ಕರ್ಣಾಟಕ ಗ್ರಂಥಮಾಲೆ ಈ ನೀಚನ ತುಚ್ಛವಾದ ಈ ಹರಟೆಯನ್ನು ಕೇಳಿ ವಿಜಯಸಿಂಹನಿಗೆ ಎದೆಬಡೆಯುವಂತಾಯಿತು. ಸಹಜಶೂರನಾದ ಆತನು-" © ದುರಾತ್ಮ ! ನಿನಗೆಷ್ಟು ಹರಟೆ ; ನಿನ್ನ ಕೆಲಸಕ್ಕೆ ನನ್ನ ಅಡ್ಡಿಯೇನೂ ಇಲ್ಲ, ನನ್ನ ತಲೆ ಯನ್ನು ಕತ್ತರಿಸಿಹಾಕು, ಶೂಲದಂತಿರುವ ಮಾತುಗಳಿಂದ ನನ್ನ ಮನಸ್ಸ ನೋಕೆ ನೋಯಿಸುವೆ ? ” ಎಂದು ಕೋಪದಿಂದ ಹೇಳಿದನು. ಇದನ್ನು ಕೇಳಿದಕೂಡಲೆ ಆ ಎರಡನೆಯ ಚಂಡಾಲನಿಗೆ ಕೋಪವು ಹೆಚ್ಚಿತು. " ಮೃತ್ಯು ಮುಖದಲ್ಲಿದ್ದರೂ ಇವನ ಕೊಬ್ಬು ಅಣಗಿದಂತಿಲ್ಲ. ನನ್ನ ಕತ್ತಿಯು ಇವನ ರಕ್ತವನ್ನು ಕುಡಿಯಬೇಕೆಂದು ಆತುರಪಡುತ್ತಿದೆ. ಬೇಗ ಹೊರಡಿಸು.” ಎಂದು ತನ್ನ ಜೊತೆಗಾರನಿಗೆ ಹೇಳಿದನು, ಆದರೆ ವಿಜ ಯಸಿಂಹನ ಆಕಾರವನ್ನೂ ವೇಷಭಾಷೆಗಳನ್ನೂ ಕಂಡು ಮನಕರಗಿದ್ದ ಮೊದಲನೆಯವನು ಪ್ರತಿಹೇಳಲಿಲ್ಲ. ಆಗ ವಿಚಾರಾರ್ತಿಯದಿಂದ ಮುಕ್ಕಾಯುಕ್ತ ವಿಚಾರಶೂನ್ಯನಾಗಿದ್ದ ವಿಜಯಸಿಂಹನು ಮೊದಲನೆಯ ಚಂಡಾಲನನ್ನು ನೋಡಿ “ ಅಯ್ಯಾ, ನನಗೆ ಒಂದುಸಾರಿ ಮಹಾರಾಜರ ದರ್ಶನವನ್ನುಂಟುಮಾಡಿಸಲು ಸಾಧ್ಯವೇ ? ? ಎಂದು ಕೇಳಿದನು. ಇದಕ್ಕೆ ಮೊದಲನೆಯವನು ಉತ್ತರ ಹೇಳಬೇಕೆಂದಿರು ವಷ್ಟರಲ್ಲೇ ಎರಡನೆಯವನು ಬಾಯಿಹಾಕಿ “ ಮಹಾಸ್ವಾಮಿಗಳಿಗೆ ಮಹಾ ರಾಜರ ಭೇಟಿ ಬೇರೆ ಆಗಬೇಕೇನೋ ? ಯಮಮಹಾರಾಜರವರ ದರ್ಶನವ ನೇನೋ ಮಾಡಿಸುವುದು ನಮಗೆ ಸಾಧ್ಯ ಮಹಾರಾಜರ ದರ್ಶನಕ್ಕೂ ನಮಗೂ ಸಂಬಂಧವಿಲ್ಲ ನನ್ನ ಮೇಲೆ ತೋರಿಸಿದ ಗರಕ್ಕೆ ತಕ್ಕ ಫಲವನ್ನು ಉಣ್ಣಲು ಸಿದ್ದನಾಗು, ಹೊರಡು.” ಎಂದು ಹೇಳಿದನು. ಅಲ್ಬನ ಸಹವಾಸವು ಸರಿಯಲ್ಲವೆಂದು ತಿಳಿದು “ ನಿಮ್ಮ ಕೆಲಸವನ್ನು ನೀವು ಮಾಡಿಕೊಳ್ಳಬಹುದು ” ಎಂದು ವಿಜಯಸಿಂಹನು ಉತ್ತರಹೇಳಿದನು. ಚಂಡಾಲರು ಮಧ್ಯಸ್ಥಾನಕ್ಕೆ ವಿಜಯಸಿಂಹನನ್ನು ಕರೆದುಕೊಂಡು ಹೊರಟರು. ದಾರಿಯಲ್ಲಿ ಕೆಲವರು ಚಂಡಾಲರ ಮಧ್ಯದಲ್ಲಿ ಹೋಗುತ್ತಿದ್ದ 6 0 ದಿ
ಪುಟ:ರಾಯಚೂರು ವಿಜಯ ಭಾಗ ೧ .djvu/೧೪೦
ಗೋಚರ