ಪುಟ:ರಾಯಚೂರು ವಿಜಯ ಭಾಗ ೧ .djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ರಾಯರು ವಿಜಯ ಗೊಳಿಸಿ ನಮ್ಮನ್ನು ಹೊರಕ್ಕೆ ಕರೆದುಕೊಂಡು ಹೋಗುವುದು ಅಸಾ ಧ್ಯವೆಂದು ತೋರುವುದು ”, ರಾಮಯ-* ಪ್ರಹರೇಶ್ವರ, ಹಾಗೆ ಸಂಶಯಪಡಬೇಡ. ಸುಲಭ ವಾಗಿ ನಿಮ್ಮೆಲ್ಲರ ಬಂಧನವನ್ನೂ ತಪ್ಪಿಸಿಬಿಡುವೆನು. ಆಗಲೇ ಅದಕ್ಕೆ ತಕ್ಕ ಉಪಾಯವನ್ನು ಸಿದ್ದ ಮಾಡಿಕೊಂಡಿರುವೆನು, ಆದರೆ ಅದನ್ನು ಯಾರಿಗೂ ಹೇಳುವುದಿಲ್ಲ, ಇದಕ್ಕಾಗಿ ನೀನು ಕೋಪಿಸಬೇಡ.' ಪ್ರಹರೇ-“ ತಾವು ಹೀಗೇಕೆ ಹೇಳುವಿರಿ ? ನನಗೆ ಕೋಪವೇಕ ಬರುವುದು ? ತಾವು ತಮಗೆ ಯುಕ್ತವೆಂದು ತೋರಿದ ರೀತಿಯಲ್ಲಿ ಪ್ರಯತ್ನ ನಡೆಯಿಸಬಹುದು, ನಾವು ಪ್ರಯಾಣಸನ್ನದ್ಧರಾಗಿ ಕಾದಿರುವವು.” -ರಾಮಯ-“ ಹಾಗೆ ಆಗಬಹುದು, ಮುಕ್ತಾಂಬೆಯನ್ನು ಈಗ ನೋಡಬೇಕಾಗಿದೆ. ಆದುದರಿಂದ ಆಕೆಯನ್ನು ಇಲ್ಲಿಗೆ ಸ್ವಲ್ಪಕರೆದು ಕೊಂಡು ಬಾ. ಆಕೆಯೊಡನೆ ಸ್ವಲ್ಪ ಮಾತಾಡಬೇಕಾಗಿದೆ.” ಎಂದು ಹೇಳ ಲು ಪ್ರಹರೇಶ್ವರನು ಮುಕ್ತಾಂಬೆಯನ್ನು ಅಲ್ಲಿಗೆ ಕರೆತಂದುಬಿಟ್ಟು ತಾನು ಬೇರೆ ಕೆಲಸದಮೇಲೆ ಹೊರಟುಹೋದನು. ಮುಕ್ಕಾಂಬೆಯು ರಾಮಯ ನನ್ನು ಕಂಡಕೂಡಲೆ-“ ಮಂತ್ರಿವಯ್ಯರೆ ! ಈಚೆಗೆ ತನ್ನ ಸಂದರ್ಶನವೇ ಆಗಲಿಲ್ಲ, ತಮ್ಮ ಕಾರಿಗಳು ಎಷ್ಟರಮಟ್ಟಿಗೆ ಫಲಿಸಿವೆ ? ಈಗ ನಾನು ಕೂಡ ಬೇಕಾದುದು ಏನಾದರೂ ಇದೆಯೇ ? ಅಪ್ಪಣೆಯಾಗಲಿ ” ಎಂದು ವಿನಯ ದಿಂದ ಕೇಳಿದಳು. ರಾಮಯ- ಅಮ್ಮಾ ! ಫಲೋನ್ಮುಖವಾಗಿದ್ದ ನನ್ನ ಪ್ರಯತ್ನಗಳು ನಿಪ್ಪಲವಾದುವು ; ಆದರೂ ಭವಿಷ್ಯವುಮಾತ್ರ ಕೊಡಲಿಲ್ಲ, ನಮ್ಮ ಉದ್ದೇಶ ವನ್ನು ಈಗಲೂ ಸಾಧಿಸಿಕೊಳ್ಳಬಹುದಾಗಿದೆ.” ಮುಕ್ತಾಂಬೆ- ಮಂತ್ರಿ ಶ್ರೇಷ್ಠರೇ ! ಹಾಗಂದರೇನು ? ತಮ್ಮ ಪ್ರಯತ್ನಗಳು ನಿಷ್ಪಲವಾದುವೇ ?”