೨೪ ಕರ್ಣಾಟಕ ಗ್ರಂಥಮಾಲೆ - © ದಿ ದುರ್ಗದ ಕಾವಲುಗಾರರೂ, ಅಧಿಕಾರಿಗಳೂ ತಮ್ಮ ಆಯುಧಗಳನ್ನು ಅಲ್ಲಲ್ಲೇ ಎಸೆದುಬಿಟ್ಟು ಮನೆಗಳ ಕಡೆಗೆ ಓಡಿದರು. ಇಷ್ಟು ಹೊತ್ತಿಗೆ ಹುಚ್ಚನ 'ಬಾಲಕ್ಕೆ ಕಟ್ಟಿದ್ದ ಬಟ್ಟೆ ಚಿಂದಿಗಳಲ್ಲಿದ್ದ ಎಣ್ಣೆಯೆಲ್ಲವೂ ಮುಗಿದು ಹೋಗಿ ಅವು ಕೆಳಗೆ ಉದುರತೊಡಗಿದುವು. ಬಲವಾಗಿ ಗಾಳಿ ಬೀಸುತ್ತಿದ್ದುದರಿಂದ ಉರಿಯುತ್ತಿದ್ದ ಈ ಚೆಂದಿಗಳು ಕೆಳಗೆ ನಿಂತಿದ್ದ ಜನಗಳ ಮೇಲೆ ಬಿದ್ದು ಅವರ ಬಟ್ಟೆಗಳಿಗೆ ಬೆಂಕಿ ಹೊತ್ತಿ ಸಿದುವು. ಉರಿಯುತ್ತಿದ್ದ ಮನೆಗಳಿಂದ ಕಿಡಿಗಳು ಹೊರಡುತ್ತಿದ್ದುವು. ಹೊಗೆಯು ಸಹಿಸಲಶಕ್ಯವಾಗಿತ್ತು. ಆದುದರಿಂದ ಜನರಲ್ಲಿ ಹಾಹಾಕಾರವೂ ಹೆದರಿಕೆಯ ಹೆಜ್ಜೆ ಅವರು ತಮ್ಮ ತಮ್ಮ ಮನೆಗಳನ್ನು ಸೇರಿಕೊಂಡರು. ಉರಿಯುತ್ತಿದ್ದ ಮನೆಗಳ ಜನರು ಜೀವಸಹಿತವಾಗಿ ತಪ್ಪಿಸಿಕೊಂಡರೆ ಸಾಕೆಂದು ದಿಕ್ಕು ದಿಕ್ಕಿಗೆ ಓಡುತ್ತಿದ್ದರು ; ದನಕರುಗಳ ತಮ್ಮ ಹಗ್ಗಗಳ ನ್ನು ಕಿತ್ತುಕೊಂಡು, ಅಂಬೇ ! ಎಂದು ಅರಚುತ್ತಾ, ಕಿವಿಗಳನ್ನೂ ಬಾಲಗ ಳನ್ನೂ ಎತ್ತಿಕೊಂಡು ನಾಗಾಲೋಟದಿಂದ ಓಡುತ್ತಿದ್ದುವು. ಸ್ವಲ್ಪ ಕಾಲದಲ್ಲಿಯೇ ಬಿರುಗಾಳಿಯು ಶಾಂತವಾಯಿತು. ಬೆಂಕಿಯ ಸ್ಪಲ್ಪಸ್ವಲ್ಪವಾಗಿ ತಗ್ಗುತ್ತ ಬಂತು, ಆಗ ದಯಾಳುಗಳಾದ ಪುರಜನರು ಧೈಲ್ಯವನ್ನು ತಂದುಕೊಂಡು ಬೆಂಕಿಯನ್ನು ಸಂಪೂರವಾಗಿ ಆರಿಸಲು ಸಹಾ ಯ ಮಾಡತೊಡಗಿದರು. ತಮ್ಮ ಬಂಧುಗಳು ಸಿಕ್ಕದೆ ತಪ್ಪಿಸಿಕೊಂಡಿದ್ದ ಕೆಲವರು ಪರರು ತಮ್ಮ ಬಂಧುಗಳನ್ನು ಹೆಸರುಹಿಡಿದು ಕೂಗುತ್ತಾ ಹುಡುಕುತ್ತಿದ್ದರು. ಕೆಲವರು ಪರೋಪಕಾರಶೀಲರು ಮನೆಮಾರುಗಳನ್ನು ಕಳೆದುಕೊಂಡಿದ್ದವರಿಗೆ ಅನ್ನ ಬಟ್ಟೆಗಳನ್ನು ಒದಗಿಸಲು ಹವಣಿಸುತ್ತಿದ್ದರು. ಪುರರಕ ಣಾಧಿಕಾರಿಯು ಆ ಅನಾಹುತವೆಲ್ಲಾ ಹುಚ್ಚ ನಿಂದಲೇ ನಡೆಯಿತೆಂದು ಕೇಳಿ, ಅವನನ್ನು ಹಿಡಿತರಬೇಕೆಂದು ದೂತರನ್ನು ಕಳುಹಿದನು ಇತ್ತ ದುರ್ಗದಲ್ಲಿ ಆಶ್ಚಯ್ಯ ಕರವಾದ ಫುಟನೆಯೊಂದು ನಡೆದು ಹೋಗಿತ್ತು. ಹುಚ್ಚನು ಮನೆಯಿಂದ ಮನೆಗೆ ನೆಗೆಯುತ್ತಾ, ಹೊಗೆಯು ೧೦ 0 ದಿ ಒ '
ಪುಟ:ರಾಯಚೂರು ವಿಜಯ ಭಾಗ ೧ .djvu/೧೫೬
ಗೋಚರ