ಪುಟ:ರಾಯಚೂರು ವಿಜಯ ಭಾಗ ೧ .djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಕರ್ಣಾಟಕ ಗ್ರಂಥಮಾಲೆ ಯನ್ನು ಇಲ್ಲಿಂದ ಹೊರಕ್ಕೆ ತಪ್ಪಿಸಿಕೊಂಡು ಹೋಗಲು ಉಪಾಯದಿಂದ ಒಪ್ಪಿಸಿ, ರಾಯಚೂರಿಗೆ ಕರೆದುಕೊಂಡು ಹೋಗಬೇಕು, ಆಮೇಲೆ ನಡೆ ಯಿಸಬೇಕಾದ ಕಾರ್ ಗಳ, ಫಲಗಳ ಆನುಷಂಗಿಕಗಳು, ನೆರವೇರಿದರೆ ಸಂತೋಷ, ಇಲ್ಲದಿದ್ದರೂ ಚಿಂತಿಸಬೇಕಾಗಿಲ್ಲ, ಆದುದರಿಂದ ಹಿಂದೆ ಮಂ ತ್ರಿಯು ಉಳಿದುಕೊಂಡದಕ್ಕಾಗಿಯೂ, ಈಗ ವಿಜಯಸಿಂಹನು ಬದುಕಿ ಕೊಂಡುದಕ್ಕಾಗಿಯ ನಾವು ಯೋಚಿಸಬೇಕಾಗಿಲ್ಲ, ನಮ್ಮ ಪ್ರಯಾಸ ಮಾತ್ರ ವ್ಯರ್ಥವಾದಂತಾಯಿತು. ಯೋಚಿಸಿನೋಡಿದರೆ, ಶತ್ರುಗಳಿಗೆ ಅಧಿಕ ವಾಗಿ ಮನೋವ್ಯಥೆಯನ್ನುಂಟುಮಾಡಿದುದರಿಂದ, ಅದೂ ವ್ಯರ್ಥವಾದಂತೆ ಆಗಿಲ್ಲ, ಈಗ ನಡೆಯಬೇಕಾಗಿರುವ ಕಾಠ್ಯಗಳಲ್ಲಿ ಮೊದಲನೆಯದಕ್ಕೆ ವಾಡ ಬೇಕಾಗಿರುವ ಸನ್ನಾ ಹಗಳೆಲ್ಲವನ್ನೂ ಆಗಲೇ ಮಾಡಿಯೇ ಇರುವೆನು. ಈ ಎರಡನೆಯ ಕಾವ್ಯವನ್ನು ನೆರವೇರಿಸಲು ಈ ಹುಚ್ಚನ ಸೋಗೇ ಸರಿ. ನಾನು ಇನ್ನು ಬಹಳ ಕಾಲ ಇಲ್ಲಿರುವುದಕ್ಕಾಗದುದರಿಂದ, ಈ ಫನಕಾರ ವನ್ನು ಬೇಗ ಮುಗಿಸಿಬಿಡಬೇಕಾಗಿದೆ ಸಾವಕಾಶಮಾಡಿದರೆ ವಿಪತ್ತು ತಪ್ಪದು ವಿಜಯಸಿಂಹನ ಉಳಿದುಕೊಂಡನು; ಉಂಗುರದ ವೃತ್ತಾಂತವು ಬಯಲಾಗಿ ನನ್ನ ಮೇಲೆ ಆ.ಗಲೇ ಕಣ್ಣಿಟ್ಟಿರುವ ತಿಮ್ಮರಸನು ನನ್ನನ್ನು ಧ್ವಂಸವಡಿಬಿಡುವನು. ಆದುದರಿಂದ ಈ ದಿನವೇ ನಿಮ್ಮನ್ನು ಈ ದುರ್ಗ ದಿಂದ ತಪ್ಪಿಸಿ ಕರೆದುಕೊಂಡು ಹೋಗುವೆನು. ಹೊರಡಲು ಸಿದ್ಧರಾಗಿರಿ ” ಎಂದನು. ಪಹರೇಶ್ವರ- ವಿಜಯಸಿಂಹನನ್ನು ಬಂಧಿಸಿದಾಗಿನಿಂದಲೂ ತಿಮ್ಮ ರಸನ ಕಣ್ಣು ನನ್ನ ಮೇಲೆಯ ಇರುವುದೆಂದು ಕೇಳಿರುವೆನು, ಆದುದರಿಂ ೧ ಈಗ ಹತ್ತು ಮಂದಿ ಕಾವಲುಗಾರರಿ ರುವರು; ನನ್ನ ಬಳಿಗೆ ಯಾರನ್ನೂ ಸುಲಭವಾಗಿ ಬರಗೊಡಿಸುತ್ತಿಲ್ಲ. ಆ ಭಟರಾದರೂ ಎಡೆಬಿಡದೆ ಕಾದುಕೊಂಡಿರುವರು. ಅವರನ್ನು ಮರುಳು ದಲ. ಒ