ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ ೧೫ ಕೊಂಡು ಬರಲು ಹೋಗಿದ್ದನು. ಅಸಾಧಾರಣಪ್ರಜ್ಞಾಶಾಲಿನಿಯಾದ ಮುಕ್ತಾಂಬೆಯು ತನ್ನ ಚಾತುರದಿಂದ ಅವನು ತಿಳಿದಿದ್ದ ಗುಟ್ಟನ್ನು ಹೀರಿ ಬಿಟ್ಟಳು. ಇದರಿಂದಲೇ ನಮ್ಮ ರಹಸ್ಯವು ಪ್ರತಿಕಕ್ಷಿಗಳ ಪಾಲಾಯಿತು. ಮುಕ್ತಾಂಬೆಯು ವಿಜಯ ಸಿಂಹನನ್ನೇ ವರಿಸಬೇಕೆಂದು ದೃಢಮನಸ್ಕ ೪ಾಗಿರುವುದರಿಂದ, ಅಷ್ಟು ಮುಖ್ಯವಾದ ರಹಸ್ಯವನ್ನು ತಿಳಿದೂ ಸುಮ್ಮ ನಿರುವಳೇ ? ನಮ್ಮ ಉಪಾಯಕ್ಕೆ ಪ್ರತಿಕ್ರಿಯೆಗಳನ್ನು ಮಾಡಿಯೇ ಮಾಡಿದಳು. ರುದ್ರದೇವನೇ ತನ್ನ ಕೆಲಸಕ್ಕೆ ಕಲ್ಲು ಎಳೆದುಕೊಂಡರೂ, ಅವನ ಕೆಲಸವನ್ನು ಇಲ್ಲಿಗೇ ಬಿಟ್ಟು ಬಿಡುವುದರಿಂದ ನಮ್ಮ ಉದ್ದೇಶವು ನಿದ್ದಿಸಲಾರದು. ನಮ್ಮಿಂದ ಆಗುವ ಸಕಲ ಪ್ರಯತ್ನಗಳನ್ನೂ ನಡೆಯಿಸಿ ಯೇ ನೋಡಿಬಿಡೋಣ ಪ್ರಯತ್ನಗಳು ನಮ್ಮ ಅಧೀನ ; ಫಲ ದೇವರ ಅಧೀನ ಕೆಲಸವು ಇಷ್ಟು ಕೆಟ್ಟಿದ್ದರೂ ನಾವು ದುಡುಕಿ ಪ್ರಯೋಜನವಿಲ್ಲ. ರುದ್ರದೇವನ ಅವಿವೇಕವು ನಮಗೆ ತಿಳಿದುಬಿಟ್ಟಿ ತೆಂದು ಅವನಿಗೆ ಗೊತ್ತಾ ದರೆ ಅವನು ಪಶ್ಚಾತ್ತಾಪದಿಂದಲೂ ನಾಚಿಕೆಯಿಂದಲೂ ನಿರುತ್ಸಾಹನಾಗಿ ನಮ್ಮ ಮುಂದಿನ ಪ್ರಯತ್ನಗಳಿಗೆ ಮನಸ್ಸು ಕೊಡದೆ ಹೋಗಬಹುದು. ಮುಕ್ಕಾಂಬೆಯ ತಂತ್ರಗಳು ನಮಗೆ ಗೊತ್ತಾಗಿವೆಯೆಂದು ಆಕೆಗೆ ನಮ್ಮ ಮಾತಿ ನಿಂದಲಾಗಲಿ, ಆಕಾರದಿಂದಲಾಗಲಿ ಸ್ಪಲ್ಪಮಟ್ಟಿಗೆ ವ್ಯಕ್ತವಾದರೂ ನಮ್ಮ ಮುಂದಿನ ಪ್ರಯತ್ನಗಳಿಗೆ ಅಗತ್ಯವಾಗಿ ಆಗಬೇಕಾಗಿರುವ ಆಕೆಯ ಸಹಾಯವು ಮುಕಾಂಬೆಯಿಂದ ದೊರೆಯಲಾರದು. ಆಕೆಯ ಪರೇಂಗಿತ ಜ್ಞತೆಯು ಅನನ್ಯ ಸಾಧಾರಣವಾದುದು. ಆದುದರಿಂದ ನಾವು ನಮ್ಮ ವ್ಯವ ಹಾರಗಳಲ್ಲಿ ಎಷ್ಟು ಮಟ್ಟಿಗೆ ಜಾಗ್ರತೆ !ಂದಿರಬೇಕೋ ಸೀನೇಯೋಚಿಸು ಈಗ ನಾವು ಮಾಡಬೇಕಾಗಿರುವ ಕಾಠ್ಯಗಳು ಅತ್ಯಂತ ಕಷ್ಟಸಾಧ್ಯವಾ ದುವು. ಮೊದಲು ಅನಂಗಸೇನೆಯನ್ನು ವಿಜಯನಗರ ಸಂಸ್ಥಾನದಿಂದ ಹೂಕಕ್ಕೆ ಕರೆದುಕೊಂಡು ಹೋಗಬೇಕು, ಅನಂತರ ಮುಕಾಂಬೆ ಒ ಇ.