ಪುಟ:ರಾಯಚೂರು ವಿಜಯ ಭಾಗ ೧ .djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರುವಿಜಯ ೨೩ ಕತ್ತಲೆ ಕವಿದುಕೊಳ್ಳುತ್ತಿತ್ತು. ಆಕಾಶದಲ್ಲಿ ಮೋಡಗಳು ಮುಜ್ಜಿಕೊಳ್ಳು ತಿದ್ದುವು, ಹುಡುಗರಿಗೆ ತಮ್ಮ ಹುಡುಗಾಟವನ್ನು ಬೇಗ ಮುಗಿಸಿಕೊಂಡು ತಮ್ಮ ತಮ್ಮ ಮನೆಗಳನ್ನು ಸೇರಬೇಕೆಂದು ಮನಸ್ಸಿತ್ತು. ಊರಿನ ಒಂದೆರಡು ಬೀದಿಗಳಲ್ಲಿ ಮೆರೆವಣಿಗೆಯಾದ ಬಳಿಕ ಪುರಜನರು ಈ ವಿನೋದವನ್ನು ನೋಡಿ ಗುಂಪು ಸೇರಲು, ಹುಡುಗರಿಗೆ ಮತ್ತೂ ಉತ್ತೇಜನವುಂ ಟಾಯಿತು, ಆಗ ಅವರು ಹುಚ್ಚನನ್ನು ಮತ್ತೂ ಪೀಡಿಸಲಾರಂಭಿಸಿ, ಕೆಲವು ಬೀದಿಗಳಲ್ಲಿ ಬೇಗಬೇಗ ಸುತ್ತಿಸಿದರು. ಆಗ ದಟ್ಟವಾಗಿ ಮೋಡಗಳು ಕವಿದುಕೊಂಡು ತಂಗಾಳಿ ಬೀಸಲಾರಂಭವಾಗಿತ್ತು, ಇನ್ನು ಕೆಲವು ನಿಮಿಷ ಗಳೊಳಗಾಗಿ ಬಿರುಗಾಳಿಯ ಬೀಸತೊಡಗಿತು. ಇಷ್ಟು ಹೊತ್ತಿಗೆ ದುರ್ಗ ರಕ್ಷಕಭಟರ ಮನೆಗಳಿದ್ದ ಬೀದಿಗೆ 8.'೦ದಿದ್ದನು. ಮಳೆಒ೦ದರ ತಮ್ಮ ವಿನೋದಕ್ಕೆ ವಿಘ್ನುವಾಗುವುದೆಂದು ನೆನೆದು, ಹುಡುಗರು ಹುಚ್ಚನನ್ನು ಕ್ರೂರವಾಗಿ ಬಾಧಿಸತೊಡಗಿದರು. ಆ ಬಾಧೆಯನ್ನು ತಾಳಲಾರದೆ ಗಾಳ ಬೀಸುತ್ತಿದ್ದ ದಿಕ್ಕಿನಲ್ಲಿದ್ದ ಒಂದು ಮನೆಯ ಮೇಲಕ್ಕೆ ನೆಗೆದು, ತನ್ನನ್ನು ಬಾಧಿಸುತ್ತಿದ್ದ ಹುಡುಗರನ್ನು ಅಣಕಿಸುವುದಕ್ಕಾಗಿ ವಿಕಟವಾಗಿ ಕುಣಿಯು ತೊಡಗಿದನು ಹುಡುಗರಿಗೆ ಇದರಿಂದ ಕೋಪವು ಹೆಚ್ಚಿ ಕಲ್ಲುಗಳನ್ನು ಬೀರಲಾರಂಭಿಸಿದರು. ಹಚ್ಚನು ಕಲ್ಲುಗಳ ಏಟುಗಳನ್ನು ತಡೆಯಲಾರದೆ ಮನೆಯಿಂದ ಮನೆಗೆ ನೆಗೆದಾಡುತ್ತಾ ಬಂದನು. ಇಷ್ಟರಲ್ಲಿ ಕೆಲವು ಮನೆಗಳು ಹೊತ್ತಿಕೊಂಡು ಉರಿಯಲಾರಂಭಿಸಿದುವು. ಊರಿನಲ್ಲೆಲ್ಲಾ ವಿಶೇಷವಾಗಿ ಗಲಭೆಯುಂಟಾಯಿತು. ತಮ್ಮ ಮನೆಗಳಿಗೆ ಬೆಂಕಿಬಿದ್ದಿರುವ ಸುದ್ದಿಯನ್ನು ಕೆ ೪, ದುರ್ಗದಲ್ಲಿದ್ದ ರಕ್ಷಕನಟರು ತಮ್ಮ ಹೆಂಡಿರುಮಕ್ಕಳನ್ನೂ ಮನೆ ಮಾರುಗಳನ್ನು ಉಳಿಸಿಕೊಳ್ಳಬೇಕೆಂದು ತಲ್ಲಣಗೊಳ್ಳಲಾರಂಭಿಸಿದರು. ಅವರಿಗೆ ಉಂಟಾದ ಅಂತಹ ವಿಷಮವಿಪತ್ತಿನಲ್ಲಿ ಸಮಯಸ್ಫೂರಿಯು ತೊಡೆದುಹೋಯಿತು ; ಕರ ವ್ಯಜ್ಞಾನವು ಕಂದಿಹೋಯಿತು ಆದುದರಿಂದ ೧.