ಕರ್ಣಾಟಕ ಗ್ರಂಥಮಾಲೆ MMAMMMwwwmM wnMMM ರಾಮಯ- ಸಂಪೂರ್ಣವಾಗಿಯ ನಿಪ್ಪಲವಾಗಲಿಲ್ಲ, ಆದರೂ ಉದ್ದೇಶಿಸಿದ್ದಂತೆ ನಡೆದಿದ್ದರೆ ನಮ್ಮ ಕೆಲಸವು ಮತ್ತೂ ಸುಲಭವಾಗುತ್ತಿತ್ತು. ಕೆಲಸವು ಸ್ಪಲ್ಪಮಟ್ಟಿಗೆ ಕೆಟ್ಟು ಹೋದುದರಿಂದ ನಾವುಗಳು ಈ ದಿನವೇ ಇಲ್ಲಿಂದ ತಪ್ಪಿಸಿಕೊಂಡು ಹೋಗಬೇಕಾಗಿದೆ. ಇಲ್ಲಿಯೇ ಇದ್ದರೆ ನಿಜವಾ ಗಿಯ ನನಗೆ ಕೇಡುಂಟಾಗುವುದು " ಮುಕಾಂಬೆ-“ ಇಲ್ಲಿಂದ ತಪ್ಪಿಸಿಕೊಂಡು ಹೋಗುವುದೆ ! ಅದೂ ಈದಿನವೇ ! ಎಂದು , ಪ್ರಬಲವಾದ ಸಂಶಯದಿಂದ ಭಾಂತಿಪಟ್ಟವಳಂತೆ ಕೇಳಿದಳು. ರಾಮಯ-೯ ಅಮ್ಮಾ ! ಇಷ್ಟು ಅನುಮಾನವೇಕ ? ನಿಮಗೆಲ್ಲಾ ರಾಜದ್ರೋಹಿಗಳ ಸಂಬಂಧವಿರುವುದೆಂದು ತಿಮ್ಮರಸನು ಈಗ ಚೆನ್ನಾಗಿ ನಂಬಿರುವನು, ಕೆಲವು ದಿನಗಳಿಗೆ ಹಿಂದೆ ನಾನೊಂದುಬಾರಿ ಹುಚ್ಚನವೇದ ವನ್ನು ಹಾಕಿಕೊಂಡು ಅವನಮನೆಗೆ ಹೋಗಿದ್ದ ವೇಳೆಯಲ್ಲಿ ಪ್ರಹರೇಕ್ಷ ರನು ರಾಜದ್ರೋಹಿಗಳಲ್ಲಿ ಮೊದಲಿಗನು (" ಎಂದು ಹೇಳುತ್ತಿದ್ದುದನ್ನು ಕಿವಿ ಯಾರೆ ಕೇಳಿದೆ. ಪ್ರಹರೇಶ್ವರನು ಇಲ್ಲಿಯೇ ಇದ್ದರೆ ಅವನಿಗಂತೂ ಸಾವು ತಪ್ಪದು, ಹೆಂಗುಸೆಂದು ನಿನ್ನನ್ನು ಬೇವಸಹಿತವಾಗಿ ಬಿಟ್ಟ ರೂ ಬಿಡಬಹುದು. ಒಂದುವೇಳೆ ಹಾಗೆಬಿಟ್ಟರೂ, ಹಿಂದಿನ ಗೌರವವು ಬೇರೆ ಉಳಿಯದು, ಗೌರವ ವನ್ನು ಕಳೆದುಕೊಂಡಬಳಕ ಬದುಕುವುದೂ ಬದುಕೇ ? ಇನ್ನು ಮೇಲೆ ಸಂ ಮೋಪಾಯದಿಂದ ರಾಜ್ಯವನ್ನು ಸಂಪಾದಿಸಬಹುದೆಂಬ ಆಸೆಯನ್ನು ಬಿಟ್ಟುಬಿಡು. ಪ್ರಹರೇಶ್ವರನು ಇಲ್ಲಿಂದ ತಪ್ಪಿಸಿಕೊಂಡು ಹೋಗಿ ಪ್ರಾಣವನ್ನುಳಿಸಿಕೊಳ್ಳ ಬೇಕೆಂದಿರುವನು. ಅವನು ಹೊರಟುಹೋದ ಬಳಕ ನೀನು ಒಬ್ಬಳೇ ಇಲ್ಲಿ ಇರುವುದರಿಂದ ಕೇಡು ಉಂಟಾಗಬಹುದು, ಶತ್ರುಗಳನ್ನು ಗೆದ್ದು ನಿನ್ನ ರಾಜ್ಯ ವನ್ನು ನಿನಗೆ ಪುನಃ ಸಂಪಾದಿಸಿಕೊಟ್ಟು, ಸ್ವಾಮಿಭಕ್ತಿಯನ್ನುಳಿಸಿಕೊಳ್ಳ ಬೇಕೆಂದಿರುವೆನು. ನೀನು ಇಲ್ಲಿಯೇ ಇದ್ದು ಬಿಟ್ಟರೆ ನಾನು ನನ್ನ ರಾಜಭಕ್ತಿ
ಪುಟ:ರಾಯಚೂರು ವಿಜಯ ಭಾಗ ೧ .djvu/೧೫೦
ಗೋಚರ