದಲಾದ ಅನೇಕ ಬಗೆಯ ಯೋಚನೆಗಳು ತಲೆದೋರುತ್ತ ಅದ್ದುವು ಮನಸ್ಸು ಹೀಗೆ ಅನ್ಯಥಾ ಪ್ರವೃತ್ತವಾಗಿರಲು ನೇತ್ರತಾದಿ ಜ್ಞಾನೇಂದ್ರಿಯಗಳು ವಿಷಯಗ್ರಹಣ ಮಾಡದೆ ಸ್ತಬ್ಧವಾಗಿದ್ದುವು. . ಇದ