೧೯ ರಾಯರು ವಿಜಯ ಯನ್ನು ತೋರಿಸುವುದು ಹೇಗೆ ? ಪ್ರತಿಭಾಶಾಲಿನಿಯಾದ ನೀನು ನನಗೆ ಸಹಾಯಕಳಾಗದಿದ್ದರೆ ನನಗೆ ಕೈಕಾಲುಗಳೇ ಅಲ್ಲಾಡಲಾರವು. ನಿನ್ನ ಸಂದ ರ್ಕನಮೂತ್ರದಿಂದಲೇ ನಮ್ಮೆಲ್ಲರ ಬಲವೂ ಇಮ್ಮಡಿಸುವುದು, ಎಂತಹ ಕೆಲಸವನ್ನಾದರೂ ಲೀಲಾಮಾತ್ರದಿಂದ ಮಾಡಿಬಿಡುವೆವು ' ಎಂದು ಮನ ಗಾಣುವಂತೆ ಬೋಧಿಸಿದನು. ಮುಕ್ಕಾಂಬೆಯು ವಿವೇಕಶಾಲಿನಿ, ಪೂರಾಪರಜ್ಞಳು ; ಆದುದರಿಂದ ರಾಮಯನ ಬೋಧನೆಯನ್ನು ಅನುಸರಿಸಿದರೆ ಯಾವ ಸಾಧಕಬಾಧಕ ಗಳುಂಟಾಗುವುವೆಂದು, ಚೆನ್ನಾಗಿ ಮನಸ್ಸಿನಲ್ಲಿ ವಿಚಾರಮಾಡತೊಡಗಿದಳು. ರಾಜ್ಯನಾಶವಾದಮೇಲೂ, ರಾಜನುಗತಿಸಿದಬಳಿಕ, ಅನಿತರಸಾಧಾರಣ ವಾದ ಸಮಿಭಕ್ತಿಯಿಂದಲೂ, ಅಧ್ಯವಸಾಯದಿಂದಲೂ, ಅಸ್ವಾರ್ಥತೆ ಯಿಂದಲೂ, ಸಕಲವಿಧವಾಗಿ ಪ್ರಯತ್ನಿಸಿ, ಹೋಗಿದ್ದ ತನ್ನ ರಾಜ್ಯ ವನ್ನು ತನಗೆ ಸಂಪಾದಿಸಿಕೊಡಲು ಯತ್ನಿಸುತ್ತಿದ್ದ ರಾಮಯನು ವಿಶ್ವಾಸ ಯೋಗ್ಯನೆಂದೂ, ತಾನು ನಿರಾಕರಿಸುತ್ತಿದ್ದರೂ, ಅವನು ತನ್ನನ್ನು ಪ್ರೋತ್ಸಾ ಹಿಸುತ್ತಾ ಹೇಗಾದರೂ ಕಾವ್ಯ ಸಾಧನೆಯನ್ನು ಮಾಡಲು ಯತ್ನಿಸುತ್ತಿದ್ದ ಆತನು ತನ್ನ ಹಿತಚಿಂತಕನೆಂದೂ ನಿರ್ಧರಿಸಿದಳು ನಿರುಪಮಾನ ಪ್ರತಿಭಾಶಾಲಿಯಾದ ಆತನು ಹಿಡಿದ ಕೆಲಸವನ್ನು ಹೇಗಾದರೂ ಸಾಧಿಸದೆ ಬಿಡನೆಂದೂ, ಆತನ ಬುದ್ಧಿವಾದವನ್ನು ಮಾರುವುದರಲ್ಲಿ ತನಗೆ ಅಪಾಯ ಸಂಭವಿಸಿದರೂ ಸಂಭವಿಸಬಹುದೆಂದೂ ಯೋಚಿಸಿದಳು, ಇದೂ ಅಲ್ಲದೆ, ಆತನು ಮಾಡಿದ್ದ ಉಪಾಯಗಳಿಗೆ ತಾನು ಪ್ರತಿಕ್ರಿಯೆಮಾಡಿದ್ದರೂ ಅದ ಕ್ಯಾಗಿ ಸ್ವಲ್ಪವಾದರೂ ತನ್ನನ್ನು ದೂಷಿಸದೆಯ, ವಿಫಲಮನಸ್ಕನಾಗ ದೆಯೂ, ಸರ್ವಶಕ್ತಿಯನ್ನೂ ತನ್ನ ಪ್ರಯೋಜನಕ್ಕಾಗಿಯೇ ವಿನಿಯೋಗಿ ಸುತ್ತಿದ್ದುದು ಮುಕ್ಕಾಂಬೆಯ ಮನವನ್ನು ಕರಗಿಸಿ ಬಿಟ್ಟಿತು. ಆದುದರಿಂದ ಬಹಳ ಕಾಲದಿಂದಲೂ ಸ್ವಾಮಿಭಕ್ತಿ ಪರಾಯಣತೆಯಿಂದ ಕೆಲಸಮಾಡುತ್ತಿದ್ದ
ಪುಟ:ರಾಯಚೂರು ವಿಜಯ ಭಾಗ ೧ .djvu/೧೫೧
ಗೋಚರ