ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನೇಳನೆಯ ಅಧ್ಯಾಯ. ಲಂಕಾದಹನ.. ಒ CC ಕರುಮಾಡಂ ಮೇರುವಂ ಪಲ್ಟಿದುದೊ ಚಟುಳದಾವಾಗ್ನಿ ಯೆಂಬಂದದಿಂನಿಂ || ದುರಿಯುತ್ತಿರ್ದತದಂ ಸುತ್ತಿದ ಧವಳಹಾರಂ ಸುಧಾವಾರ್ಧಿಯಂ ದು || ಸ್ತರದೌಜ್ಞಾಳೆ ಜಿಹ್ವಾ ಪರಿಕರಗಳುರ್ದಾಂಬಿನಂಕಣ್ಣ ದೇಂ ಭೀ | ಕರವಾಗಿರ್ದ್ದ ಲಂಕಾಪುರಮನುರಿಸೆ ನಾಲಾಗ್ನಿ ಯಿಂದಾಂಜನೇಯಂ ” || ಆನೆಗೊಂದಿಯಲ್ಲಿ ಒಂದು ದಿನ ಸಾಯಂಕಾಲ ಹುಚ್ಚನು ಸುತ್ತಾಡು ತಿದ್ದನು. ತುಂಟಹುಡುಗರು ಅವನನ್ನು ಮುತ್ತಿಕೊಂಡು ಬಗೆಬಗೆಯಾಗಿ ಬಾಧಿಸುತ್ತಿದ್ದರು. ಆದರೂ ಹುಚ್ಚನು ಅದನ್ನು ಸಹಿಸಿಕೊಂಡು ಪಕಪ ಕನೆ ನಗುತ್ತಿದ್ದುದರಿಂದ ಹುಡುಗರಿಗೆ ಮತ್ತಷ್ಟು ಪ್ರೋತ್ಸಾಹವುಂಟಾಗಿ ಇನ್ನೂ ಹೆಚ್ಚಾಗಿ ಚೇಷ್ಟೆ ಮಾಡುತ್ತಿದ್ದರು ಹೀಗೆ ಸುತ್ತುತ್ತಿರಲು ಹುಡು ಗರು ಹೆಚ್ಚು ಹೆಚ್ಚಾಗಿ ಗುಂಪ ಸೇರಿದರು. ಅವರು ಹೆಚ್ಚಾಗಿ ಬಾಧಿಸಿ ದಾಗ “ ದುಪ್ಪರೇ ! ನಾನು ಯಾರೆಂದು ತಿಳಿದಿರುವಿರಿ ? ನಾನು ಮಹಾವೀರ ನಾದ ಹನುಮಂತನು, ನೀವು ರಾಕ್ಷಸರು : ಲಂಕೆಯನ್ನು ಸುಟ್ಟು ರಾಕ್ಷಸ ರನ್ನು ಧ್ವಂಸಮಾಡಿದಂತೆ ನಿಮ್ಮನ್ನು ಅಪ್ಪಳಿಸಿಬಿಡುವೆನು.” ಎಂದು ಗಟ್ಟಿಸಿ ದನು. ಇದನ್ನು ಕಂಡು ಕೆಲವು ಹುಡುಗರು ಹೆದರಿದರು. ಆದರೆ ಕೂಡಲೆ ಹುಚ್ಚನು ಕಿಲಕಿಲನೆ ನಕ್ಕು ಬಿಟ್ಟು ದರಿಂದ, ಹುಡುಗರಿಗೆ ಭಯ ವೆಲ್ಲಾ ಹೋಯಿತು. ಹುಚ್ಚನು ಹೀಗೆ ತಿರುಗುತ್ತಾ ಶೈವಮಠಕ್ಕೆ ಹೋಗಿ ಕುಳಿತುಕೊಂಡನು. ಹುಡುಗರೂ ಅವನ ಸುತ್ತಲೂ ಕುಳಿತುಕೊಂಡರು. ಕೆಲವರು ದಿಟ್ಟ ರಾದ ಹುಡುಗರು ಅವನ ಜುಟ್ಟನ್ನೆಳೆಯುತ್ತಲೂ, ಮತ್ತೆ ಕೆಲವರು ಕಿವಿಯನ್ನು ಹಿಂಡುತ್ತಲೂ, ಹಿಂಸಮಾಡುತ್ತಿದ್ದರು. ಈ ಬಾಧೆ