ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಕರ್ಣಾಟಕಗ್ರಂಥಮಾಲೆ ರಾಮಯನಂತಹವನಿಗೆ ಪ್ರತಿಹೇಳಿದರೆ ಕೃತಘ್ನು ತಾದೋಪಬರುವುದೆಂದು ತಿಳಿದು, ಕಡೆಗೆ, ರಾಮಯಳೊಡನೆ ತಪ್ಪಿಸಿಕೊಂಡು ಹೊರಟುಹೋಗಬೇ ಕಂದು ನಿರ್ಧರಮಾಡಿಕೊಂಡಳು. ತನಗೆ ರಾಜ್ಯ ಲಾಭವಾದಬಳಿಕ ಪಿ ಯ ನಾದ ವಿಜಯಸಿಂಹನನ್ನು ಮದುವೆಯಾಗಬಹುದೆಂತಲೂ, ಒಂದುವೇಳ ಸಾಹಸದಿಂದ ಕಾಲ್ಯ ಸಾಧನೆಯಾಗದಿದ್ದರೆ, ಚಕ್ರವರ್ತಿಯವರ ಪ್ರೀತಿಗೆ ಪಾತ್ರನಾಗಿದ್ದ ವಿಜಯಸಿಂಹನ ಮಲಕವಾಗಿ ರಾಜ್ಯ ಸಂಪಾದನೆ ಮಾಡಿ ಕೊಳ್ಳಬಹುದೆಂತಲೂ ಯೋಚಿಸಿದಳು. ಆದುದರಿಂದ ( ಮಂತ್ರಿ ಶ್ರೇಷ್ಠರೇ ! ತಮ್ಮ ಮಾತುಗಳನ್ನು ಕೇಳಿ ಬಹಳ ಸಂತೋಷವಾಯಿತು. ತಮ್ಮ ರಾಜಭಕ್ತಿಯ ಪರಾರ್ಥ ಬುದ್ಧಿಯ, ಅನನ್ಯ ಸಾಧಾರಣವಾದುವು. ತಮ್ಮಂತಹ ಹಿತಚಿಂತಕರು ನನಗೆ ಮತ್ತೆ ಯಾರಿರುವರು ? ತಮ್ಮಂತಹ ಮಂತ್ರಿಗಳು ನನಗೆ ಸಿಕ್ಕಿದುದು ನನ್ನ ಪೂರ್ವಜನ್ಮ ಪುಣ್ಯ. ಇನ್ನು ತಮ್ಮ ಮಾತನ್ನು ಮಾರಲಾರೆನು, ತಾವು ಹೇಳಿದಂತೆ ಮಾಡುವೆನು, ದುರ್ಗದಿಂದ ತಪ್ಪಿಸಿಕೊಂಡುಹೋಗುವ ಆಲೋಚನೆಗಳೆಲ್ಲವೂ ನಡೆದಿವೆಯೆ ? ಎಂದು ಕೇಳಿದಳು. ರಾಮಯ-* ರಾಜಪುತ್ರಿ! ಆ ವಿಷಯವನ್ನೆಲ್ಲಾ ಪರಾಲೋಚಿಸಿ ಉಪಾಯಗಳನ್ನೂ ಸಿದ್ಧ ಮಾಡಿರುವನು. ನೀವುಗಳು ಪ್ರಯಾಣಕ್ಕೆ ಸಿದ್ದರಾ ಗಿಲ ?” ಎಂದು ಹೇಳಿ ರಾಮಯನು ಹೊರಟುಹೋದನು.