ಪುಟ:ರಾಯಚೂರು ವಿಜಯ ಭಾಗ ೧ .djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯ ರು ವಿಜಯ 8 M - N m ದಿ ಸಮಿಗಳು ನಾನು ನಿರಪರಾಧಿಯೆಂಬುದನ್ನು ವಿವಯ್ಯಾಪೂರಕವಾಗಿ ತಿಳಿ ದುದಕ್ಕಾಗಿ ತನಗೆ ಬಹಳ ಕೃತಜ್ಞನಾಗಿರುವೆನು.” ಕೃಷ್ಣದೇವರಾಯರು- ವಿಜಯಸಿಂಹ ! ಮುಕ್ಕಾಂಬೆಯ ದೆಸೆ ಯಿಂದ ನಿನ್ನ ನಿರಪರಾಧಿತ್ರವು ತಿಳಿಯಬಂತು, ಆಕೆಯು ಈ ಕಾಗದ ವನ್ನು ಸಕಾಲದಲ್ಲಿ ಬರೆದು ಕಳುಹಿಸದಿದ್ದರೆ, ಪ್ರಮಾದವು ನಡೆದು ಹೋ ಗುತ್ತಿತ್ತು. ನಮಗೆ ಬರುತ್ತಿದ್ದ ಅಪಕೀರಿಯನ್ನು ತಪ್ಪಿಸಿದುದಕ್ಕಾಗಿ ಮುಕ್ತಾಂಬೆಗೆ ನಾವು ಬಹಳ ಕೃತಜ್ಞರಾಗಿರುವೆವು, ನಿನಗೆ ನಾವು ಅವ ಜ್ಞತೆಯಿಂದುಂಟುಮಾಡಿದ ಮನೋವ್ಯಥೆಗೆ ಕಿಂಚಿನ್ಮಾತ್ರ ಪ್ರತಿ ಫಲರೂಪ ವಾಗಿ ನಿನಗೆ ಬೇಕಾದ ವರವನ್ನು ಅನುಗ್ರಹಿಸಬೇಕೆಂದಿರುವೆವು ; ಬೇಕಾ ದುದನ್ನು ಕೇಳು.” ಮುಕ್ಕಾಂಬೆಯ ಹೆಸರನ್ನು ಕೇಳಿ ವಿಜಯಸಿಂಹನಿಗೆ ಮನಸ್ಸಿನಲ್ಲಿದ್ದ ಸಂಕಟವೆಲ್ಲವೂ ಶಾಂತವಾಯಿತು. ತನ್ನ ನಿರಪರಾಧಿತ್ವವು ಸ್ಥಿರಪಟ್ಟಿ ತೆಂಬ ಸಂತೋಷದಿಂದ ಮನೋವ್ಯಥೆಯೆಲ್ಲವೂ ಮರೆತುಹೋಯಿತು. ಚಕ್ರವರ್ತಿಯವರು ತಾವಾಗಿ ಕೊಡಬೇಕೆಂದು ಇದ್ದ ವಲನನ್ನು ಪಡೆಯ ದಿರುವುದು ಯುಕ್ತವಲ್ಲವೆಂದು ತಿಳಿದು, “ ಮಹಾಸ್ವಾಮಿಯವರ ಕರು ಣಾರಸಕ್ಕೆ ಪಾತ್ರನಾಗಿರುವುದರಿಂದಲೇ ನನ್ನ ಸಾಭೀಷ್ಟಗಳ ಕೈಗೂಡಿ ದುವೆಂಬ ತೃಪ್ತಿಯುಂಟಾಗಿದೆ. ಆದರೂ ತಾವು ದಯಪಾಲಿಸಬೇಕೆಂದಿರುವ ವರವನ್ನು ಮುಂದೆ ಪಡೆದುಕೊಳ್ಳಲು ಆನುಜ್ಞೆಯಾಗಬೇಕು ” ಎಂದು ವಿನಯದಿಂದ ಕೇಳಿಕೊಂಡನು. ವಿಜಯಸಿಂಹನ ವಿನಯವಾಕ್ಕುಗಳನ್ನು ಕೇಳಿ ಚಕ್ರವರ್ತಿಯವರಿಗೆ ಬಹಳ ಆನಂದವಾಯಿತು. ಅಪ್ಪಾಜಿಯವರನ್ನು ನೋಡಿ “ ಅವಿಚಾರದಿಂದ ಅನಂಗಸೇನೆಗೂ ಬಹಳವಾಗಿ ಮನೋವ್ಯಥೆಯನ್ನುಂಟುಮಾಡಿದೆವು. ಆಕೆ ಯು ಅವಮಾನವನ್ನು ತಾಳಲಾರದೆ ಪತ್ರಣವನ್ನು ತೊರೆದುಕೊಂಡಿರು ಟ